ವಿರಾಟ್ ಕೊಹ್ಲಿ ಈ ಮೂರು ಕಾರಣಗಳಿಗಾಗಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದು ಒಳ್ಳೆದಾಯಿತು – ಹೇಗೆ ಗೊತ್ತಾ?? ವಿಶ್ಲೇಷಕರ ಮಾತು ಏನು ಗೊತ್ತೇ??

202

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಭಾರತ ಕ್ರಿಕೇಟ್ ಕಂಡ ಶ್ರೇಷ್ಠ ನಾಯಕ. ಅದರಲ್ಲಿ ಎರಡು ಮಾತಿಲ್ಲ. ಆದರೇ ಬದಲಾದ ಬೆಳವಣಿಗೆಯಲ್ಲಿ ವಿರಾಟ್ ಏಕಾಏಕಿ ಟೆಸ್ಟ್ ಕ್ರಿಕೇಟ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೇ ಇದರಿಂದ ಭಾರತ ಕ್ರಿಕೇಟ್ ತಂಡಕ್ಕೆ ಹಾನಿಯಾಗಿರಬಹುದು ಆದರೇ ವಿರಾಟ್ ವೃತ್ತಿ ಜೀವನಕ್ಕೆ ಸಂಭಂದಿಸಿದಂತೆ ಈ ನಿರ್ಧಾರ ಈ ಕೆಳಗಿನ ಮೂರು ಕಾರಣಗಳಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಬನ್ನಿ ಆ ಮೂರು ಕಾರಣಗಳು ಯಾವುವು ಎಂದು ತಿಳಿಯೋಣ ಬನ್ನಿ.

1.ವಿರಾಟ್ ಹೆಚ್ಚು ವಿವಾದದ ವ್ಯಕ್ತಿಯಾಗಿದ್ದರು : ವಿರಾಟ್ ಕೊಹ್ಲಿ ಸುತ್ತ ವಿವಾದಗಳು ಇದ್ದವು. ಬಿಸಿಸಿಐ ನ್ನು ಸಹ ಎದುರು ಹಾಕಿಕೊಂಡಿದ್ದರು.ಅದಲ್ಲದೇ ಮೈದಾನದಲ್ಲಿ ಅವರ ಅತಿರೇಕದ ವರ್ತನೆಗಳು ಕೆಲವೊಮ್ಮೆ ತಾವಾಗಿಯೇ ವಿವಾದಗಳಾಗಿ ಹೊರಹೊಮ್ಮುತ್ತಿದ್ದವು. ಆದರೇ ಈಗ ನಾಯಕತ್ವದಿಂದ ಇಳಿದ ಕಾರಣ ವಿರಾಟ್ ಸ್ವಲ್ಪ ಶಾಂತ ಸ್ವಭಾವದಿಂದ ಇರಬಹುದು. ಹಾಗಾಗಿ ವಿರಾಟ್ ವಿವಾದಗಳಿಂದ ದೂರವುಳಿಯಬಹುದು.

2.ಕೊಹ್ಲಿಯ ಬ್ಯಾಟಿಂಗ್ ಗತವೈಭವವನ್ನು ಮರಳಿ ನೋಡಬಹುದು : ವಿರಾಟ್ ನಮಗೆಲ್ಲಾ ತಿಳಿದಂತೆ ಅದ್ಭುತ ಬ್ಯಾಟ್ಸಮನ್. ಆದರೇ ಕಳೆದೆರೆಡು ವರ್ಷಗಳಿಂದ ಅವರ ಬ್ಯಾಟ್ ನಿಂದ ಶತಕಗಳು ಬರುತ್ತಿಲ್ಲ ಆದರೇ ರನ್ ಗಳು ಬರುತ್ತಿವೆ. ನಾಯಕತ್ವದ ಒತ್ತಡ ಇಳಿದರೇ , ಖಂಡಿತ ವಿರಾಟ್ ಬ್ಯಾಟ್ ಸದ್ದು ಮಾಡಲು ಶುರು ಮಾಡುತ್ತದೆ. ಭಾರತದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ.

3.ವಿರಾಟ್ ನಾಯಕತ್ವದಲ್ಲಿ ಹೊಸ ಶೈಲಿಯ ಕೊರತೆ ಇತ್ತು : ವಿರಾಟ್ ನಾಯಕತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಸೂತ್ರಗಳಿಲ್ಲದೇ ಪೇಲವವಾಗಿ ಕಂಡು ಬರುತ್ತಿತ್ತು. ಅವರು ಫಾರ್ಮ್ ನಲ್ಲಿ ಇರದ ಆಟಗಾರರನ್ನ , ಅವರ ಹಿಂದಿನ ದಾಖಲೆ ನೋಡಿ ಆಡಿಸುತ್ತಿದ್ದರು. ಆದರೇ ವಿರಾಟ್ ಆರಂಭಿಕ ನಾಯಕತ್ವದಲ್ಲಿ ಹಾಗಿರಲಿಲ್ಲ. ಫಾರ್ಮ್ ನಲ್ಲಿ ಇದ್ದ ಆಟಗಾರರಷ್ಟೇ ತಂಡದ ಭಾಗವಾಗುತ್ತಿದ್ದರು. ಅದಲ್ಲದೇ ಬೌಲಿಂಗ್ ಚೇಂಜ್ ಸಹ ಪರಿಣಾಮಕಾರಿಯಾಗಿ ಮಾಡುತ್ತಿರಲಿಲ್ಲ. ಹಾಗಾಗಿ ವಿರಾಟ್ ನಾಯಕತ್ವದಿಂದ ಕೆಳಗಿಳಿದಿದ್ದೇ ಒಳ್ಳೆಯದಾಯಿತು.