ಸಮಂತಾ- ನಾಗಚೈತನ್ಯ ಡಿವೋರ್ಸ್; ಈ ಬಗ್ಗೆ ಕೊನೆಗೂ ನಾಗಚೈತನ್ಯ ಬಿಚ್ಚಿಟ್ಟ ಸತ್ಯ ಏನು ಗೊತ್ತಾ??

223

ನಮಸ್ಕಾರ ಸ್ನೇಹಿತರೇ ಟಾಲಿವುಡ್ ನಟ ನಾಗಚೈತನ್ಯ ಹಾಗೂ ಸಮಂತಾ ಅವರ ವಿಚ್ಛೇಧನದ ವಿಷಯ ಹಳೆಯದೆ. ಆದರೆ ಈಬಗ್ಗೆ ಇದೂವರೆಗೂ ಸರಿಯಾಗಿ ಪ್ರತಿಕ್ರಿಯೆ ನೀಡದ ನಟ ನಾಗಚೈತನ್ಯ ಈಗ ತಮ್ಮ ಹಾಗೂ ಸಮಂತಾ ರುತ್ ಪ್ರಭು ವಿಚ್ಛೇಧನದ ಬಗ್ಗೆ ತಾವಾಗಿಯೇ ಕೆಲವು ವಿಷಯಗಳನ್ನು ಹೇಳಿದ್ದಾರೆ. ಸ್ನೇಹಿತರೆ, ನಟಿ ಸಮಂತಾ ಹಾಗೂ ಟಾಲಿವುಡ್ ನಟ ನಾಗಚೈತನ್ಯ ಅವರು ಡಿವೋರ್ಸ್ ವಿಚಾರ ಟಾಲಿವುಡ್ ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲಾ ಕಡೆ ಬಹಳಷ್ಟು ಸುದ್ಧಿ ಮಾಡಿತ್ತು. ಇದೀಗ ಸುಮಾರು 3 ತಿಂಗಳ ಹಿಂದೆ ಅಕ್ಕಿನೇನಿ ಕುಟುಂಬದ ಜೋಡಿ ಬೇರೆಯಾಗಿತ್ತು.

ಈ ಬಗ್ಗೆ ಸಮಂತಾ ಕೂಡ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಷಯಗಳನ್ನೂ ತಿಳಿಸಿದ್ದರು. ಆದರೆ ನಟ ನಾಗ ಚೈತನ್ಯ ಮಾತ್ರ ಎಲ್ಲಿಯೂ ಏನನ್ನೂ ಹೇಳಿರಲಿಲ್ಲ. ಈಗ ತಮ್ಮ ಸಾಂಸಾರಿಕ ಜೀವನದ ಬಗ್ಗೆ ಮೌನ ಮುರಿದಿದ್ದಾರೆ. ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಸ್ನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನಾಗ ಚೈತನ್ಯ ತಮ್ಮ ನೂತನ ಚಿತ್ರ ಬಂಗರ್ರಾಜು ಸಿನಿಮಾದ ಪ್ರೊಮೋಷನ್ ನಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುವಾಗ ವಿಚ್ಛೇಧನಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಾವಿಬ್ಬರು ಬೇರ್ಪಟ್ಟಿರುವುದು ಒಳ್ಳೆಯ ನಿರ್ಧಾರ. ನಾವಿಬ್ಬರೂ ಪರಸ್ಪರ ತೆಗೆದುಕೊಂಡ ವಯಕ್ತಿಕ ನಿರ್ಧಾರ. ಅವಳು ಸಂತೋಷವಾಗಿದ್ದರೆ ನನಗೂ ಸಂತೋಷ. ವೈಯಕ್ತಿಕವಾಗಿ ಸಂತೋಷವಾಗಿರುವ ವಿಚಾರ ಬಂದಾಗ ಬೇರೆಯಾಗುವುದೇ ಉತ್ತಮ ನಿರ್ಧಾರ ಎಂದು ನಾಗಚೈತನ್ಯ ಸ್ಪಷ್ಟನೆಯನ್ನು ನೀಡಿದ್ದಾರೆ. ಟಾಲಿವುಡ್ ನಟ ಅಲ್ಲೂ ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆಹಾಕಿರುವ ಸಮಂತಾ ಸದ್ಯ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ನಟಿಯೂ ಹೌದು.