ನಿಮ್ಮ ಸಂಗಾತಿ ಆಫೀಸ್ ನಲ್ಲಿ ಮತ್ತೊಂದು ಅಕ್ರಮ ಸಂಬಂಧ ಹೊಂದಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತೇ??

1,606

ನಮಸ್ಕಾರ ಸ್ನೇಹಿತರೇ ಆಫೀಸ್ ಎನ್ನುವುದು ಕೆಲಸ ಮಾಡುವವರು ಅತ್ಯಂತ ಹೆಚ್ಚು ಸಮಯವನ್ನು ಕಳೆಯುವಂತಹ ಜಾಗ. ಈ ಸಂದರ್ಭದಲ್ಲಿ ಹಲವಾರು ವ್ಯಕ್ತಿಗಳ ಪರಿಚಯ, ನಿಕಟ ಸಂಬಂಧ ಇರುವುದು ನಡೆಯುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಮದುವೆಯಾಗಿದ್ದರು ಕೂಡ ತಮ್ಮ ಸಹೋದ್ಯೋಗಿಗಳೊಂದಿಗೆ ಪ್ರೇಮ ಸಂಬಂಧವನ್ನು ಹೊಂದುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಅವರು ದಿನದ ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆಯುತ್ತಾರೆ ಹೀಗಾಗಿ ಈ ತರಹ ಆಗುವುದು ಸರ್ವೇಸಾಮಾನ್ಯ ಎಂಬುದು ಸರ್ವೆಯ ಮೂಲಕ ತಿಳಿದು ಬಂದಿದೆ.

ಒಂದು ವೇಳೆ ನೀವು ಕೂಡ ಕೆಲಸ ಮಾಡುತ್ತಿದ್ದರೆ ಆಫೀಸ್ನಲ್ಲಿ ಈ ತರಹದ ಚಟುವಟಿಕೆಗಳನ್ನು ನೀವು ಗಮನಿಸಿರಬಹುದು. ಹಾಗಿದ್ದರೆ ಪತಿ ಅಥವಾ ಪತ್ನಿ ಆಫೀಸ್ ನಲ್ಲಿ ಬೇರೆಯವರೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಓದಿ.

ಆಫೀಸಿನಲ್ಲಿ ಹೆಚ್ಚಾಗಿ ಇರುವುದು: ಒಬ್ಬ ಸಾಮಾನ್ಯ ವ್ಯಕ್ತಿ ಕೆಲಸ ಬಿಟ್ಟು ಮನೆಗೆ ಹೋದರೆ ಸಾಕು ಎಂದು ಕಾಯುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ನಿಮ್ಮ ಪತಿ ಅಥವಾ ಪತ್ನಿ ಆಫೀಸಿನಿಂದ ಲೇಟಾಗಿ ಮನೆಗೆ ಬರುವುದು ಹಾಗೂ ರಜಾ ದಿನಗಳಲ್ಲಿಯೂ ಕೂಡ ಆಫೀಸಿ ನಲ್ಲಿ ಓವರ್ ಟೈಮ್ ಕೆಲಸವನ್ನು ಮಾಡುವುದನ್ನು ಮಾಡಿದರೆ ಖಂಡಿತವಾಗಿಯೂ ಬಹುತೇಕವಾಗಿ ನೀವು ಅವರು ಆಫೀಸಿನಲ್ಲಿ ಬೇರೆಯವರೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

ನಿಮ್ಮ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯದಿದ್ದರೆ; ಆಫೀಸಿನಿಂದ ಮನೆಗೆ ಬಂದ ಮೇಲೆ ಅಥವಾ ರಜಾದಿನದಲ್ಲಿ ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಜೊತೆಗೆ ಸಮಯವನ್ನು ಕಳೆಯದೆ ಹೊರಗೆಲ್ಲಾದರೂ ಹೋದರೆ ಖಂಡಿತವಾಗಿಯೂ ಆತ ಅಥವಾ ಆಕೆ ಬೇರೆಯವರ ಜೊತೆಯಲ್ಲಿ ಸಂಬಂಧ ಹೊಂದಿದ್ದಾರೆ ಎಂಬುದು ಅರ್ಥ. ಯಾಕೆಂದರೆ ಒಬ್ಬ ಪ್ರಾಮಾಣಿಕ ಸಂಗಾತಿ ಖಂಡಿತವಾಗಿಯೂ ಕೆಲಸ ಮುಗಿದ ಕೂಡಲೇ ತನ್ನ ಸಂಗಾತಿಯೊಂದಿಗೆ ಸಮಯ ಕಳೆಯಲು ಹಾತೊರೆಯುತ್ತಾನೆ.

