ಬಿಗ್ ನ್ಯೂಸ್: ಕನ್ನಡದಲ್ಲಿ ಮತ್ತೊಮ್ಮೆ ಬಿಗ್ ಬಾಸ್. ಹೊಸ ಬಿಗ್ ಬಾಸ್ ಸೀಸನ್ 9 ಗೆ ಮುಹೂರ್ತ ಫಿಕ್ಸ್. ಯಾವಾಗ ಗೊತ್ತೇ??

60

ನಮಸ್ಕಾರ ಸ್ನೇಹಿತರೇ ಹಲವಾರು ಸುದ್ದಿಗಳ ಹಾಗು ವಿವಾದಗಳ ನಂತರವೂ ಕೂಡ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ಬಾಸ್ ಈಗಾಗಲೇ ಎಂಟು ಅವತರಣಿಕೆಗಳನ್ನು ಯಶಸ್ವಿಯಾಗಿ ಮುಗಿಸಿದೆ. 8 ಅವತರಣಿಕೆಗಳನ್ನು ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಒಂದಲ್ಲ ಒಂದು ಕಾರಣದಿಂದಾಗಿ ಬಿಗ್ ಬಾಸ್ ಕಾರ್ಯಕ್ರಮ ಎನ್ನುವುದು ಕನ್ನಡ ಕಿರುತೆರೆಯಲ್ಲಿ ಸದಾಕಾಲ ಸದ್ದು ಮಾಡುತ್ತಲೇ ಇರುತ್ತದೆ.

ಬಿಗ್ ಬಾಸ್ ಮನೆಗೆ ಹೋದವರು ಖಂಡಿತವಾಗಿ ಜನಪ್ರಿಯ ಆಗೇ ಆಗುತ್ತಾರೆ ಎಂಬ ಮಾತಿದೆ. ಈ ಕಾರ್ಯಕ್ರಮ ಕನ್ನಡದಲ್ಲೇಕೆ ಸರಿಯಾದುದಲ್ಲ ಎಂಬ ಮಾತಿದ್ದರೂ ಕೂಡ ಇಂದಿಗೂ ಯಶಸ್ವಿಯಾಗಿ ಮುಂದುವರೆದುಕೊಂಡು ಬಂದಿದೆ. ಈಗಾಗಲೇ ಕನ್ನಡ ಬಿಗ್ ಬಾಸ್ ಸೀಸನ್ 8 ಮುಗಿದು ಹಲವಾರು ತಿಂಗಳುಗಳೇ ಕಳೆದು ಹೋಗಿದ್ದರು ಕೂಡ ಹೊಸ ಸೀಸನ್ ಕುರಿತಂತೆ ಯಾವುದೇ ಮಾಹಿತಿಗಳು ಬಂದಿರಲಿಲ್ಲ.

ಆದರೆ ಈಗ ಬಿಗ್ ಬಾಸ್ ಕನ್ನಡ ಸೀಸನ್ 9 ರ ಕುರಿತಂತೆ ಕೆಲವೊಂದು ಮಾಹಿತಿಗಳು ಹೊರಬಿದ್ದಿವೆ. ಹಾಗಿದ್ದರೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಕುರಿತಂತೆ ಹೊಸದಾಗಿ ಕೇಳಿಬರುತ್ತಿರುವ ಸುದ್ದಿ ಏನೆಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಗೆಳೆಯರೇ ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮಾರ್ಚ್ ಹೊತ್ತಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮುಗಿದು ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲವಂತೆ. ನಿಮ್ಮ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಯಾರು ಭಾಗವಹಿಸಬಹುದು ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.