ವೈಫಲ್ಯತೆ ಮೇಲೆ ವೈಫಲ್ಯತೆ ಕಾಣುತ್ತಿರುವ ರಹಾನೆ ರವರ ಸ್ಥಾನವನ್ನು ತುಂಬಬಲ್ಲ ಟಾಪ್ ಐದು ಆಟಗಾರರು ಯಾರ್ಯಾರು ಗೊತ್ತೇ?? ಇವರಲ್ಲಿ ನಿಮ್ಮ ಆಯ್ಕೆ ಯಾರು??

62

ನಮಸ್ಕಾರ ಸ್ನೇಹಿತರೇ ದಕ್ಷಿಣಾ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತ ನಂತರ ಭಾರತ ತಂಡದಲ್ಲಿ ಅನೇಕ ಬದಲಾವಣೆಗಳ ಮಾತು ಕೇಳಲಾರಂಭಿಸಿವೆ. ನೈತಿಕ ಹೊಣೆ ಹೊತ್ತು ನಾಯಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಹಲವಾರು ಇನ್ನಿಂಗ್ಸ್ ಗಳಿಂದ ರನ್ ಬರ ಎದುರಿಸುತ್ತಿರುವ ಪೂಜಾರ ಹಾಗೂ ರಹಾನೆ ಸ್ಥಾನ ಅಲುಗಾಡುತ್ತಿದೆ. ಪೂಜಾರಗೆ ಅವಕಾಶ ಸಿಕ್ಕರೂ ಅಜಿಂಕ್ಯಾ ರಹಾನೆಗೆ ಅವಕಾಶ ಸಿಗುವುದು ಕಡಿಮೆ. ಹಾಗಾಗಿ ಅಜಿಂಕ್ಯಾ ರಹಾನೆಯವರ ಸ್ಥಾನವನ್ನ ತುಂಬಬಲ್ಲ ಐವರು ಆಟಗಾರರನ್ನ ಬಿಸಿಸಿಐ ಹೆಸರಿಸಿದೆ. ಬನ್ನಿ ಆ ಐವರು ಆಟಗಾರರು ಯಾರು ಎಂದು ತಿಳಿಯೋಣ.

1.ಹನುಮ ವಿಹಾರಿ : ಆಂದ್ರದ ಈ ಪ್ರತಿಭಾವಂತ ಬ್ಯಾಟ್ಸಮನ್ ಟೆಸ್ಟ್ ಕ್ರಿಕೇಟ್ ಗೆ ಹೇಳಿ ಮಾಡಿಸಿದಂತಹ ಹೆಸರು. ಈಗಾಗಲೇ ತಾವು ಟೆಸ್ಟ್ ಕ್ರಿಕೇಟ್ ಗೆ ಫಿಟ್ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಆದರೇ ತಂಡದಲ್ಲಿ ಖಾಯಂ ಸ್ಥಾನ ಸಿಕ್ಕಿರಲಿಲ್ಲ. ಈಗ ರಹಾನೆ ಸ್ಥಾನವನ್ನ ತುಂಬಲು ಅರ್ಹ ವ್ಯಕ್ತಿ ಎಂದು ಹೇಳಲಾಗಿದೆ.

2.ಶ್ರೇಯಸ್ ಅಯ್ಯರ್ : ಮುಂಬೈನ ಈ ಬ್ಯಾಟ್ಸಮನ್ ಸಿಕ್ಕ ಅವಕಾಶದಲ್ಲಿ ಶತಕ ಗಳಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಹಾಗಾಗಿ ಟೆಸ್ಟ್ ತಂಡದಲ್ಲಿ ಇವರು ಸಹ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಬಲ್ಲರು.

3.ಸೂರ್ಯ ಕುಮಾರ್ ಯಾದವ್ : ಮುಂಬೈನ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸಮನ್ ಈಗಾಗಲೇ ತಮ್ಮ ಪ್ರದರ್ಶನದಿಂದ ಏಕದಿನ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಈಗ ಟೆಸ್ಟ್ ನಲ್ಲಿಯೂ ರಹಾನೆಯವರ ಐದನೇ ಕ್ರಮಾಂಕದ ಬ್ಯಾಟ್ಸಮನ್ ಸ್ಥಾನ ತುಂಬಲು ಇವರು ಸೂಕ್ತ ವ್ಯಕ್ತಿ ಎಂದು ಹೇಳಲಾಗುತ್ತಿದೆ.

4.ಶುಭಮಾನ್ ಗಿಲ್ : ಪಂಜಾಬ್ ನ ಆರಂಭಿಕ ಬ್ಯಾಟ್ಸಮನ್ ಈಗಾಗಲೇ ಟೆಸ್ಟ್ ತಂಡದಲ್ಲಿ ಖಾಯಂ ಆರಂಭಿಕ ಸ್ಥಾನ ಪಡೆದಿದ್ದಾರೆ. ಆದರೇ ತಂಡದ ಹಿತದೃಷ್ಠಿಯಿಂದ ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕೆಂದು ತಂಡದ ಮ್ಯಾನೇಜ್ ಮೆಂಟ್ ಸೂಚಿಸಿದೆ. ಹಾಗಾಗಿ ಇವರು ಸಹ ಅಜಿಂಕ್ಯಾ ರಹಾನೆಯವರ ಸ್ಥಾನ ತುಂಬಲು ಅರ್ಹರು.

5.ಕೆ‌.ಎಸ್.ಭರತ್ : ಆಂದ್ರ ಪ್ರದೇಶ ಹಾಗೂ ಆರ್ಸಿಬಿ ತಂಡಕ್ಕೆ ಆಡುವ ಭರತ್ ಸಹ ಪ್ರತಿಭಾನ್ವಿತ ಬ್ಯಾಟ್ಸಮನ್. ರಣಜಿ ಕ್ರಿಕೇಟ್ ನಲ್ಲಿ ತ್ರಿಶತಕ ಸಿಡಿಸಿದ ದಾಖಲೆ ಇವರ ಹೆಸರಿನಲ್ಲಿದೆ. ಉತ್ತಮ ವಿಕೇಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಇವರು ಸಹ ಅಜಿಂಕ್ಯಾ ರಹಾನೆಯವರ ಸ್ಥಾನವನ್ನ ತುಂಬಬಲ್ಲ ಸಮರ್ಥ ಆಟಗಾರರಾಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.