ಫೋನನ್ನು ಮುಟ್ಟಲು ಬಿಡದೆ ಇರುವುದು; ಒಂದು ವೇಳೆ ನಿಮ್ಮ ಪಾರ್ಟ್ನರ್ ನಿಮ್ಮಿಂದ ಅವರ ಫೋನನ್ನು ದೂರವಿರಿಸುವುದು ಲಾಕ್ ಮಾಡಿ ಇರಿಸುವುದು ಅಥವಾ ಒಂದು ವೇಳೆ ನೀವು ಅದನ್ನು ತೆಗೆದುಕೊಂಡರೆ ನಿಮಗೆ ಅಂಟಿಕೊಂಡು ಅದನ್ನು ಕಳವಳದಿಂದ ನೋಡುತ್ತಿರುವುದು ಮಾಡಿದರೆ ಖಂಡಿತವಾಗಿಯೂ ಆತ ಇನ್ನೊಂದು ಸಂಬಂಧದಲ್ಲಿದ್ದಾನೆಂದೆ ಅರ್ಥ. ಯಾಕೆಂದರೆ ಅವನು ಮೊಬೈಲ್ ನಲ್ಲಿರುವ ಯಾವುದೋ ಒಂದು ವಿಚಾರವನ್ನು ನಿಮ್ಮಿಂದ ಮುಚ್ಚಿಡಲು ಪ್ರಯತ್ನ ಪಡುತ್ತಿರುತ್ತಾನೆ.

ಆಫೀಸ್ ಸಹೋದ್ಯೋಗಿಗಳೊಂದಿಗೆ ಟ್ರಿಪ್ ಗೆ ಹೋಗುವುದು; ರಜಾದಿನಗಳಲ್ಲಿ ನಿಮ್ಮೊಂದಿಗೆ ಟ್ರಿಪ್ ಗೆ ಹೋಗುವ ಬದಲು ಅವರ ಆಫೀಸ್ ಸಹದ್ಯೋಗಿಗಳೊಂದಿಗೆ ಟ್ರಿಪ್ಪಿಗೆ ಹೋಗುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ಅವರು ಆಫೀಸಿನಲ್ಲಿ ಬೇರೆಯವರೊಂದಿಗೆ ಎಂಬುದರ ಕುರಿತಂತೆ ಶಂಕೆಯನ್ನು ಮೂಡಿಸುತ್ತದೆ.

ಆಫೀಸ್ ಕೆಲಸದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಸಕ್ತಿಯನ್ನು ತೋರಿಸುವುದು; ಒಬ್ಬ ಪ್ರಾಮಾಣಿಕ ಆಫೀಸ್ ನಲ್ಲಿ ಕೆಲಸ ಮಾಡುವ ವ್ಯಕ್ತಿ ಎಷ್ಟು ಕೆಲಸ ಇರುತ್ತದೆಯೋ ಅಷ್ಟಕ್ಕೆ ಮಾತ್ರ ಕೆಲಸವನ್ನು ಮಾಡಿ ಕೆಲಸದಿಂದ ವಿರಾಮವನ್ನು ಪಡೆಯಲು ಹಾತೊರೆಯುತ್ತಿರುತ್ತಾನೆ. ಒಂದು ವೇಳೆ ಅವರು ಅಗತ್ಯಕ್ಕಿಂತ ಹೆಚ್ಚಾಗಿ ಆಫೀಸ್ ಕೆಲಸದಲ್ಲಿ ಆಸಕ್ತಿಯನ್ನು ಅಚಾನಕ್ಕಾಗಿ ತೋರಿಸಲು ಪ್ರಾರಂಭಿಸಿದರೇ ಖಂಡಿತವಾಗಿ ನೀವು ಅವರು ಆಫೀಸ್ನಲ್ಲಿ ಯಾರೊಂದಿಗಾದರೂ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲಾ ಅಂಶಗಳನ್ನು ನೀವು ಪರೀಕ್ಷಿಸಿ ಅವರು ಆಫೀಸ್ನಲ್ಲಿ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೊಂದಿಗೋ ಪ್ರೇಮ ಸಂಬಂಧವನ್ನು ಹೊಂದಿದ್ದಾರೆ ಎಂದು ಅಂದಾಜು ಹಾಕಬಹುದಾಗಿದೆ.