ಬಸ್ ನಂಬರ್ 375 ರಲ್ಲಿ ಅಂದು ರಾತ್ರಿ ನಡೆದ್ದದೇನು ಗೊತ್ತೇ?? ಹತ್ತಿದ ಆ ಮೂರು ಜನ ಏನಾದರೂ ಗೊತ್ತಾ?? ಮೈ ಬೆವರುವುದು ಗ್ಯಾರಂಟೀ.
ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ನಿಜ ಜೀವನದಲ್ಲಿ ನಡೆದಿರುವ ಒಂದು ವಿಚಿತ್ರ ಘಟನೆ ಕುರಿತಂತೆ ಹೇಳಲು ಹೊರಟಿದ್ದೇವೆ. ಸಾರ್ವಜನಿಕ ಬಸ್ ಆಗಿರುವ 375 ನಂಬರ್ನ ಬಸ್ ಹತ್ತಿದ ತಕ್ಷಣ ಆ ಮೂವರು ಜನರಿಗೆ ಏನಾಯ್ತು ಎಂಬುದರ ಕುರಿತಂತೆ ಎಂದು ಹೇಳಲು ಹೊರಟಿದ್ದೇವೆ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ. ಇದು ನಡೆದಿರುವುದು ಚೀನಾದ ಬೀಜಿಂಗ್ ನಲ್ಲಿ. ಇನ್ನು ಇದು ನಡೆದಿರುವುದು 1995 ರಲ್ಲಿ ಅಂದಿನ ಪತ್ರಿಕೆಗಳಲ್ಲಿ ಕೂಡ ಇರುವ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಹಾಗಿದ್ದರೆ ಅಂದು ಏನಾಯಿತು ಎಂಬುದನ್ನು ನಾವು ವಿವರವಾಗಿ ಹೇಳುತ್ತೇವೆ ಬನ್ನಿ.
ಒಂದು ರಾತ್ರಿ ಒಬ್ಬ ಯುವಕ ಹಾಗೂ ವೃದ್ದೆ ಬಸ್ಸಿಗಾಗಿ ಕಾಯುತ್ತಿದ್ದರು. ಅದು ಚುಮುಚುಮು ಚಳಿಯ ರಾತ್ರಿಯಾಗಿತ್ತು. ಇಬ್ಬರು ಕೂಡ ಅಂದಿನ ಕೊನೆಯ ಬಸ್ ಗಾಗಿ ಕಾಯುತ್ತಿದ್ದರು. ಕಾಯುತ್ತಿದ್ದ ಸಂದರ್ಭದಲ್ಲಿ ಒಂದು ಬಸ್ಸು ಬಂದಿತ್ತು ಅದೇ 375 ನಂಬರ್ ನಂಬರ್ ನ ಬಸ್. ಅಂದುಕೊಂಡಂತೆ ಅದು ರಾತ್ರಿಯ ಕೊನೆಯ ಬಸ್ ಆಗಿದ್ದರಿಂದ ಅಲ್ಲಿ ಕೇವಲ ಕಂಡಕ್ಟರ್ ಹಾಗೂ ಬಸ್ ಡ್ರೈವರ್ ಮಾತ್ರ ಇದ್ದರು ಇವರು ಬಸ್ಸಿನಲ್ಲಿ ಹತ್ತಿ ಕುಳಿತುಕೊಳ್ಳುತ್ತಾರೆ. ಮುಂದೆ ಹೋದ ನಂತರ ಇಬ್ಬರು ಜೋಡಿಗಳು ಬಸ್ಸಿಗಾಗಿ ಕಾಯುತ್ತಿರುತ್ತಾರೆ ಅವರು ಕೂಡ ಬಸ್ಸಿಗೆ ಬಂದು ಹತ್ತುತ್ತಾರೆ. ಮುಂದೆ ಹೋದ ಕ್ಷಣ ಇನ್ನೂ ಮೂರು ಜನ ಬಸ್ಸಿಗಾಗಿ ಕೈಯನ್ನು ಅಡ್ಡ ಕಟ್ಟುತ್ತಾರೆ.

