ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡ ಯುವರಾಣಿ ಮೀರಾ. ಕಣ್ಮರೆಯಾಗಿದ್ದ ನಮ್ಮನೆ ಯುವರಾಣಿ ಅಂಕಿತಾ ಅಮರ್ ಹೇಗೆ ವಾಪಾಸ್ ಬಂದಿದ್ದಾರೆ ಗೊತ್ತೇ??

23,531

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಕನ್ನಡ ಧಾರಾವಾಹಿಯಲ್ಲಿ ನಟಿಸುವ ಹೊಸ ಮುಖಗಳು ತಮ್ಮ ಉತ್ತಮ ಅಭಿನಯದಿಂದ ಜನರ ಮನೆ ಮಾತಾಗುತ್ತಿದ್ದಾರೆ. ಇಲ್ಲಿ ಕೆಲವು ನಟಿಯರು ಬರಿ ನಟನೆ ಮಾತ್ರವಲ್ಲ, ನೃತ್ಯ ಸಂಗೀತ ಸೇರಿದಂತೆ ಇತರ ಪ್ರತಿಭೆಯನ್ನೂ ಹೊಂದಿರುವುದು ವಿಶೇಷ. ಅಂಥವರಲ್ಲಿ ಒಬ್ಬಳು, ಕನ್ನಡಿಗರ ಮೆಚ್ಚಿನ ಮನೆಮಗಳು ಅಂಕಿತಾ ಅಮರ್.

ಹೌದು, ನಮ್ಮನೆ ಯುವರಾಣಿ ಯಲ್ಲಿ ಮೀರಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಅಂಕಿತಾ ತುಂಬು ಗಲ್ಲದ ಚಲುವೆ, ಅವಳ ನಗುವಿನಲ್ಲೇ ಅವಳ ಮುಗ್ದತೆ ಎದ್ದು ಕಾಣುತ್ತದೆ. ಈಕೆ ಕೇವಲ ನಟಿ ಮಾತ್ರವಲ್ಲ, ಅದ್ಭುತ ನೃತ್ಯಗಾತಿ, ಗಾಯಕಿ ಕೂಡ. ಹಾಗಾಗಿಯೇ ಇತ್ತೀಚಿಗೆ ಕಲರ್ಸ್ ನಲಿ ಪ್ರಸಾರವಾಗಿದ್ದ ಎದೆತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿಯಾಗಿ ಆಯ್ಕೆಯಾಗಿ, ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಜನರಿಗೆ ತೋರಿಸಿದ್ದಾರೆ. ಅವರ ಅತ್ಯಂತ ಪ್ರಬುದ್ಧ ನಿರೂಪಣೆ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ಧೂ ಸುಳ್ಳಲ್ಲ. ಇಂತಿಪ್ಪ ನಟಿ ಅಂಕಿತಾ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ನಮ್ಮನೆ ಯುವರಾಣಿ ಹೊಸ ಬದಲಾವಣೆಯ ಹಿನ್ನೆಲೆಯಲ್ಲಿ ಅಂಕಿತಾ ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಆದರೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾಳೆ. ಹೌದು ಕನ್ನಡ ಗೊತ್ತಿಲ್ಲ ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರ ಅವರ ಎರಡನೇಯ ಚಿತ್ರವಾಗಿ ’ಅಬ ಜಬ ದಬ’ ಮುಡಿ ಬರಲಿದೆ. ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ನಟಿ ಅಂಕಿತಾ ತನ್ನ ಕನಸು ನನಸಾಗಿದೆ ಎದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ನಾಯಕನ ಪಾತ್ರದಲ್ಲಿ ಪೃಥ್ವಿ ಅಂಬರ್ ನಟಿಸಲಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಶಂಕರ್ ನಾಗ್ ಇರಲಿದ್ದಾರಂತೆ. ಈ ಹೊಸ ವಿಷಯದ ಬಗ್ಗೆ ಸಂಪೂರ್ಣ ವಿವರ ಬೇಕು ಅಂದ್ರೆ ಚಿತ್ರ ತೆರೆಕಾಣುವವರೆಗೆ ಕಾಯಲೇಬೇಕು. ಇನ್ನು ಈ ಚಿತ್ರದ ತಾರಾಗಣವೂ ಬಹಳ ದೊಡ್ದದು. ಸುಧಾರಾಣಿ, ಅಚ್ಯುತ್ ಕುಮಾರ್, ಮುಖ್ಯಮಂತ್ರಿ ಚಂದ್ರು ಮೊದಲಾದ ಅನುಭವಿ ನಟರುಗಳನ್ನು ಇದರಲ್ಲಿ ಕಾಣಬಹುದು. ಒಟ್ಟಿನಲ್ಲಿ ಪ್ರಥಮ ಬಾರಿಗೆ ನಾಯಕಿಯಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿರುವ ಅಂಕಿತಾ ಅಮರ್ ಅವರಿಗೆ ಆಲ್ ದಿ ಬೆಸ್ಟ್!