ಹಣವಿದ್ದರೆ ಏನು ಬೇಕಾದರೂ ಮಾಡಬಹುದೇ?? ಬಡ ಹಣ್ಣು ವ್ಯಾಪಾರಿಗೆ ಈ ಶ್ರೀಮಂತ ಮಹಿಳೆ ಏನು ಮಾಡಿದ್ದಾಳೆ ಗೊತ್ತೇ??

90

ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಹರಿದಾಡುವ ವಿಡಿಯೋಗಳು ಕೆಲವು ವ್ಯಕ್ತಿಗಳ ನಿಜಸ್ವರೂಪವನ್ನು ಬಯಲು ಮಾಡುತ್ತವೆ. ಆ ವಿಡಿಯೋಗಳು ಇಲ್ಲದಿದ್ದರೆ ಅವರನ್ನು ಜಡ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಇಂಥದ್ದೆ ಒಂದು ವಿಚಾರದ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ದುಡ್ಡು ಇದ್ದ ಮಾತ್ರಕ್ಕೆ ಏನೇ ಮಾಡಿದರೂ ಸಮಾಜ ಒಪ್ಪಿಕೊಳ್ಳುತ್ತದೆ ಎಂಬುದನ್ನು ಜನರು ತಮ್ಮ ಬುದ್ಧಿಮತ್ತೆಯಲ್ಲಿ ಅಳವಡಿಸಿಕೊಳ್ಳುವುದನ್ನು ನಿಲ್ಲಿಸಬೇಕು.

ಹೌದು ಗೆಳೆಯರೇ ಈ ವಿಡಿಯೋ ನಡೆದಿರುವ ಸ್ಥಳ ಮಧ್ಯಪ್ರದೇಶದ ಭೋಪಾಲ್. ಒಬ್ಬ ಮಹಿಳೆಯ ಕಾರಿಗೆ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುವ ವ್ಯಾಪಾರಿಯ ತಳ್ಳುಗಾಡಿ ತಾಗಿದೆ ಅಂತನ್ನಿಸುತ್ತೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಆ ಶ್ರೀಮಂತ ಮಹಿಳೆ ಎಲ್ಲಾ ಹಣ್ಣುಗಳನ್ನು ತಳ್ಳುಗಾಡಿ ಇಂತಹ ನೆಲಕ್ಕೆ ಎಸೆಯುತ್ತಿದ್ದಾಳೆ. ಬಹುತೇಕ ಎಲ್ಲಾ ಹಣ್ಣುಗಳನ್ನು ಕೂಡ ರೋಡಿಗೆ ಎಸೆದಿದ್ದಾಳೆ. ರೋಡಿನಲ್ಲಿ ಹೋಗುವ ದಾರಿಹೋಕರು ಪ್ರಶ್ನಿಸಿದಾಗ ಪದೇಪದೇ ಆ ಮಹಿಳೆ ತನ್ನ ಗಾಡಿಯತ್ತ ಬೊಟ್ಟು ಮಾಡಿ ತೋರಿಸುತ್ತಿದ್ದು ಕಂಡುಬಂದಿದೆ. ಪಾಪ ತನ್ನ ಜೀವನಾಧಾರವಾಗಿದ್ದ ಹಣ್ಣುಗಳನ್ನು ದಾರಿ ಪಾಲು ಆಗುತ್ತಿದ್ದುದ್ದನ್ನು ನೋಡಿ ವ್ಯಾಪಾರಿ ಸುಮ್ಮನೆ ಅಸಹಾಯಕನಾಗಿ ನಿಂತಿದ್ದ.

ಈ ವಿಡಿಯೋವನ್ನು ಅಲ್ಲೇ ನಿಂತಿದ್ದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇತ್ತೀಚೆಗಷ್ಟೇ ನಡೆದಿರುವ ವಿಡಿಯೋ ವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವಿರುದ್ಧ ಎಲ್ಲರೂ ಕಿಡಿಕಾರಿದ್ದಾರೆ. ಹಣದ ಅಹಂಕಾರ ಅವರನ್ನು ಹೀಗೆ ಆಡಿಸುತ್ತಿದೆ ಎಂಬುದಾಗಿ ಟೀಕಿಸಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಭೋಪಾಲ್ ಪ್ರದೇಶದ ಕಲೆಕ್ಟರ್ ಈ ವಿಡಿಯೋದಲ್ಲಿರುವ ಇಬ್ಬರನ್ನು ಕೂಡ ಕಂಡುಹಿಡಿದು ಯಾರು ತಪ್ಪಿತಸ್ಥರು ಎಂಬುದಾಗಿದೆ ಪರಿಶೀಲಿಸಿ ಅವರಿಗೆ ಶಿಕ್ಷೆಯನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ನೆಟ್ಟಿಗರಂತೂ ಹಣ್ಣು ಮಾರುವ ವ್ಯಾಪಾರಿಯ ಪರ ನಿಂತಿದ್ದು ಆ ಮಹಿಳೆಗೆ ಶಿಕ್ಷೆ ಆಗಲೇಬೇಕು ಎಂಬುದಾಗಿ ಪಟ್ಟುಹಿಡಿದಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದ್ದು ಯಾರ ತಪ್ಪು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.