ಮದುವೆಯಾದ ಬೆನ್ನಲ್ಲೇ ಸಂಪೂರ್ಣ ಬದಲಾದ ಕತ್ರಿನಾ ಕೈಫ್, ಬದಲಾವಣೆ ಕಂಡು ಶಾಕ್ ಆದ ಅಭಿಮಾನಿಗಳು ಏನಂದ್ರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಇಡೀ ಭಾರತ ದೇಶದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಸುದ್ದಿ ಮಾಡಿರುವ ಮದುವೆಯೆಂದರೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆಯನ್ನು ಖಂಡಿತವಾಗಿ ಯಾವುದೇ ಸಂಶಯವಿಲ್ಲದೆ ಹೇಳಬಹುದಾಗಿದೆ. ಯಾಕೆಂದರೆ ಇವರಿಬ್ಬರ ಮದುವೆ ಆಗುವವರೆಗೂ ಕೂಡ ಯಾರಿಗೂ ಖಾತರಿ ಇರಲಿಲ್ಲ ಅಷ್ಟೊಂದು ಸೀಕ್ರೆಟ್ ಆಗಿ ಮದುವೆಯನ್ನು ಮಾಡಿ ಮುಗಿಸಿದ್ದರು.
ಅದೇನೇ ಇರಲಿ ಈಗ ಇವರಿಬ್ಬರು ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಜನಪ್ರಿಯರಾಗಿರುವ ದಂಪತಿಗಳಾಗಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇವರ ಮದುವೆ ವಿಡಿಯೋವನ್ನು ಕೂಡ ಬೃಹತ್ ಓಟಿಟಿ ಸಂಸ್ಥೆಯೊಂದಕ್ಕೆ 100 ಕೋಟಿ ರೂಪಾಯಿಗೆ ಮಾರಲಾಗಿದೆ ಎಂದು ಕೇಳಿಬರುತ್ತಿವೆ. ಈಗ ಇವರಿಬ್ಬರು ಬಾಲಿವುಡ್ ಮಂದಿಯ ನೆಚ್ಚಿನ ಜೋಡಿ ಗಳಾಗಿದ್ದಾರೆ. ಮದುವೆಯಾದ ನಂತರ ಇಬ್ಬರೂ ಜೋಡಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕ್ಯೂಟ್ ಫೋಟೋಗಳನ್ನು ಪೋಸ್ಟ್ ಮಾಡಿ ಅವರ ಅಭಿಮಾನಿಗಳಿಗೆ ಇನ್ನಷ್ಟು ಸಂತೋಷವನ್ನು ನೀಡುತ್ತಿದ್ದಾರೆ. ಈಗ ಬರುತ್ತಿರುವ ಸುದ್ದಿಯ ಪ್ರಕಾರ ಕತ್ರಿನಾ ಕೈಫ್ ರವರು ಮದುವೆಯಾದ ನಂತರ ಹೊಸ ವರಸೆಯನ್ನು ಪ್ರಾರಂಭಿಸಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಹಾಗಿದ್ದರೆ ಅದೇನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಲೇಖನಿಯನ್ನು ಕೊನೆವರೆಗೂ ಓದಿ.

ನಿಮಗೆ ಗೊತ್ತೋ ಗೊತ್ತಿಲ್ಲವೋ ವಿಕ್ಕಿ ಕೌಶಲ್ ರವರ ಮೂಲತಹ ಪಂಜಾಬ್ ಮೂಲದ ಕುಟುಂಬದವರು. ಇನ್ನು ಕತ್ರಿನಾ ಕೈಫ್ ರವರು ಮೂಲತಃ ಲಂಡನ್ ನವರು. ತನ್ನ ಗಂಡನಿಗಾಗಿ ಈಗ ಪಂಜಾಬಿ ಭಾಷೆಯನ್ನು ಕಲಿಯಲು ಆರಂಭಿಸಿದ್ದಾರೆ. ವಿಷಯ ಕೇವಲ ಇಷ್ಟಕ್ಕೆ ನಿಲ್ಲದೆ ವಿಕ್ಕಿ ಕೌಶಲ್ ರವರ ತಾಯಿಯಾಗಿರುವ ವೀಣಾ ಕೌಶಲ್ ಅವರೊಂದಿಗೆ ಸೇರಿ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡಿಕೊಂಡು ಪಂಜಾಬಿ ತಿಂಡಿ ಹಾಗೂ ಖಾದ್ಯಗಳನ್ನು ತಯಾರಿಸಲು ಕಲಿಯುತ್ತಿದ್ದಾರೆ. ಗಂಡನಿಗಾಗಿ ಇಷ್ಟೊಂದು ಕಷ್ಟಪಡುತ್ತಿರುವ ಕತ್ರಿನಾ ಕೈಫ್ ರವರ ಕಥೆಯನ್ನು ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಜನರು ಕೂಡ ಭೇಷ್ ಎಂದಿದ್ದಾರೆ.