ರಶ್ಮಿಕಾ ಇಡೀ ಸಿನೆಮಾಗೆ ಪಡೆದ ಸಂಭಾವನೆಗಿಂತ ಹೆಚ್ಚಿನದನ್ನು ಐಟಂ ಸಾಂಗ್ ಗಾಗಿ ಪಡೆದ ಸಮಂತಾ. ಒಂದು ಹಾಡಿಗೆ ಎಷ್ಟು ಕೋಟಿ ಗೊತ್ತೇ??

1,755

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಭಾರತ ಚಿತ್ರರಂಗದಲ್ಲಿ ಸುದ್ದಿ ಮಾಡಿದಂತಹ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ. 2021 ವರ್ಷದ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವೆಂಬ ಖ್ಯಾತಿಗೆ ಒಳಗಾಗಿದೆ. ಅದರಲ್ಲೂ ಈ ಚಿತ್ರದ ಹೂ ಅಂತೀಯಾ ಮಾವ ಊಹೂ ಅಂತೀಯ ಸಾಂಗ್ ಅತ್ಯಂತ ದೊಡ್ಡ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲಿ ಕೂಡ ಜನಪ್ರಿಯತೆಯನ್ನು ಪಡೆದು ಸೂಪರ್ ಹಿಟ್ ಆಗಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ಸಮಂತ ಎಂಬುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರ.

ವಿವಾಹ ವಿಚ್ಛೇದನದ ನಂತರ ಯಾವುದೇ ಚಿತ್ರಗಳನ್ನು ಕೂಡ ಒಪ್ಪಿಕೊಳ್ಳದೆ ಒಂಟಿಯಾಗಿದ್ದ ಸಮಂತಾ ರವರು ಮೊದಲ ಬಾರಿಯ ಕಾಣಿಸಿಕೊಂಡ ಚಿತ್ರವೆಂದರೆ ಪುಷ್ಪ ಎಂದು ಹೇಳಬಹುದಾಗಿದೆ. ಪುಷ್ಪ ಚಿತ್ರದ ಈ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಸಮಂತ ಅವರು ಚಿತ್ರತಂಡದಿಂದ ಬರೋಬ್ಬರಿ 1.5 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬುದಾಗಿ ಮೊದಲಿಗೆ ಕೇಳಿಬಂದಿತ್ತು. ಆದರೆ ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಸಮಂತಾ ರವರು ಈ ಹಾಡಿಗಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಈ ಕುರಿತಂತೆ ಚಿತ್ರತಂಡ ಎಲ್ಲೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇಷ್ಟು ಮಾತ್ರವಲ್ಲದೆ 2021 ರಲ್ಲಿ ಅತ್ಯಂತ ಹೆಚ್ಚು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿರುವ ಹಾಡು ಇದಾಗಿದೆ.

ಇದಕ್ಕೆ ಪ್ರಮುಖ ಕಾರಣ ಸಮಂತ ರವರ ನೃತ್ಯ ಹಾಗೂ ಗ್ಲಾಮರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೊಂದು ಸಂಭಾವನೆ ಪಡೆಯುವುದಕ್ಕೆ ಕಾರಣ ಏನು ಎಂಬುದರ ಕುರಿತಂತೆ ಕೂಡ ನಾವು ಹೇಳುತ್ತೇವೆ ಬನ್ನಿ. ಹೌದು ಗೆಳೆಯರೇ ಮೊದಮೊದಲಿಗೆ ಸಮಂತಾ ರವರು ಈ ಐಟಂ ಸಾಂಗ್ ನಲ್ಲಿ ಕುಣಿಯಲು ಒಪ್ಪಿಕೊಂಡಿರಲಿಲ್ಲ. ನಂತರ ಸ್ವತಹ ಅಲ್ಲು ಅರ್ಜುನ್ ರವರೆ ಸಮಂತ ರವರನ್ನು ಈ ಸಾಂಗಿನಲ್ಲಿ ಕುಣಿಯುವುದಕ್ಕೆ ಒಪ್ಪಿಸುತ್ತಾರೆ. ಈ ಸಂದರ್ಭದಲ್ಲಿ ಸಮಂತ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆಗಾಗಿ ಬೇಡಿಕೆ ಇಟ್ಟಿದ್ದರಂತೆ ಚಿತ್ರತಂಡ ಇದಕ್ಕೆ ಒಪ್ಪಿದೆ. ಚಿತ್ರ ಈಗ ಪಂಚ ಭಾಷೆಗಳಲ್ಲಿ ಕೂಡ ಗೆದ್ದಿದ್ದು ಈ ಸಾಂಗ್ ಕೂಡ ಪ್ರೇಕ್ಷಕರು ಸಿನಿಮಾವನ್ನು ಇಷ್ಟಪಡಲು ಒಂದು ಕಾರಣವಾಗಿದೆ. ಈಗಾಗಲೇ ಎರಡನೇ ಭಾಗದ ಚಿತ್ರೀಕರಣ ಅತಿಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆ ಇದ್ದು ಇದರಲ್ಲಿ ಕೂಡ ಸಮಂತ ಅವರು ಕಾಣಿಸಿಕೊಳ್ಳುತ್ತಾರಾ ಎಂಬುದರ ಕುರಿತಂತೆ ಚರ್ಚೆಗಳು ನಡೆಯುತ್ತಿವೆ.