ಅನುಪಮಾ ಅಭಿಮಾನಿಗಳಿಗೆ ಕಹಿ ಸುದ್ದಿ, ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಿಂದ ತಾತ್ಕಾಲಿಕವಾಗಿ ಹೊರ ಬಂದದ್ದು ಯಾಕೆ ಗೊತ್ತೇ??

3,950

ನಮಸ್ಕಾರ ಸ್ನೇಹಿತರೇ ಇತ್ತೀಚಿನದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಕಿರುತೆರೆಯ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆಯನ್ನು ನೀಡಿ ಎಲ್ಲರಿಗೂ ಇಷ್ಟವಾಗಿದೆ. ಅಮ್ಮ ಹಾಗೂ ಮಕ್ಕಳ ಪ್ರೀತಿ ಹಾಗೂ ಬಾಂಧವ್ಯವನ್ನು ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆಯ ಮೂಲಕ ಉಣಬಡಿಸುವಂತಹ ಕಾರ್ಯಕ್ರಮವೇ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಈಗಾಗಲೇ ಸೆಲೆಬ್ರಿಟಿ ಗಳಾಗಿ ಬಿಟ್ಟಿದ್ದಾರೆ.

ಈ ಕಾರ್ಯಕ್ರಮವನ್ನು ಅನುಪಮ ಗೌಡರವರು ನಿರೂಪಕರಾಗಿ ನಡೆಸಿಕೊಟ್ಟರೆ ಸೃಜನ್ ಲೋಕೇಶ್ ಅನುಪ್ರಭಾಕರ್ ತಾರಾ ರವರು ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದಾರೆ. ಇತ್ತೀಚಿಗಷ್ಟೇ ಅಮೃತ ನಾಯ್ಡುರವರ ಮಗಳಾಗಿರುವ ಸಮನ್ವಿ ಅವರ ಮರಣದ ವಿಚಾರ ಈ ಕಾರ್ಯಕ್ರಮಕ್ಕೆ ಸಾಕಷ್ಟು ದುಃಖವನ್ನುಂಟು ಮಾಡುತ್ತದೆ. ಮೊನ್ನೆಯಷ್ಟೆ ನಡೆದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಸಮನ್ವಿ ಅವರಿಗೆ ಶ್ರದ್ಧಾಂಜಲಿಯನ್ನು ಕೂಡ ಕೋರಲಾಗಿತ್ತು. ಅಮೃತ ನಾಯ್ಡುರವರು ಈಗಾಗಲೇ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದು ಮತ್ತೊಮ್ಮೆ ಸಮನ್ವಿ ಅವರ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂಬುದಾಗಿ ಎಲ್ಲರೂ ಹಾರೈಸುತ್ತಿದ್ದಾರೆ. ಆದರೆ ಈಗ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಿಂದ ಕೇಳಿಬರುತ್ತಿರುವ ಇನ್ನೊಂದು ವಿಚಾರ ಈಗ ಎಲ್ಲರನ್ನೂ ಇನ್ನಷ್ಟು ಆಶ್ಚರ್ಯಕ್ಕೆ ಒಳಪಡುವಂತೆ ಮಾಡಿದೆ.

ಅದೇನೆಂದರೆ ಕೆಲವು ವಾರಗಳ ಮಟ್ಟಿಗೆ ಅನುಪಮ ಗೌಡರವರು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಿಂದ ವಿರಾಮ ಪಡೆದುಕೊಳ್ಳಲಿದ್ದಾರಂತೆ. ಹೌದು ಗೆಳೆಯರೇ ಅನುಪಮಾ ಗೌಡ ರವರಿಗೆ ಪಾಸಿಟಿವ್ ಆಗಿದೆ. ಇತ್ತೀಚಿಗಷ್ಟೇ ಸಮನ್ವಿ ಅವರ ಅಂತಿಮ ದರ್ಶನಕ್ಕೆ ಹೋದ ಸಂದರ್ಭದಲ್ಲಿ ಆಗಿರಬಹುದೆಂಬ ಶಂಕೆ ಇದೆ. ಹೀಗಾಗಿ 15ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಅನುಪಮ ಗೌಡರವರು ಇರಬೇಕಾದಂತಹ ಸ್ಥಿತಿ ಒದಗಿಬಂದಿದೆ. ಹೀಗಾಗಿ ಅವರ ಸಂಪರ್ಕದಲ್ಲಿ ಬಂದಂತಹ ಉಳಿದವರು ಕೂಡ ಒಂದು ವೇಳೆ ಪಾಸಿಟಿವ್ ಆದರೆ ಕ್ವಾರಂಟೈನ್ ನಲ್ಲಿ ಇರಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಹೀಗಾಗಿ ಸ್ವಲ್ಪ ವಾರಗಳ ಕಾಲ ಅನುಪಮ ಗೌಡರವರು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಿಂದ ಹೊರ ಬರಲಿದ್ದಾರೆ.