ಇಡ್ಲಿಯನ್ನು ಸಾಲ ಕೇಳಿದ ಹುಡುಗನಿಗೆ ಹೋಟೆಲ್ ಓನರ್ ಮಹಿಳೆ ಮಾಡಿದ್ದೇನು ಗೊತ್ತೇ?? ಗ್ರಾಹಕರಿಗೂ ಕೂಡ ಕ್ಷಣ ಕಣ್ಣೀರು ಬಂತು.

2,293

ನಮಸ್ತೆ ಸ್ನೇಹಿತರೇ, ಒಳ್ಳೆಗುಣವಾಗಲಿ, ಬಡತನವಾಗಲಿ ಜನರನ್ನು ನೋಡಿ ಬರುವುದಿಲ್ಲ, ಹಾಗೆಯೇ ಒಬ್ಬ ವ್ಯಕ್ತಿಯನ್ನು ನೋಡಿ ಆತ ಒಳ್ಳೆಯವನೋ ಕೆಟ್ಟವನೋ ಎಂದು ಹೇಳಲೂ ಸಾಧ್ಯವಿಲ್ಲ, ಬಡತನದಲ್ಲಿರುವವರೇ ಸಾಕಷ್ಟು ಜನ ಮಾನವೀಯತೆಯನ್ನು ಮೆರೆಯುವವರಿದ್ದಾರೆ, ಸಿರಿತನದಲ್ಲಿ ಮಾನವೀಯತೆಯನ್ನು ಮರೆಯುವವರಿದ್ದಾರೆ! ಈ ಒಂದು ಕಥೆ ನಮ್ಮ ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡುತ್ತೆ.

ರಸ್ತೆ ಪಕ್ಕದ ಪುಟ್ಟ ಹೋಟೆಲ್ ಗಾಡಿ. ಅದನ್ನು ನಡೆಸುತ್ತಿದ್ದವಳು ಒಬ್ಬಳು ಮಹಿಳೆ. ಒಬ್ಬ ವ್ಯಕ್ತಿ (ಗೋವಿಂದ ಸ್ವಾಮಿ) ಬೆಳಗ್ಗೆ ತಿಂಡಿ ತಿನ್ನಲು ಈ ಸಣ್ಣ ಹೋಟೆಲ್ ಗೆ ಬರುತ್ತಾರೆ. ಅವರು ತಿಂಡಿ ತಿನ್ನುವಾಗ ಒಬ್ಬ ಪುಟ್ಟ ಬಾಲಕ, ಸುಮಾರು 10 ವರ್ಷದ ಹುಡುಗ ಒಂದು ಪಾತ್ರೆಯನ್ನು ಹಿಡಿದುಕೊಂಡು ಬಂದು 10 ಇಡ್ಲಿಯನ್ನು ಪಾರ್ಸೆಲ್ ಕೊಡಬೇಕಂತೆ, ಅಮ್ಮ ದುಡ್ಡನ್ನು ಮತ್ತೆ ಕೊಡುತ್ತಾರಂತೆ ಎಂದು ಕೇಳುತ್ತಾನೆ. ಇದನ್ನು ಕೇಳಿದ ಹೋಟೆಲ್ ಓನರ್ ಮಹಿಳೆ ಏನು ಮಾಡಿರಬಹುದು ಹೇಳಿ!?

ಹುಡುಗನ ಬಳಿ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸಾಂಬಾರ್ ಹಾಕುತ್ತಾ, ಈಗಾಗಲೇ ಸಾಲ ಕೊಡುವುದು ಸಾಕಷ್ಟಿದೆ. ಹೇಳು ಅಮ್ಮನಿಗೆ, ಆದರೂ ಈಗ ಇಡ್ಲಿ ಕೊಡುತ್ತೇನೆ ಎಂದು ಇಡ್ಲಿ ಸಾಂಬಾರ್ ನ್ನು ಕಟ್ಟಿಕೊಡುತ್ತಾಳೆ. ಇದನ್ನೇಲ್ಲಾ ಆಶ್ಚರ್ಯದಿಂದ ನೋಡುತ್ತಿದ್ದ ಆ ವ್ಯಕ್ತಿ ಮಹಿಳೆಯನ್ನು ಪ್ರಶ್ನಿಸುತ್ತಾನೆ ’ಅಲ್ಲಮ್ಮಾ, ನೀನೇ ಇಷ್ಟು ಕಷ್ಟದಲ್ಲಿ ಹೋಟೆಲ್ ನಡೆಸುತ್ತಿದ್ದಿ, ಇನ್ನು ಆ ಹುಡುಗನಿಗೆ ಬೇರೆ ಸಾಲ ಕೊಟ್ಟೆಯಲ್ಲ, ಅದೂ ಅಲ್ದೆ ಈಗಾಗಲೇ ಸಾಕಷ್ಟು ಹಣ ಕೊಡಬೇಕು ಎಂದು ಬೇರೆ ಹೇಳಿದೆ?’ ಮಹಿಳೆ ನಕ್ಕು ಉತ್ತರಿಸುತ್ತಾಳೆ..

’ಊಟ ಅಲ್ವಾ ಅಣ್ಣಾ.. ಇರಲಿ ಬಿಡಿ, ಹಣ ಎಲ್ಲಿ ಹೋಗತ್ತೆ, ಸ್ವಲ್ಪ ತಡವಾದರೂ ಹಿಂತಿರುಗಿಸುತ್ತಾರೆ. ನೀವು ಹೇಳಿದಾಗೆ ಕಷ್ಟಪಟ್ಟು ಹೋಟೆಲ್ ನಡೆಸುತ್ತಿದ್ದೇನೆ, ನಿಜ, ಆದ್ರೆ ನಾನು ಕಷ್ಟಪಟ್ಟು ದುಡಿದ ಹಣ ಎಲ್ಲಿಗೂ ಹೋಗುವುದಿಲ್ಲ, ಬಂದೇ ಬರುತ್ತದೆ. ಆ ತಾಯಿ ಮಕ್ಕಳಿಗೆ ಬಹಳ ಹಸಿವಾಗಿದ್ದರಿಂದ ಹೇಳಿ ಕಳುಹಿಸಿದ್ದಾರೆ. ನಾನು ಕೊಡುವುದಿಲ್ಲ ಎಂದರೆ ಆ ಮಕ್ಕಳು ಹಸಿವಿನಿಂದಲೇ ಇರಬೇಕಾಗುತ್ತದೆ. ಅದೂ ಅಲ್ದೇ ನಾನು ಇಡ್ಲಿ ಕೊಟ್ಟೆ ಕೊಡುತ್ತೇನೆ ಎನ್ನುವ ನಂಬಿಕೆಯಿಂದ ಕಳುಹಿಸಿದ್ದಾರೆ, ನನಗೆ ಆ ನಂಬಿಕೆ ಸುಳ್ಳುಮಾಡಲು ಇಷ್ಟವಿರಲಿಲ್ಲ, ಅದೂ ಅಲ್ದೆ ಆ ಪುಟ್ಟ ಹುಡುಗ ಬಂದು ಕೇಳಿದಾಗ ಇಲ್ಲ ಎನ್ನಲು ಆಗಲಿಲ್ಲ’ ಎಂದು ಉತ್ತರಿಸುತ್ತಾಳೆ. ತಾಯಿ ಹೃದಯ ಅಂದ್ರೆ ಇದೇ ಅಲ್ವೇ!?