ತನಗೆ ಇಷ್ಟವಿಲ್ಲದೆ ಮದುವೆಯಾಗಿದ್ದ ಮಗಳು ಗರ್ಭಿಣಿಯಾದಾಗ ಆ ಕಟುಕ ತಂದೆ ಮಾಡಿದ್ದೇನು ಗೊತ್ತೇ?? ಇಷ್ಟರ ಮಟ್ಟಿಗೆ ಯಾರು ಇಳಿಯುವುದಿಲ್ಲ.

19,499

ನಮಸ್ಕಾರ ಸ್ನೇಹಿತರೇ ಕೆಲವೊಂದು ಪ್ರಕರಣಗಳನ್ನು ನೋಡಿದರೆ ಪ್ರೀತಿ ಮಾಡೋದು ತಪ್ಪಾ ಎಂದು ಅನಿಸಿಬಿಡುತ್ತದೆ. ಯಾರಿಗೂ ಅನ್ಯಾಯ ಮಾಡಿದೆ ಕೇವಲ ತಮ್ಮ ಪ್ರೀತಿಗಾಗಿ ಬದುಕಲು ಹೊರಟಂತಹ ಜೀವಿಗಳನ್ನು ಬೇರ್ಪಡಿಸುತ್ತಾರೆ. ಇಂದು ನಾವು ಹೇಳಹೊರಟಿರುವ ಸುದ್ದಿ ಕೆಲವು ಸಮಯಗಳ ಹಿಂದಷ್ಟೇ ನಡೆದಿದ್ದು ದೇಶದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಈ ವಿಚಾರದ ಕುರಿತಂತೆ ನಿಮಗೆ ಸವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಇಷ್ಟೊಂದು ದೊಡ್ಡ ಸದ್ದನ್ನು ಮಾಡಿರುವ ಈ ಪ್ರಕರಣ ನಡೆದಿರುವುದು ನೆರೆಯ ತೆಲಂಗಾಣ ರಾಜ್ಯದ ನೆಲಗೊಂಡ ಜಿಲ್ಲೆಯಲ್ಲಿ. ಇನ್ನು ಈ ಜೋಡಿಗಳ ಹೆಸರನ್ನು ಹೇಳುವುದಾದರೆ ಹುಡುಗನ ಹೆಸರು ಪ್ರಣಯ್ ಕುಮಾರ್ ಹಾಗೂ ಹುಡುಗಿ ಹೆಸರು ಅಮೃತವರ್ಷಿಣಿ. ಇವರ ಪ್ರೇಮಪ್ರಕರಣ ಎನ್ನುವುದು ಪಿಯುಸಿ ಯಿಂದಲೇ ಆರಂಭವಾಗಿತ್ತು. ಎಂಜಿನಿಯರಿಂಗ್ ವರೆಗೂ ಕೂಡ ಇವರಿಬ್ಬರ ಪ್ರೀತಿ ಸಂಬಂಧ ಎನ್ನುವುದು ಮುಂದುವರೆದಿತ್ತು. ತಮ್ಮ ಮನೆಯವರನ್ನು ಒಪ್ಪಿಸಲು ಹೋದಾಗ ಹುಡುಗಿಯ ಮನೆಯವರು ಹುಡುಗ ತಮಗಿಂತ ಕೀಳುಮಟ್ಟದ ಜಾತಿಯವನು ಎಂಬುದಾಗಿ ನಿರಾಕರಿಸುತ್ತಾರೆ.

ಇದಕ್ಕಾಗಿ ಪ್ರಣಯ್ ಕುಮಾರ್ ಹಾಗೂ ಅಮೃತವರ್ಷಿಣಿ ಇವರಿಬ್ಬರೂ ಕೂಡ ಆರ್ಯ ಸಮಾಜ ಹಾಗೂ ನೆಲಗೊಂಡ ಪೊಲೀಸ್ ಠಾಣೆಯ ಪೊಲೀಸರ ನೆರವಿನಿಂದ ಮದುವೆಯಾಗುತ್ತಾರೆ. ಪ್ರಣಯ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಗಿ ಹಣಕಾಸಿನ ಸಮಸ್ಯೆ ಖಂಡಿತವಾಗಿ ಇರಲಿಲ್ಲ. ಆದರೆ ಹುಡುಗಿಯ ತಂದೆ ಮಾರುತಿ ಕುಮಾರ್ ಮಾತ್ರ ನನ್ನ ಮಗಳು ನನ್ನ ಇಚ್ಛೆಗೆ ವಿರುದ್ಧವಾಗಿ ಕೆಳಜಾತಿಯ ಹುಡುಗನನ್ನು ಮದುವೆಯಾಗಿ ನನ್ನ ಮರ್ಯಾದೆ ಹಾಳು ಮಾಡಿದ್ದಾಳೆ ಎಂಬುದಾಗಿ ಕುದಿಯುತ್ತಿದ್ದ. ಹೇಗಾದರೂ ಮಾಡಿ ತಂದಿದ್ದನ್ನು ತೀರಿಸಿಕೊಳ್ಳಬೇಕು ಎಂಬುದಾಗಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದ.

