ಬಿಗ್ ನ್ಯೂಸ್: ತಾನು ವಾಪಸ್ಸು ಬರೆದೆ ಇದ್ದರೂ ಕೂಡ ಆರ್ಸಿಬಿ ಗಾಗಿ ಕೊಹ್ಲಿ ಗಾಗಿ ಮ್ಯಾನೇಜ್ಮೆಂಟ್ ಜೊತೆಗೆ ಮಾತುಕತೆ ಆರಂಭಿಸಿದ ಎಬಿಡಿ. ಯಾಕೆ ಗೊತ್ತೇ??

1,190

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸುದ್ದಿ ಬಂದಾಗಲೆಲ್ಲ ನಮಗೆ ನೆನಪಾಗುವುದು ಅವರೊಬ್ಬರ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ಎಬಿ ಡಿವಿಲಿಯರ್ಸ್ ಅವರ ಕುರಿತಂತೆ. ಎಬಿ ಡಿವಿಲಿಯರ್ಸ್ ಮೂಲತಹ ಆಫ್ರಿಕಾದವರು ಆದರೂ ಕೂಡ ಅವರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ನಮ್ಮ ಭಾರತ ದೇಶದಲ್ಲಿ ಅದರಲ್ಲಿ ಕೂಡ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಇಷ್ಟೊಂದು ವರ್ಷಗಳ ಕಾಲ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದವರು ಎಬಿ ಡಿವಿಲಿಯರ್ಸ್.

ತಂಡ ಯಾವಾಗೆಲ್ಲಾ ಸಂಕಷ್ಟದ ಪರಿಸ್ಥಿತಿಯನ್ನು ತಲುಪಿದಾಗ ಗೆಲುವಿನ ದಡಕ್ಕೆ ತಲುಪಿಸುತ್ತಿದ್ದರು ಎಬಿ ಡಿವಿಲಿಯರ್ಸ್ ರವರು. ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಇಷ್ಟೊಂದು ಪ್ರಮುಖ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದ ಎಬಿ ಡಿವಿಲಿಯರ್ಸ್ ರವರು ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ನೀಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ. ಆದರೆ ಈಗ ಎಬಿ ಡಿವಿಲಿಯರ್ಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಕೆಲವೊಂದು ಚರ್ಚೆಗಳನ್ನು ಮಾಡಿದ್ದಾರೆ. ಹಾಗಿದ್ದರೆ ಈ ಚರ್ಚೆಗಳು ನಡೆದಿರುವುದು ಯಾವ ವಿಚಾರದ ಕುರಿತಂತೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನಕ್ಕೆ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ರವರಿಗೆ ಮರಳಿ ನಾಯಕತ್ವವನ್ನು ನೀಡಿ ತಂಡಕ್ಕೆ ಒಳ್ಳೆಯದಾಗುತ್ತದೆ ಆತನ ಸಾಮರ್ಥ್ಯವನ್ನು ಸಾಬೀತುಪಡಿಸುವಂತಹ ಅವಕಾಶ ನೀಡಿದಂತಾಗುತ್ತದೆ ಎಂಬುದಾಗಿ ಸಲಹೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ಮೆಂಟ್ ಎಬಿ ಡಿವಿಲಿಯರ್ಸ್ ರವರ ಈ ಮಾತನ್ನು ಎಷ್ಟರಮಟ್ಟಿಗೆ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.