ಸುದೀಪ್ ಹಾಗೂ ಅಪ್ಪು ಮದ್ಯೆ ಇರುವ ಫ್ಯಾನ್ ವಾರ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಖಡಕ್ ಆಗಿಯೇ ಉತ್ತರ ನೀಡಿದ ಕಿಚ್ಚ. ಭೇಷ್ ಎಂದ ಕನ್ನಡಿಗರು. ಹೇಳಿದ್ದೇನು ಗೊತ್ತೇ??

409

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವೆಲ್ಲ ಕಳೆದುಕೊಂಡು ಈಗಾಗಲೇ ಎರಡು ತಿಂಗಳಿಗೂ ಅಧಿಕ ಸಮಯಗಳು ಕಳೆದಿದೆ. ಅವರು ನಮ್ಮೊಂದಿಗೆ ಇಲ್ಲ ಎಂಬ ಕಟುಸತ್ಯವನ್ನು ಅರಗಿಸಿಕೊಳ್ಳಲು ಇಂದಿಗೂ ಕೂಡ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ.

ಕನ್ನಡ ಚಿತ್ರರಂಗದಲ್ಲಿ ಎಲ್ಲರೊಂದಿಗೆ ಕೂಡ ಸ್ನೇಹಭಾವದಿಂದ ಇದ್ದಂತಹ ಏಕೈಕ ಅಜಾತಶತ್ರು ನಟ ಎಂದು ಖಂಡಿತವಾಗಿಯೂ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಕೆಲವು ಸಮಯಗಳ ಹಿಂದೆ ಕಿಚ್ಚ ಸುದೀಪ್ ರವರ ಬಳಿ ಕೆಲವೊಂದು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವ ವಿಚಾರ ಕುರಿತಂತೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಖಡಕ್ ಆಗಿ ಉತ್ತರ ನೀಡಿದ್ದಾರೆ. ಉತ್ತರ ಖಂಡಿತವಾಗಿ ನೀವು ಕೂಡ ಮೆಚ್ಚುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ.

ಈ ರೀತಿಯಾಗಿ ಪ್ರಶ್ನೆ ಕೇಳಿದಾಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮೊದಲಿಗೆ ಪುನೀತ್ ರವರ ತೂಕ ಏನು ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ನಾವಿಬ್ಬರು ಕೂಡ ಚೆನ್ನಾಗಿದ್ದೇವೆ ಯಾರು ಸಾಮಾಜಿಕ ಜಾಲತಾಣಗಳಲ್ಲಿ ಅವರ ನಕಲಿ ಗುರುತಿನ ಮೂಲಕ ಟ್ರೋಲ್ ಮಾಡುತ್ತಿದ್ದಾರೆ ಎಂಬುದಾದರೆ ಅವರನ್ನು ಯಾಕೆ ಗಣನೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಹೇಳಿದ್ದಾರೆ. ಇದರಿಂದಾಗಿ ತಿಳಿಯುತ್ತದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ತೂಕ ಕನ್ನಡ ಚಿತ್ರರಂಗದಲ್ಲಿ ಏನಿತ್ತು ಎಂಬುದು. ಪ್ರತಿಯೊಬ್ಬ ಕಲಾವಿದನಿಂದಲೂ ಕೂಡ ಗೌರವವನ್ನು ಪಡೆದುಕೊಳ್ಳುತ್ತಿದ್ದಂತಹ ಬೆಟ್ಟದ ಹೂವು ನಮ್ಮ ಅಪ್ಪು. ಇಂದು ಅವರಿಲ್ಲದ ಕನ್ನಡ ಚಿತ್ರರಂಗ ಖಂಡಿತವಾಗಿಯೂ ಶೂನ್ಯ ಎಂಬಂತೆ ಭಾಸವಾಗುತ್ತಿದೆ.