ಐದು ತಿಂಗಳ ಗರ್ಭಿಣಿಯಾಗಿದ್ದ ಅಮೃತವರ್ಷಿಣಿ ಯನ್ನು ಗಂಡ ಪ್ರಣಯ್ ಕುಮಾರ್ ಆಸ್ಪತ್ರೆಗೆ ಚೆಕಪ್ ಮಾಡಲು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಲವಾರು ಜನ ದುಷ್ಕರ್ಮಿಗಳು ಬಂದು ಆತನನ್ನು ಮುಗಿಸುತ್ತಾರೆ. ಇದಾದ ಕೆಲವೇ ಸಂದರ್ಭದಲ್ಲಿ ಆಕೆಯ ತಂದೆ ಕರೆ ಮಾಡಿ ನಿನ್ನ ಗಂಡನಿಗೆ ನನ್ನ ಮಗಳನ್ನು ಬಿಡುವಂತೆ ಮೂರು ಕೋಟಿ ರೂಪಾಯಿ ನೀಡುತ್ತೇನೆ ಎಂದು ಹೇಳಿದ್ದೇ ಆತ ನನಗೆ ಪ್ರೀತಿಯೇ ಮುಖ್ಯ ಎಂದು ಹೇಳಿದ್ದ. ಅದಕ್ಕೆ ನಿನ್ನ ಮದುವೆಗಿಂತ ಹೆಚ್ಚಾಗಿ ನಿನ್ನ ಮರಣದ ವಿಡಿಯೋ ವೈರಲ್ ಆಗುತ್ತದೆ ಎಂಬುದಾಗಿ ಹೇಳಿದೆ ಎಂಬುದಾಗಿ ಹೇಳಿ ಫೋನ್ ಇಡುತ್ತಾನೆ. ಆಗ ಅಮೃತವರ್ಷಿಣಿಗೆ ತನ್ನ ತಂದೆಯ ಇದನ್ನು ಮಾಡಿಸಿದ್ದಾರೆ ಎಂಬುದಾಗಿ ತಿಳಿದು ಆಘಾ’ತವಾಗುತ್ತದೆ.

ಮುಂದಿನ ಮೂರು ತಿಂಗಳಲ್ಲಿ ಕೆನಡಾಗೆ ಹೋಗಿ ಸೆಟಲ್ ಆಗುವ ಕನಸನ್ನು ಇಬ್ಬರು ದಂಪತಿಗಳು ಕೂಡ ಕಂಡಿದ್ದರು. ಆದರೆ ಕನಸು ನನಸಾಗುವ ಮುನ್ನವೇ ಗಂಡನನ್ನು ತನ್ನ ತಂದೆ ಮುಗಿಸಿದ್ದು ಅಮೃತವರ್ಷಿಣಿ ಗೆ ಭರಿಸಲಾಗದ ದುಃಖವನ್ನು ತಂದಿತ್ತು. ಈ ಸಮಾಜ ಇನ್ನೂ ಕೂಡ ಜಾತಿ ಜಾತಿ ಜಾತಿ ಎಂದು ಮಾನವೀಯತೆಗೆ ಮರ್ಯಾದೆ ಕೊಡದೆ ಈಗ ಆಡುತ್ತಿದೆ. ಇಂತಹ ಅಮಾನವೀಯ ಕೃತ್ಯಗಳನ್ನು ಮಾಡುವವರಿಗೆ ತಕ್ಕನಾದ ಶಿಕ್ಷ ಸಿಗಬೇಕು. ಮುಂದೆ ಹುಟ್ಟುವ ಮಗುವಿನ ಎಂದಿಗೆ ತನ್ನ ಗಂಡನೊಂದಿಗೆ ವಿದೇಶದಲ್ಲಿ ಸುಖವಾದ ಸಂಸಾರವನ್ನು ನಡೆಸುವ ಕನಸನ್ನು ಕಂಡಿದ್ದ ಅಮೃತವರ್ಷಿಣಿ ಈಗ ದಿಕ್ಕುತೋಚದಂತಾಗಿರುವುದೇ ಎಲ್ಲರಿಗೂ ದುಃಖದ ವಿಷಯವಾಗಿದೆ.