ಕಿರುತೆರೆಯಲ್ಲಿ ಒಂದಾಗಿ ಹೊಸ ಹೆಜ್ಜೆ ಇಡಲು ಮುಂದಾದ ಬ್ರೋಗೌಡ ಶಮಂತ್ ಮತ್ತು ಧನು. ವಿಷಯ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಿರುತೆರೆ ಲೋಕ ಎನ್ನುವುದು ಒಂದಲ್ಲ ಒಂದು ಕಾರಣದಿಂದಾಗಿ ಸದಾಕಾಲ ಸದ್ದು ಮಾಡುತ್ತಲೇ ಇರುತ್ತದೆ. ಅದರಲ್ಲೂ ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ ಸ್ಪರ್ಧಿಗಳು ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ.
ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಹಲವಾರು ಜನ ಸ್ಪರ್ಧಿಗಳು ಸುದ್ದಿಯಲ್ಲಿದ್ದರು. ಅವರಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ ರವರು ಕೂಡ ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಅವರಿಗಿಂತ ಹೆಚ್ಚಾಗಿ ಅರವಿಂದ್ ಹಾಗೂ ದಿವ್ಯಾ ರವರು ಕೂಡ ಸಾಕಷ್ಟು ಜನಪ್ರಿಯರಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇವರಿಬ್ಬರು ಅತಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದು. ಇವರು ಸದಾಕಾಲ ಜೊತೆಯಲ್ಲಿರುವ ಫೋಟೋಗಳು ಇವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಆದನಂತರ ಇದು ಸಾಕಷ್ಟು ಕನ್ಫರ್ಮ್ ಆಗಿತ್ತು.

ಇಂದಿಗೂ ಕೂಡ ಇವರಿಬ್ಬರು ಸದ್ಯದಲ್ಲೇ ಮದುವೆ ಆಗುತ್ತಾರೆ ಎಂಬುದಾಗಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಈಗ ಸುದ್ದಿಯಲ್ಲಿ ಬಂದಿರುವುದು ಅದೇ ಬಿಗ್ ಬಾಸ್ ನ ಸ್ಪರ್ಧಿಗಳು ಆಗಿರುವ ಬ್ರೋ ಶಮಂತ್ ಗೌಡ ಹಾಗೂ ಧನುಶ್ರೀ. ಧನುಶ್ರೀ ರವರು ಟಿಕ್ ಟಾಕ್ ಹಾಗೂ ಶಾರ್ಟ್ ವಿಡಿಯೋಗಳ ಮೂಲಕ ಜನಪ್ರಿಯರಾದವರು. ಇತ್ತ ಶಮಂತ್ ಗೌಡರವರು ವಿಡಿಯೋ ಸಾಂಗ್ ಗಳ ಮೂಲಕ ಜನಪ್ರಿಯರಾದವರು. ಇದೀಗ ಇವರಿಬ್ಬರು ಗುಡ್ ನ್ಯೂಸ್ ನೀಡಲು ಹೊರಟಿದ್ದಾರೆ. ಗುಡ್ ನ್ಯೂಸ್ ಎಂದಾಗ ಅಪಾರ್ಥ ಮಾಡಿಕೊಳ್ಳಬೇಡಿ. ಗುಡ್ ನ್ಯೂಸ್ ಏನೆಂದರೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಗಾನಬಜಾನ ಕಾರ್ಯಕ್ರಮದಲ್ಲಿ ಇವರಿಬ್ಬರು ಸ್ಟೆಪ್ ಹಾಕಲು ಹೊರಟಿದ್ದಾರೆ. ಲೂಸ್ ಮಾದ ಯೋಗಿ ನಡೆಸಿಕೊಡುತ್ತಿರುವ ಹಾಗೂ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಈ ಜೋಡಿಗಳು ಈಗ ಕಾಲಿಡಲಿದ್ದಾರೆ.