ಅವರು ನೋಡಲು ಲಕ್ಷಣವಾಗಿದ್ದ ಬಟ್ಟೆ 15ನೇ ಶತಮಾನದಂತೆಯೇ ಕಾಣುತ್ತಿತ್ತು. ಅದರಲ್ಲೂ ಮೂರು ಜನರ ಮುಖ ಬಿಳಿ ಪೌಡರ್ ಹಾಕಿದಂತೆ ಬಿಳಿಚುಗಟ್ಟಿತ್ತು. ಅದರಲ್ಲೂ ಕೂಡ ಮಧ್ಯೆ ಇದ್ದ ವ್ಯಕ್ತಿಯನ್ನು ಅವರಿಬ್ಬರು ಎತ್ತಿಕೊಂಡು ಬರುವಂತೆ ಭಾಸವಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ಆತನ ಮುಖ ಕೆಳಗೆ ಜೋತು ಬೀಳುವಂತಿತ್ತು. ಈ ವಿಷಯಗಳು ಕೂಡಾ ಅಂದಿನ ಪತ್ರಿಕೆಗಳಲ್ಲಿ ಸುದ್ದಿ ಆಗಿತ್ತು. ಇಲ್ಲಿ ಬಸ್ಸು ಮುಂದೆ ಹೋಗುತ್ತಿದ್ದಂತೆ ಬಸ್ಸಿನಲ್ಲಿ ಇದ್ದಂತಹ ಇಬ್ಬರು ಜೋಡಿಗಳು ಕೆಳಗಿಳಿಯುತ್ತಾರೆ. ಈಗ ಬಸ್ಸಿನಲ್ಲಿ ಇದ್ದದ್ದು ಕೇವಲ ಡ್ರೈವರ್ ಕಂಡಕ್ಟರ್ ಹೊರತುಪಡಿಸಿ ಇವರಿಬ್ಬರು ಮತ್ತೆ ಆ ಮೂವರು ಜನ ವಿಚಿತ್ರ ಮನುಷ್ಯರು. ಈ ಸಂದರ್ಭದಲ್ಲಿ ಆ ವೃದ್ಧೆ ಏಕಾಏಕಿ ಯುವಕನೊಂದಿಗೆ ನನ್ನ ಪರ್ಸ್ ಯಾಕೆ ಕದ್ದೆ ಎಂಬುದಾಗಿ ಜಗಳಕ್ಕಿಳಿಯುತ್ತಾಳೆ.

ಆದರೆ ನಿಜವಾಗಿ ಆತ ಬಸ್ ನಿಲ್ದಾಣದಿಂದ ಹಿಡಿದು ಇಲ್ಲಿಯವರೆಗೂ ಕೂಡ ಆಕೆಯ ಮುಖವನ್ನು ಕೂಡ ನೋಡಿರುವುದಿಲ್ಲ ಇನ್ನು ಪರ್ಸ್ ಕದಿಯುವುದು ಎಲ್ಲಿಂದ ಬಂತು. ಇನ್ನು ಇವರಿಬ್ಬರ ಜಗಳ ತಾರಕಕ್ಕೇರಿದಾಗ ಬಸ್ ಡ್ರೈವರ್ ಅವರಿಬ್ಬರನ್ನು ಮಾರ್ಗಮಧ್ಯದಲ್ಲಿ ತಿಳಿಸಿ ದಾರಿಯಲ್ಲಿ ಜಗಳ ಮಾಡಿಕೊಳ್ಳಿ ಎಂಬುದಾಗಿ ಹೇಳಿ ಹೋಗುತ್ತಾನೆ. ಬಸ್ ಇಳಿಯುತ್ತಿದ್ದಂತೆ ಮುದುಕಿ ಜಗಳ ಬಿಟ್ಟು ಸುಮ್ಮನಾಗುತ್ತಾಳೆ. ಆಗ ಯುವಕನಿಗೆ ಕೋಪ ಜಾಸ್ತಿಯಾಗುತ್ತದೆ ಯಾಕೆ ನೀನು ಹೀಗೆ ಮಾಡಿದೆ ಎಂಬುದಾಗಿ ಮುದುಕಿ ಮೇಲೆ ಎಗರುತ್ತಾನೆ.
ಆಗ ಮುದುಕಿ ಮಗು ನಾನು ನನ್ನ ಹಾಗೂ ನಿನ್ನ ಪ್ರಾಣವನ್ನು ಕಾಪಾಡಲು ಹೇಗೆ ಮಾಡಿದೆ ಎಂಬುದಾಗಿ ಹೇಳುತ್ತಾಳೆ. ಯುವಕನಿಗೆ ಆಶ್ಚರ್ಯವಾಗುತ್ತದೆ. ಆಗ ಮುದುಕಿ ಮುಂದುವರೆದು ಮಗು ನಮ್ಮ ಹಿಂದೆ ಮೂವರು ಜನ ವ್ಯಕ್ತಿಗಳು ಕುಳಿತಿದ್ದರು ಅಲ್ಲವೇ ಅವರ ಕುರಿತಂತೆ ಡ್ರೈವರ್ ನಾಟಕದವರು ಇರಬೇಕು ಅಥವಾ ಕುಡಿದವರು ಇರಬೇಕು ಎಂಬುದಾಗಿ ಹೇಳಿದ್ದ ಅಲ್ಲವೇ. ಆದರೆ ಅವರು ಅದ್ಯಾರು ಅಲ್ಲ ಬದಲಾಗಿ ಅವರು ಮೂರು ಜನ ಕೂಡ ಮನುಷ್ಯರಲ್ಲ ಬದಲಾಗಿ ಭೂತಗಳು ಎಂಬುದಾಗಿ ಹೇಳುತ್ತಾರೆ.

