ಸಮಂತಾ, ನಾಗ ಚೈತನ್ಯ ಹಾಗೂ ಧನುಷ್, ಐಶ್ವರ್ಯ ಆಯಿತು ಈಗ ಮತ್ತೊಂದು ಸ್ಟಾರ್ ನೋಡಿ ವಿಚ್ಚೇದನದ ಅನುಮಾನ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ವಿವಾಹ ವಿಚ್ಛೇದನವನ್ನು ನೀಡುವುದನ್ನು ಟ್ರೆಂಡ್ ಮಾಡಿಕೊಂಡು ಬಿಟ್ಟಿದ್ದಾರೆ. ಒಬ್ಬರಾದಮೇಲೊಬ್ಬರಂತೆ ವಿವಾಹ ವಿಚ್ಛೇದನ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ತೆಲುಗು ಚಿತ್ರರಂಗದ ಖ್ಯಾತ ಜೋಡಿಗಳಾಗಿದ್ದಂತಹ ಸಮಂತ ಹಾಗೂ ನಾಗಚೈತನ್ಯ ಇಬ್ಬರು ಕೂಡ ಹಲವಾರು ಕಾರಣಗಳಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಸುದ್ದಿಯಾಗಿದ್ದರು.
ಇದಾದನಂತರ ನೆನ್ನೆಯಷ್ಟೇ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಧನುಷ್ ಹಾಗೂ ರಜನಿಕಾಂತ್ ಅವರ ಮಗಳಾಗಿರುವ ಐಶ್ವರ್ಯ ಇಬ್ಬರೂ ಕೂಡ 18 ವರ್ಷಗಳ ದಾಂಪತ್ಯ ಜೀವನಕ್ಕೆ ವಿವಾಹ ವಿಚ್ಛೇದನ ನೀಡುವ ಮೂಲಕ ಅಂತ್ಯವನ್ನು ಹಾಡಿದ್ದಾರೆ. ಇದು ಕೂಡ ಈಗ ಸಿನಿಮಾ ರಸಿಕರಿಗೆ ದೊಡ್ಡಮಟ್ಟದ ಆಶ್ಚರ್ಯವನ್ನುಂಟು ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ಸುದ್ದಿಯನ್ನು ಅರಗಿಸಿಕೊಳ್ಳುತ್ತಿರುವಾಗಲೇ ಈಗ ಮತ್ತೊಂದು ವಿಚ್ಛೇದನದ ಸುದ್ದಿ ಕೇಳಿಬರುತ್ತಿದೆ. ಹೌದು ಅದು ಕೂಡ ಮೆಗಾಸ್ಟಾರ್ ಚಿರಂಜೀವಿ ರವರ ಕುಟುಂಬದಿಂದ.

ಹೌದು ಗೆಳೆಯರೆ ಮೆಗಾಸ್ಟಾರ್ ಚಿರಂಜೀವಿ ಅವರ ಮಗಳಾಗಿರುವ ಶ್ರೀಜಾ ತಮ್ಮ ಪತಿ ಕಲ್ಯಾಣ್ ದೇವ್ ರವರಿಗೆ ವಿವಾಹ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಎಂಬಂತೆ ಶ್ರೀಜಾ ರವರು ಕಲ್ಯಾಣ್ ದೇವರ ಅವರ ಹೆಸರನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಹಾಕಿದ್ದು ಅವರನ್ನು ಅನ್ ಫಾಲೋ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಇತ್ತೀಚೆಗೆ ಕಲ್ಯಾಣ್ ದೇವ್ ಹಾಗೂ ರಚಿತರಾಮ್ ನಟನೆಯ ಸೂಪರ್ ಮಚ್ಚಿ ಚಿತ್ರ ಬಿಡುಗಡೆಯಾಗಿದ್ದು ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಯಾರು ಕೂಡ ಶುಭಾಶಯವನ್ನು ಕೋರಿರಲಿಲ್ಲ. ಚಿತ್ರ ಕೂಡ ನೆಲಕಚ್ಚಿತ್ತು. ಈ ಕುರಿತಂತೆ ಯಾರೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ ಆದರೂ ಕೂಡ ಈ ಎಲ್ಲ ಬೆಳವಣಿಗೆಗಳು ಇವರಿಬ್ಬರು ಬೇರೆಯಾಗುವ ಪರಿಸ್ಥಿತಿಯ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಶ್ರೀಜಾ ಅವರು ಇದಕ್ಕೂ ಮುನ್ನ ಒಂದು ಮದುವೆಯಾಗಿದ್ದರು ಎಂಬುದನ್ನು ನಾವು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.