ಕೊರೊನ ಸಮಯದಲ್ಲಿ ಗ್ರಾಹಕರನ್ನು ಸೆಳೆಯಲು ದಿನಕ್ಕೆ 5ಜಿಬಿ ಡಾಟಾ ಪ್ಲಾನ್ ಬಿಡುಗಡೆ, ಕಡಿಮೆ ಬೆಲೆಗೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಷ್ಟು ದಿನ ಬಿಎಸ್ ಎನ್ ಎಲ್ ನ ನಿಧಾನ ಸೇವೆಗೆ ಬೇಸೆತ್ತು ಖಾಸಗಿ ಟೆಲಿಕಾಂ ಕಂಪನಿಯನ್ನು ನೆಚ್ಚಿದ್ದ ಜನ ಈಗ ಮತ್ತೆ ಬಿ ಎಸ್ ಎಲ್ ಎಲ್ ಗೆ ಬದಲಾಗುವ ಮನಸ್ಸು ಮಾಡಿದ್ದಾರೆ ಯಾಕೆ ಅಂತಿರಾ? ಅಂಥ ಯೋಜನೆಗಳನ್ನು ಬಿಡುಗಡೆ ಮಾಡಿದೆ ಬಿಎಸ್ ಎನ್ ಎಲ್! ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿರುವ ಬಿಎಸ್ ಎನ್ ಎಲ್ ವರ್ಕ್ ಫ್ರಂ ಹೋಮ್ ಮಾಡುವವರಿಗೆ ಪ್ರಯೋಜನಕಾರಿಯಾಗಲಿದೆ. ಅದ್ಯಾವ ಪ್ಲಾನ್? ಏನೆಲ್ಲಾ ಸೌಲಭ್ಯ ಒಳಗೊಂಡಿದೆ ನೋಡೋಣ ಬನ್ನಿ!
ಬಿಎಸ್ ಎನ್ ಎಲ್ ಇದೀಗ 599 ರೂ.ಗಳ ವಿಶೇಷ ಪ್ರೀಪೇಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರ ಸೌಲಭ್ಯಗಳ ಬಗ್ಗೆ ಹೇಳುವುದಾದರೆ, ಅನಿಯಮಿತ ವಾಯಿಸ್ ಕರೆ ಹೊಂದಿದ್ದು, ಕೊಡಲಾಗುತ್ತಿದೆ. ದಿನದಲ್ಲಿ ಈ ಮಿತಿ ಮುಗಿದರೆ ಇಂಟರ್ ನೆಟ್ ವೇಗ 80 Kbps ಗೆ ಇಳಿಕೆಯಾಗುತ್ತದೆ. ಇನ್ನು ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ 100 ಉಚಿತ SMS ಮಾಡಬಹುದು 84 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ ಒಟಿಟಿ ಸೌಲಭ್ಯವಿಲ್ಲದಿರುವುದು ಸ್ವಲ್ಪ ಬೇಸರದ ಸಂಗತಿ.

ಇನ್ನು ಬಿಎಸ್ ಎನ್ ಎಲ್ 251 ರೂ.ಗಳ ವರ್ಕ್ ಫ್ರಂ ಹೋಮ್ ಪ್ರಿಪೇಯ್ಡ್ ಯೋಜನೆಯು 30 ದಿನಗಳವರೆಗೆ 70 ಜಿಬಿ ಡೇಟಾವನ್ನು ಒದಗಿಸುತ್ತದೆ. ಇದರಲ್ಲಿ ಡಾಟಾ ಬಿಟ್ಟು ಬೇರೆ ಕರೆ ಅಥವಾ ಎಸ್ ಎಮ್ ಎಸ್ ಸೌಲಭ್ಯ ಬೇಕಿದ್ದರೆ ಪ್ರತ್ಯೇಕ ರೀಚಾರ್ಜ್ ಮಾಡಬೇಕಾಗುತ್ತದೆ. ಇದೇ ರೀತಿ 30 ದಿನಗಳ ವ್ಯಾಲಿಡಿಟಿ ಹೊಂದಿರುವ 151 ರೂ. ಯ ವರ್ಕ್ ಫ್ರಂ ಹೋಮ್ ಪ್ರಿಪೇಯ್ಡ್ ಯೋಜನೆಯನ್ನೂ ನೀಡಲಾಗುತ್ತಿದೆ ಇದರಲ್ಲಿ 40ಜಿಬಿ ಡೇಟಾ ದೊರೆಯುತ್ತದೆ. ಇನ್ನು ದೇಶದಾದ್ಯಂತ ಲಭ್ಯವಿರುವ ಈ ಯೋಜನೆಯ ಪ್ರಯೋಜನವನ್ನು ಬಿ ಎಸ್ ಎನ್ ಎಲ್ ಸೈಟ್ ಮೂಲಕ, ಆನ್ಲೈನ್ ಮೂಲಕವೂ ರೀಚಾರ್ಜ್ ಮಾಡಿಕೊಳ್ಳಬಹುದು.