ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಯಶ್’ ಪ್ರಶಾಂತ್ ನೀಲ್ ಸೇರಿದಂತೆ ಪ್ರಮುಖ ಕಲಾವಿದರು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ??

1,061

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಚಾಪ್ಟರ್ 2ರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಭಾಷೆಗಳ ಎಲ್ಲೆಯನ್ನು ಮೇಲೆ ಭಾರತ ಚಿತ್ರರಂಗದ ಅತ್ಯಂತ ಉನ್ನತ ಮಟ್ಟದಲ್ಲಿ ಮಿಂಚುತ್ತಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಬಂದಿದ್ದರೂ ಕೂಡ ಅದಕ್ಕಿರುವ ಜನಪ್ರಿಯತೆ ಹಾಗೆ ಬೇಡಿಕೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಇಂದು ನಾವು ಹೇಳಹೊರಟಿರುವ ವಿಚಾರ ಬೇರೆಯದೇ ವಿಚಾರಕ್ಕೆ ಸಂಬಂಧಿಸಿದ್ದು.

ಚಿತ್ರದ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ರವರು ಕಲಾವಿದರ ಆಯ್ಕೆಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ ಎನ್ನುವುದು ನಿಮಗೆ ಗೊತ್ತಿರಲ. ಚಿತ್ರದ ಕಥೆಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್ ರವರು. ಚಿತ್ರದ ನಾಯಕ ಯಶ್ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರ ಸಂಭಾವನೆಯ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಯಾರಿಗೆಲ್ಲ ಎಷ್ಟು ಕೋಟಿ ಸಂಭಾವನೆ ಸಿಕ್ಕಿದೆ ಎಂಬುದನ್ನು ತಿಳಿಯೋಣ ಬನ್ನಿ.

ಕೆಜಿಎಫ್ ಚಿತ್ರದಿಂದಲೇ ನಾಯಕನಟಿ ಶ್ರೀನಿಧಿ ಶೆಟ್ಟಿ ಅವರು ದಕ್ಷಿಣ ಭಾರತ ಚಿತ್ರರಂಗಕ್ಕೆ ಪರಿಚಿತರಾಗಿದ್ದು. ಕೆಜಿಎಫ್ ಚಿತ್ರದ ನಂತರ ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಕೂಡ ಶ್ರೀನಿಧಿ ಶೆಟ್ಟಿ ಅವರ ಪ್ರಮುಖ ಚಿತ್ರಗಳಲ್ಲಿ ಒಂದಾಗಿದ್ದು ಈ ಚಿತ್ರದಲ್ಲಿ ಬರೋಬ್ಬರಿ ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇವರ ನಂತರ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಂಡುಬರುವುದು ರಮಿಕ ಸೆನ್ ಪಾತ್ರದಲ್ಲಿ ರವೀನ ತಂಡನ್ ಹಾಗೂ ಅಧೀರ ಪಾತ್ರದಲ್ಲಿ ಸಂಜಯ್ ದತ್. ಪ್ರಮುಖ ವಿಲನ್ ಪಾತ್ರವನ್ನು ನಿರ್ವಹಿಸಿರುವ ಸಂಜಯ್ ದತ್ ರವರು 9ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅದೇ ರೀತಿ ರವೀನ ತಂಡನ್ ಕೂಡ ಒಂದರಿಂದ ಎರಡು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಕಾಶ ರಾಜ್ ರವರು 82 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಮಾಳವಿಕ ಅವಿನಾಶ್ ರವರು 60 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಕೂಡ ಹಲವಾರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಸಂಭಾವನೆಯ ಬಗ್ಗೆ ಅಷ್ಟೊಂದು ಅಧಿಕೃತವಾಗಿ ಮಾಹಿತಿಗಳು ಸಿಕ್ಕಿಲ್ಲ. ಕೆಜಿಎಫ್ ಚಾಪ್ಟರ್ 2 ದೊಡ್ಡಮಟ್ಟದ ಚಿತ್ರವಾಗಿರುವುದರಿಂದಾಗಿ ಅವರಿಗೂ ಕೂಡ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿರುವುದು ಗ್ಯಾರಂಟಿ.

ಈಗ ನಾವು ಮಾತನಾಡಲು ಹೊರಟಿರುವುದು ಚಿತ್ರದ ನಿರ್ದೇಶಕ ಆಗಿರುವ ಪ್ರಶಾಂತ್ ನೀಲ್ ಅವರ ಸಂಭಾವನೆ ಕುರಿತಂತೆ. ಇಂದು ಕೆಜಿಎಫ್ ಚಾಪ್ಟರ್ 2 ಚಿತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ ಎಂದರೆ ಖಂಡಿತವಾಗಿ ಅದಕ್ಕೆ ಮೂಲ ಕಾರಣ ಪ್ರಶಾಂತ್ ನೀಲ್ ರವರ ಯೋಚನೆ ಹಾಗೂ ಯೋಜನೆ. ಕೆಜಿಎಫ್ ಚಾಪ್ಟರ್ 2 ಗಾಗಿ ಪ್ರಶಾಂತ್ ನೀಲ್ ರವರು ಬರೋಬ್ಬರಿ 15 ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೊನೆಯದಾಗಿ ಚಿತ್ರದ ಪ್ರಮುಖ ಜೀವಾಳವಾಗಿರುವ ಚಿತ್ರದ ನಾಯಕ ನಟ ರಾಕಿಭಾಯ್ ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ ರವರ ಸಂಭಾವನೆ ಕುರಿತಂತೆ ಹೇಳಲು ಬಂದಿದ್ದೇವೆ. ಕೇವಲ ಪಾತ್ರ ಎಂದು ಭಾವಿಸದೆ ನಿಜವಾದ ವ್ಯಕ್ತಿಯಂತೆ ರಾಕಿಬಾಯ್ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಮೊದಲ ಅವತರಣಿಕೆಯ ನಂತರ ರಾಕಿಂಗ್ ಸ್ಟಾರ್ ಯಶ್ ರವರ ಬೇಡಿಕೆಯನ್ನುವುದು ಆಕಾಶವನ್ನು ತಲುಪಿದೆ. ಕೆಜಿಎಫ್ ಚಾಪ್ಟರ್ 2 ಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ರವರ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 25ರಿಂದ 27 ಕೋಟಿ ರೂಪಾಯಿ. ಇದರ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