ಮೊದಲ ತೆಲುಗು ಚಿತ್ರದಲ್ಲಿಯೇ ದೊಡ್ಡ ಮಟ್ಟದ ಶಾಕ್ ಅನುಭವಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್. ಮಾಡಿದ ಕಲೆಕ್ಷನ್ ಎಷ್ಟು ಗೊತ್ತೇ?? ಇತಿಹಾಸದಲ್ಲಿಯೇ ಇದು ಕಡಿಮೆ.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗು ಟಾಪ್ ನಟಿ ಎಂದಾಗ ಮೊದಲಿಗೆ ಕೇಳಿ ಬರುವ ಹೆಸರು ಎಂದರೆ ಅದು ಖಂಡಿತವಾಗಿಯೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಹೆಸರು. ಕನ್ನಡದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು ಇನ್ನೂ ಕೂಡ ಹಲವಾರು ಸಿನಿಮಾಗಳು ರಚಿತರಾಮ್ ರವರ ಕೈಯಲ್ಲಿದೆ. ಈಗಾಗಲೇ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ತೆಲುಗು ಚಿತ್ರರಂಗಕ್ಕೆ ಕೂಡ ಪಾದಾರ್ಪಣೆ ಮಾಡಿದ್ದು ಅವರ ಮೊದಲ ಚಿತ್ರದ ಕುರಿತಂತೆ ಅವರು ತುಂಬಾನೇ ಕಾತುರರಾಗಿದ್ದರು.
ಹೌದು ಗೆಳೆಯರೇ ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಆಗಿರುವ ಕಲ್ಯಾಣ್ ದೇವ್ ರವರ ಎರಡನೇ ಚಿತ್ರವಾಗಿರುವ ಸೂಪರ್ ಮಚ್ಚಿ ಚಿತ್ರದಲ್ಲಿ ನಟಿಸುವ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಚಿತ್ರದ ಕುರಿತಂತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳು ಎದ್ದಿದ್ದವು. ಚಿತ್ರದ ಹಾಡುಗಳು ಕೂಡ ದೊಡ್ಡಮಟ್ಟದಲ್ಲಿ ಸೂಪರ್ ಹಿಟ್ ಆಗಿದ್ದವು. ಆದರೆ ಈಗ ಮೊದಲ ಚಿತ್ರದಲ್ಲೇ ರಚಿತಾರಾಮ್ ರವರು ದೊಡ್ಡಮಟ್ಟದ ಆಘಾ’ತವನ್ನು ಅನುಭವಿಸಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹೌದು ಗೆಳೆಯರೇ ಸೂಪರ್ ಮಚ್ಚಿ ಚಿತ್ರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ನಿನ್ನೆ ಬಿಡುಗಡೆಯಾಗಿದ್ದು ದೊಡ್ಡಮಟ್ಟದ ಸೋಲನ್ನು ಅನುಭವಿಸಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಕಲ್ಯಾಣ್ ದೇವ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸೂಪರ್ ಮಚ್ಚಿ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು ಬಾಕ್ಸಾಫೀಸಿನಲ್ಲಿ ಸೊನ್ನೆಯನ್ನು ಸುತ್ತಿದೆ. ಚಿತ್ರದ ಕುರಿತಂತೆ ಚಿತ್ರತಂಡ ಯಾವುದೇ ಪ್ರಚಾರವನ್ನು ಮಾಡದಿದ್ದುದು ಹಾಗೂ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಚಿತ್ರ ನೆನ್ನೆ ಬಿಡುಗಡೆಯಾಗಿದ್ದು ಕೂಡ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಬಾಕ್ಸಾಫೀಸ್ ನಲ್ಲಿ ಸೂಪರ್ ಮಚ್ಚಿ ಚಿತ್ರ ಯಾವುದೇ ಕಲೆಕ್ಷನ್ ಕಂಡಿಲ್ಲ ಎಂದು ಹೇಳಬಹುದಾಗಿದೆ. ಮೊದಲ ತೆಲುಗು ಚಿತ್ರದಲ್ಲಿ ಯಾರು ಊಹಿಸದಂತಹ ಸೋಲನ್ನು ರಚಿತರಾಮ್ ರವರು ಕಂಡಿದ್ದಾರೆ. ಇತ್ತೀಚೆಗೆ ನಿಮಗೆಲ್ಲ ತಿಳಿದಿರುವಂತೆ ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಎಲ್ಲಾ ನಟಿಯರು ಕೂಡ ಅಭೂತಪೂರ್ವ ಯಶಸ್ಸು ಸಾಧಿಸಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.