ನಮ್ಮನೆ ಯುವರಾಣಿಯಲ್ಲಿ ಹೊಸ ತಿರುವು ನೀಡಿರುವ ಈ ಚೆಲುವೆಯ ಪಾತ್ರದ ಮಹತ್ವವೇನು ಗೊತ್ತೇ?? ಕಥೆ ಹೇಗೆ ಮುಂದೆ ಸಾಗಲಿದೆ ಗೊತ್ತೇ?

14,323

ನಮಸ್ಕಾರ ಸ್ನೇಹಿತರೇ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಅನಿ ಹಾಗೂ ಮೀರಾ, ಅನಿರಾ ಜೋಡಿ ಮತ್ತೆ ಈ ಧಾರಾವಾಹಿಯಲ್ಲಿ ಮುಂದುವರೆಯದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಹೊಸ ಅಧ್ಯಾಯ ಹೇಗಿರುತ್ತೆ ಅಂತ ನೋಡುವ ಕುತೂಹಲ ವಿದ್ದರೂ ಅನಿರಾ ಜೋಡಿ ನಮ್ಮನೆ ಯುವರಾಣಿಯಲ್ಲಿ ಮುಂದೆಯೂ ಕಾಣಿಸಿಕೊಳ್ಳಬೇಕು ಎನ್ನುವುದು ಸಾಕಷ್ಟು ಜನರ ಬೇಡಿಕೆಯೂ ಕೂಡ. ಅದೇನೆ ಇರಲಿ ನಮ್ಮನೆ ಯುವರಾಣಿ ಹೊಸ ಅಧ್ಯಾಯದಲ್ಲಿ ಜೀವಾಹಿನಿಯ ಪರಿಚಿತ ಮುಖವಾದ ಖುಷಿ ಶಿವು ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಹೌದು ಸ್ನೇಹಿತರೆ, ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಹೊಸ ಅಧ್ಯಾಯಕ್ಕೆ ನಾಯಕಿಯಾಗಿ ಖುಷಿ ಶಿವು ಆಯ್ಕೆಯಾಗಿದ್ದಾರೆ. ಖುಷಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯ ಖಡಕ್ ವಿಲನ್. ಖಳನಾಯಕಿ ಅಭಿನಯಿಸಿದ್ರೂ ಇವರ ಮುದ್ದಾದ ಮುಖ ಜನರಿಗೆ ತುಂಬಾನೇ ಇಷ್ಟವಾಗಿತ್ತು. ಇದೀಗ ಈ ಸುಂದರಿ ಆಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ಧಿ ನೀಡಿದ್ದು ಕಲರ್ಸ್ ನ ಯುವರಾಣಿಯಲ್ಲಿ ರಾಜಕುಮಾರಿಯಾಗಿ ಮಿಂಚಲಿದ್ದಾರೆ ಎನ್ನುವುದು.

ನಮ್ಮನೆ ಯುವರಾಣಿ ಧಾರಾವಾಹಿಯ ಹೊಸ ಅಧ್ಯಾಯದಲ್ಲಿ ಕೂಷಿ ಹಳ್ಳಿಯಲ್ಲಿ ಇರುವ ಗಂಗಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಹಳ್ಳಿಯಲ್ಲಿ ಸ್ವತಂತ್ರವಾಗಿ ಹಾರಾಡುತ್ತ, ಖುಷಿಯಾಗಿ ಜೀವನ ನಡೆಸುವ ಗಂಗಾ ಬಾಳಲ್ಲಿ ಅನಿ-ಮೀರಾ ದೊಡ್ಡ ಟ್ವಿಸ್ಟ್ ನೀಡಲಿದ್ದಾರೆ. ಅನಿ ಹಾಗೂ ಮೀರಾ ಎಲ್ಲಿದ್ದಾರೆ ಎನ್ನುವ ವಿಷಯ ತಿಳಿದಿರುವುದು ಗಂಗಾಳಿಗೆ ಮಾತ್ರ. ಹಾಗಾದರೆ ಗಂಗಾ ಅನಿ ಮೀರಾ ಇರುವ ವಿಷಯವನ್ನು ಯಾರಿಗೆ ಹೇಳುತ್ತಾಳೆ, ಅನಿ ಮೀರಾ ವಾಪಾಸ್ ಬರುತ್ತಾರಾ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ನೀವು ಧಾರಾವಾಹಿಯ ಪ್ರತಿ ಎಪಿಸೋಡ್ ಗಳನ್ನೂ ನೋಡಬೇಕು. ಇನ್ನು ಈಕೆಯೇ ಮುಂದಿನ ದಿನಗಳಲ್ಲಿ ಧಾರಾವಾಹಿಯ ಪ್ರಮುಖ ನಟಿಯಾಗಲಿದ್ದು ಇವರ ಹಾಗೂ ನಾಯಕ ನಟನ ನಡುವಿನ ಪ್ರೇಮ ಕಥೆ ಕೂಡ ದೊಡ್ಡದಾಗಿ ಕಾಣಲಿದೆ. ಇದರೊಂದಿಗೆ ಗಂಗಾಳಾಗಿ ಅಭಿನಯಿಸಲಿರುವ ಖುಷಿಗೆ ವೀಕ್ಷಕರೂ ಆಲ್ ದಿ ಬೆಸ್ಟ್ ಹೇಳಿದ್ದಾರೆ.