ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಗೃಹಿಣಿಯರಿಗೆ ಗುಡ್ ನ್ಯೂಸ್, ಅಡುಗೆ ಎಣ್ಣೆಯ ದರದಲ್ಲಿ ಭಾರಿ ಇಳಿಕೆ. ಲೀಟರ್ ಗೆ ಎಷ್ಟು ಗೊತ್ತೇ??

7,478

ನಮಸ್ಕಾರ ಸ್ನೇಹಿತರೇ ಅಡುಗೆ ಮನೆ ಖುಷಿಯಾಗಿದ್ದರೇ, ಮನೆಯಲ್ಲಾ ಖುಷಿ ಎಂಬ ಮಾತು ಆಗಾಗ ಕೇಳಿ ಬರುತ್ತದೆ. ಕಳೆದೆರೆಡು ತಿಂಗಳಲ್ಲಿ ದಿನನಿತ್ಯ ಬಳಸುವ ಅಡುಗೆ ಎಣ್ಣೆಯ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿದ್ದವು. ಆಗ ಗೃಹಿಣಿಯರು ಕೇಂದ್ರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದರು. ಆದರೇ ಇದನ್ನು ಅರಿತ ಕೇಂದ್ರ ಅಡುಗೆ ಎಣ್ಣೆಗಳ ಆಮದು ಸುಂಕವನ್ನು ಕಡಿಮೆ ಮಾಡಿ ಮಾರುಕಟ್ಟೆ ಕೊಂಚ ಅಡುಗೆ ಎಣ್ಣೆಯ ಬೆಲೆಗಳನ್ನ ಇಳಿಸಿತ್ತು. ಆದರೇ ಈಗ ಮತ್ತೊಂದು ಗುಡ್ ನ್ಯೂಸ್ ಲಭಿಸಿದ್ದು ಅಡುಗೆ ಎಣ್ಣೆಗಳ ದರದಲ್ಲಿ ಭಾರಿ ಇಳಿಕೆ ಕಂಡಿದೆ‌.

ಅಡುಗೆ ಎಣ್ಣೆಯಲ್ಲಿ ಪ್ರಮುಖ ಬೇಡಿಕೆಯಾಗಿರುವ ಕಚ್ಚಾ ಪಾಮ್ ಆಯಿಲ್, ಕಚ್ಚಾ ಸೋಯಾಬೀನ್, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ತೆರಿಗೆ ಸುಂಕವನ್ನ ಶೇಕಡಾ 2.5 ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಅದಲ್ಲದೇ ದಾಸ್ತಾನುದಾರರು ಕೃತಕ ದಾಸ್ತಾನು ಮಾಡಿ , ಅಡುಗೆ ಎಣ್ಣೆಗಳ ಬೆಲೆ ಕೃತಕವಾಗಿ ಏರುವಂತೆ ಮಾಡುತ್ತಾರೆ. ಆದರೇ ಅದಕ್ಕೂ ಸಹ ಈಗ ಕಡಿವಾಣ ಹಾಕಲಾಗಿದೆ. ಆಮದು ಸುಂಕ ಕಡಿಮೆಯಾದ ಕಾರಣ ಪ್ರತಿಯೊಂದು ಅಡುಗೆ ಎಣ್ಣೆಯನ್ನು ತಯಾರಿಸುವ ಕಂಪನಿಗಳು ತಮ್ಮ ಸಗಟು ದರವನ್ನು ಕಡಿತಗೊಳ್ಳಿಸಿವೆ.

ಇದು ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯಾಗಿದ್ದು ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಪ್ರತಿ ಲೀಟರ್ ಎಣ್ಣೆಗೆ ಕಡಿಮೆಯೆಂದರೂ 15 ರಿಂದ 20 ರೂಪಾಯಿ ಕಡಿಮೆಯಾಗಿದೆ. ಹಾಗಾಗಿ ಇದು ಗ್ರಾಹಕರ ತಿಂಗಳ ಬಜೆಟ್ ಗೆ ಹೊಂದಿಕೆಯಾಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಕೊಂಚ ಸಮಾಧಾನ ಕಂಡಿದೆ. ಇದಲ್ಲದೇ ಮೂಲ ಎಣ್ಣೆಕಾಳುಗಳ ಬದಲು ಪರ್ಯಾಯ ಎಣ್ಣೆ ಖಾದ್ಯಗಳ ಬೆಳೆಗೂ ಸಹ ಭಾರತೀಯ ಬೀಜ ನಿಗಮ ಸಂಶೋಧನೆ ನಡೆಸುತ್ತಿದೆ. ಭವಿಷ್ಯದಲ್ಲಿ ಅಡುಗೆ ಎಣ್ಣೆಯ ಬೆಲೆ, ಹೆಚ್ಚಾಗುವುದನ್ನ ತಡೆಯಲು ಇದು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.