ಕೊನೆಯ ಮೂಹರ್ತ ಫಿಕ್ಸ್, ಐಪಿಎಲ್ ತಂಡಗಳಿಗೆ ಹೊಸ ನಿಯಮ ವಿಧಿಸಿ ಆದೇಶ ಹೊರಡಿಸಿದ ಬಿಸಿಸಿಐ. ಏನು ಗೊತ್ತೇ??

31

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರಲ್ಲಿ ಎರಡು ಹೊಸ ತಂಡಗಳು ಭಾಗವಹಿಸುವುದು ನಿಮಗೆ ತಿಳಿದಿದೆ. ಒಂದು ಅಹಮದಾಬಾದ್ ತಂಡವಾದರೇ ಮತ್ತೊಂದು ಲಕ್ನೋ. ಎರಡು ತಂಡಗಳು ಆಟಗಾರರ ಸಾರ್ವತ್ರಿಕ ಹರಾಜಿಗಿಂತ ಮುಂಚೆಯೇ ಮೂವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಿತ್ತು. ಈಗ ಆ ನಿಯಮಕ್ಕೆ ಕೆಲವು ತಿದ್ದುಪಡಿಗಳ ಜೊತೆ ಷರತ್ತನ್ನು ಸಹ ವಿಧಿಸಿದೆ. ಫೆಬ್ರವರಿ 12 ಹಾಗೂ 13 ರಂದು ಆಟಗಾರರ ಹರಾಜು ನಡೆಯುವ ಕಾರಣ ಜನೇವರಿ 22 ರೊಳಗೆ ತಾವು ಆಯ್ಕೆ ಮಾಡಿಕೊಳ್ಳುವ ಮೂವರು ಆಟಗಾರರ ಪಟ್ಟಿಯನ್ನ ಕಡ್ಡಾಯವಾಗಿ ಬಿಡುಗಡೆ ಮಾಡಬೇಕು ಎಂದು ಹೇಳಿದೆ.

ಮೂವರು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಕನಿಷ್ಠ 33 ಕೋಟಿ ರೂಪಾಯಿ ಖರ್ಚು ಮಾಡಬೇಕು. ಆಯ್ಕೆ ಮಾಡುವ ಆಟಗಾರರಲ್ಲಿ ಇಬ್ಬರೂ ದೇಶಿ ಹಾಗೂ ಒಬ್ಬ ವಿದೇಶಿ ಆಟಗಾರನಿರಬೇಕು. ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮೊದಲ ಆಟಗಾರನಿಗೆ 15 ಕೋಟಿ, ಏರಡನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ರೂಪಾಯಿ ನೀಡಬೇಕು.

ಒಂದು ವೇಳೆ ಎರಡು ಆಟಗಾರರನ್ನ ಮಾತ್ರ ಆಯ್ಕೆ ಮಾಡಿಕೊಂಡರೇ ಮೊದಲ ಆಟಗಾರನಿಗೆ 14 ಕೋಟಿ ರೂಪಾಯಿ ಹಾಗೂ ಏರಡನೇ ಆಟಗಾರನಿಗೆ 10 ಕೋಟಿ ರೂಪಾಯಿ ನೀಡಬೇಕು. ಒಂದು ವೇಳೆ ಆಟಗಾರ ಅನ್ ಕ್ಯಾಪ್ಡ್ ಅಂದರೇ, ರಾಷ್ಟ್ರೀಯ ತಂಡಗಳಿಗೆ ಪಾದಾರ್ಪಣೆ ಮಾಡಿಲ್ಲವೆಂದರೇ ಅಂತಹ ಆಟಗಾರನಿಗೆ 4 ಕೋಟಿ ರೂಪಾಯಿ ನೀಡಬೇಕು ಎಂದು ಹೇಳಿದೆ. ಹೀಗೆ ಈ ನಿಯಮ ಅನುಸರಿಸಿ ಆಯ್ಕೆಯಾಗುವ ಆಟಗಾರರ ಲಿಸ್ಟ್ ನ್ನ ಐಪಿಎಲ್ ಆಡಳಿತ ಮಂಡಳಿಗೆ ಇದೇ 22ರೊಳಗೆ ತಿಳಿಸಬೇಕೆಂದು ಹೇಳಿದೆ. ಹಾಗಾಗಿ ಈ ವಾರಾಂತ್ಯದೊಳಗೆ ಹೊಸ ತಂಡಕ್ಕೆ ಯಾವ ಆಟಗಾರರು ಸೇರ್ಪಡೆಗೊಳ್ಳುತ್ತಾರೆಂಬ ಕುತೂಹಲ ಕೊನೆಗೊಳ್ಳಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.