ಹೌದು ನಾನು ಅವರನ್ನು ನೋಡಲು ಹಿಂದೆ ನೋಡಿದಾಗ ಗಾಳಿಯಲ್ಲಿ ಅವರ ಬಟ್ಟೆಗಳು ಹಾರಾಡಿದಾಗ ಅವರಿಗೆ ಕಾಲುಗಳ ಇಲ್ಲವಾಗಿತ್ತು. ಹೀಗಾಗಿ ಅವರು ಯಾರೊಂದಿಗೆ ಬಸ್ನಲ್ಲಿ ಮಾತಾಡಲು ಇಲ್ಲ. ಅದಕ್ಕಾಗಿ ಅವರೊಂದಿಗೆ ಆ ಬಸ್ನಲ್ಲಿ ಇದ್ದರೆ ನಮಗೇನಾದರೂ ಅಪಾಯವಾಗಬಹುದು ಎಂಬುದಾಗಿ ತಿಳಿದು ನಾನು ಹಾಗೂ ನೀನು ಬಸ್ಸಿನಿಂದ ಕೆಳಗಿಳಿಯಲು ಈ ಉಪಾಯವನ್ನು ಹೂಡಿದೆ ಎಂಬುದಾಗಿ ಮುದುಕಿ ಹೇಳುತ್ತಾಳೆ. ಇವರಿಬ್ಬರು ಅಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕುರಿತಂತೆ ದೂರನ್ನು ನೀಡುತ್ತಾರೆ.
ಆದರೆ ಪೊಲೀಸರು ಇವರ್ಯಾರೋ ಹುಚ್ಚರು ಇರಬೇಕು ಎಂಬುದಾಗಿ ಅಂದುಕೊಂಡು ಅವರನ್ನು ಮನೆಗೆ ಹೋಗಲು ಹೇಳುತ್ತಾರೆ. ಆದರೆ ಮರುದಿನ ಪತ್ರಿಕೆ ಯಲ್ಲಿ ಆ ಬಸ್ ಕಾಣೆಯಾಗಿರುವುದು ಪತ್ರಿಕೆಗಳಲ್ಲಿ ಸುದ್ದಿ ಆಗಿರುತ್ತದೆ. ಇಷ್ಟು ಮಾತ್ರವಲ್ಲದೆ ಇಬ್ಬರು ಡ್ರೈವರ್ ಹಾಗೂ ಕಂಡಕ್ಟರ್ ಕಾಣೆಯಾಗಿರುವುದು ಕೂಡ ಆಗಿರುತ್ತದೆ. ಈಗ ಪೊಲೀಸರು ಇವರಿಬ್ಬರನ್ನು ಹುಡುಕಿ ಆದಿನ ಏನಾಯಿತು ಎಂಬುದನ್ನು ಅವರಿಂದ ವಿವರಣೆಯನ್ನು ಪಡೆಯುತ್ತಾರೆ.

ಕೆಲವು ದಿನಗಳ ಹುಡುಕಾಟದ ನಂತರ ಒಂದು ಹೊಂಡದಲ್ಲಿ ಮುಳುಗಿಹೋಗಿ ಬಸ್ಸಿನ ಒಳಗಡೆ ಮೂರು ನಿರ್ಜೀವ ದೇಹಗಳು ಹಾಳಾದ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಹಾಗಿದ್ದರೆ ಆ ಬಸ್ಸಿನಲ್ಲಿರುವ ಮೂರು ದಿನಗಳು ಆ ವಿಚಿತ್ರ ಮನುಷ್ಯರದ್ದಾ ಅಥವಾ ಯಾರದ್ದು. ಆ ಡ್ರೈವರ್ ಹಾಗೂ ಕಂಡಕ್ಟರ್ ಏನಾದರೂ ಎಂಬ ಕುರಿತಂತೆ ಕೂಡ ಎಲ್ಲಾ ವಿಚಾರಗಳು ಇನ್ನೂ ನಿಗೂಢವಾಗಿದೆ. ಇದು ಇಡೀ ಚೀನದಾದ್ಯಂತ ಬಸ್ ನಂಬರ್ 375 ಎಂಬ ಹೆಸರಿನ ಕಥೆಗಳಲ್ಲಿ ಪ್ರಚಲಿತದಲ್ಲಿದೆ. ಇಂದಿಗೂ ಕೂಡ ಆ ದಾರಿಯಲ್ಲಿ ರಾತ್ರಿ ಮೇಲೆ ಯಾವುದೇ ಬಸ್ ಸಂಚಾರ ಮಾಡಲು ಮನುಷ್ಯರು ಹೆದರುತ್ತಾರೆ. ಈ ಕಥೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.