ಜಿಯೋ ಪ್ಲಾನ್ ಹೆಚ್ಚಾಯ್ತು ಅನ್ನೋ ಚಿಂತೆ ಬಿಡಿ, ಮತ್ತೊಮ್ಮೆ ಗ್ರಾಹಕರಿಗಾಗಿ ಕಡಿಮೆ ಬೆಲೆಗೆ ಭರ್ಜರಿ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ ಜಿಯೋ. ಹೇಗಿದೆ ಗೊತ್ತೇ ಹೊಸ ಪ್ಲಾನ್ಸ್??
ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಏರಿಸಿದ್ದು, ನಿಜಕ್ಕೂ ಗ್ರಾಹಕರಿಗೆ ದೊಡ್ಡ ಹೊಡೆತವಾಗಿತ್ತು. ಆ ಕಡೆ ಇಂಧನದ ಬೆಲೆ ಹೆಚ್ಚಳ, ಈ ಕಡೆ ಮೊಬೈಲ್ ರೀಚಾರ್ಜ್ ಕೂಡ ತುಟ್ಟಿ. ಇದರಿಂದ ಮೊಬೈಲ್ ಬಳಕೆದಾರರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿತ್ತು. ಇದೀಗ ಜಿಯೋ ಅಗ್ಗದ ಯೋಜನೆಯನ್ನು ಬಿಡುಗಡೆ ಗೊಳಿಸಿದ್ದು ಗ್ರಾಹಕರು ನಿಟ್ತುಸಿರು ಬಿಡುವಂತಾಗಿದೆ. ಬನ್ನಿ ಆ ಯೋಜನೆಯ ಬಗ್ಗೆ ತಿಳಿಯೋಣ.

ಏರ್ಟೆಲ್, ವಡಾಫೊನ್ ಮೊದಲಾದ ಎಲ್ಲಾ ಟೆಲಿಕಾಂ ಗಳಿಗಿಂತಲೂ ಜಿಯೋದ ಈ ಪ್ಲಾನ್ ಅಗ್ಗ ಹಾಗೂ ಹೆಚ್ಚು ಪ್ರಯೋಜನಗಳನ್ನು ಒಳಗೊಂಡಿದೆ. ಅದುವೇ ವರ್ಷದ 899 ರೂಗಳ ಯೋಜನೆ! ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 2 ಜಿಬಿ ದತ್ತಾಂಶ (ಡಾಟಾ) ಹಾಗು 28 ದಿನಗಳ ಮಾನ್ಯತೆಯನ್ನು ಪಡೆಯಬಹುದು. ಬಳಕೆದಾರರು ಒಂದು ವರ್ಷದಲ್ಲಿ 24 ಜಿಬಿ ಡೇಟಾವನ್ನು ಪಡೆಯಬಹುದು. ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ಪ್ರತಿದಿನ 50 SMS ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯ ಪ್ರಕಾರ ನೀವು ಪ್ರತಿ ತಿಂಗಳು 2 ಜಿಬಿ ಡೇಟಾ ಮತ್ತು 50 SMS ಅನ್ನು ಪಡೆಯುತ್ತೀರಿ.
ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಸಬಹುದು. ಜಿಯೋ ಫೋನ್ ಆಲ್ ಇನ್ ಒನ್ ಪ್ಲಾನ್‌ಗಳಲ್ಲಿ 28 ದಿನಗಳ ವ್ಯಾಲಿಡಿಟಿಯಿರುವ 91ರೂಪಾಯಿಗಳ ಅಗ್ಗದ ಪ್ಲಾನ್ ಕೂಡ ಇದೆ ಆದರೆ ಇದು 12 ತಿಂಗಳಿಗೆ 91 ರೂಪಾಯಿ ಖರ್ಚು ಮಾಡಿದರೆ 1092 ರೂಪಾಯಿಯಾಗುತ್ತದೆ.