ಸಿಸಿಟಿವಿಯಲ್ಲಿ ಸೆರೆಯಾದ ಸಮನ್ವಿ ರವರಿಗೆ ರೋಡಿನಲ್ಲಿ ನಡೆದ ಅಪಘಾತದ ದೃಶ್ಯ ಬಿಡುಗಡೆ. ಟಿಪ್ಪರ್ ಲಾರಿಯೇ ಬಂದು ಟಚ್ ಮಾಡಿದ್ದು.
ನಮಸ್ಕಾರ ಸ್ನೇಹಿತರೇ ಕಿರುತೆರೆಯ ಲೋಕಕ್ಕೆ ನಿನ್ನೆಯ ದಿನ ಬಹಳಷ್ಟು ದುಃಖದ ದಿನ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಯಾಕೆಂದರೆ ಇನ್ನೇನು ಜೀವನದ ಕುರಿತಂತೆ ಕನಸನ್ನು ಕಾಣುತ್ತಿದ್ದಾರೆ ಎಳೆಯ ವಯಸ್ಸಿನ ಮಗು ಸಮನ್ವಿ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಮ್ಮ ಮಕ್ಕಳ ಅನುಬಂಧವನ್ನು ಪ್ರೇಕ್ಷಕರಿಗೆ ರಸವತ್ತಾಗಿ ಕಟ್ಟಿಕೊಡುವ ಕಾರ್ಯಕ್ರಮವಾಗಿದ್ದಂತಹ ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಸ್ಪರ್ಧಿಯಾಗಿದ್ದಂತಹ ಸಮನ್ವಿ ತಮ್ಮ ತಾಯಿ ಅಮೃತ ನಾಯ್ಡು ಜೊತೆಗೆ ಕಾರ್ಯಕ್ರಮದಲ್ಲಿ ಸಾಕಷ್ಟು ಲವಲವಿಕೆಯಿಂದ ಭಾಗವಹಿಸುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮನಗೆದ್ದಿದ್ದಂತಹ ಪ್ರತಿಭಾವಂತ ಬಾಲಕಿ ಸಮನ್ವಿಗೆ ದೇವರು ಹೆಚ್ಚಿನ ಆಯುಷ್ಯ ಮಾತ್ರ ನೀಡಲಿಲ್ಲ. ಈಗಾಗಲೇ ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗ ಎನ್ನುವುದು ಸಾಲು ಸಾಲು ಮರದ ವಾರ್ತೆಗಳನ್ನು ಕೇಳಿ ಬಸವಳಿದಿತ್ತು.
ಈಗ ಈ ಮರಣದ ವಾರ್ತೆಗಳ ಸಾಲಿಗೆ ಸಮನ್ವಿಯ ಮರಣದ ವಾರ್ತೆ ಕೂಡ ಸೇರಿಕೊಂಡಿದ್ದು ಇನ್ನಷ್ಟು ದುಃಖವನ್ನು ಹೆಚ್ಚು ಮಾಡಿದೆ. ತಮ್ಮ ತಾಯಿಯೊಂದಿಗೆ ಬೆಂಗಳೂರಿನ ಕೋಣನಕುಂಟೆಯಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿರಬೇಕಾದರೆ ಹಿಂದಿನಿಂದ ಬಂದಂತಹ ಯಮಸ್ವರೂಪಿ ಟಿಪ್ಪರ್ ಡಿಕ್ಕಿ ಹೊಡೆದು ಸಮನ್ವಿ ಸ್ಥಳದಲ್ಲೇ ಮರಣ ಹೊಂದಿದ್ದಾಳೆ. ತಾಯಿ ಅಮೃತ ನಾಯ್ಡು ರವರಿಗೆ ಗಂಭೀರವಾದ ಗಾ’ಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕೂಡ ರೆಕಾರ್ಡ್ ಆಗಿದ್ದು ಸಿಸಿಟಿವಿ ಫೂಟೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರ ಕಣ್ಣಿನಲ್ಲಿ ಕಣ್ಣೀರು ಹರಿವಂತೆ ಮಾಡಿದೆ. ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಸಮನ್ವಿಯ ಮರಣಕ್ಕೆ ಕಂಬನಿ ಮಿಡಿದಿದ್ದಾರೆ.