ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಗ್ಗೆ ಷಾಕಿಂಗ್ ಮಾಹಿತಿ ನೀಡಿದ ಗೂಗಲ್, ಅಭಿಮಾನಿಗಳಂತೂ ಫುಲ್ ಖುಷ್. ಬೇರೆ ನಟರ ಅಭಿಮಾನಿಗಳು ಉರ್ಕೊಂಡಿದ್ದು ಯಾಕೆ ಗೊತ್ತೇ?

205

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ಅಗ್ರಗಣ್ಯರಾಗಿ ಕಾಣಸಿಗುತ್ತಾರೆ. ಲೈಟ್ ಬಾಯ್ ನಿಂದ ಹಿಡಿದು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕನಟನಾಗಿ ರೂಪುಗೊಳ್ಳುವವರೆಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪಟ್ಟಂತಹ ಪರಿಶ್ರಮ ಯುವಜನತೆಗೆ ಸ್ಪೂರ್ತಿಯಾಗಿರುವಂತದ್ದು.

ಇಂದಿಗೂ ಕೂಡ ಅಭಿಮಾನಿಗಳಿಂದ ಆರಾಧಿಸಲ್ಪಡುವಂತಹ ಕನ್ನಡ ಚಿತ್ರರಂಗದ ಮೇರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಿರ್ಮಾಪಕರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೊದಲ ಆಯ್ಕೆಯಾಗಿರುತ್ತಾರೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮಾರುಕಟ್ಟೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಇದೆ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿಬಾಸ್ ಎಂದು ಕರೆಯುತ್ತಾರೆ. ಇನ್ನು ತಮ್ಮ ಅಭಿಮಾನಿಗಳನ್ನು ದರ್ಶನ್ ಅವರು ಪ್ರೀತಿಯಿಂದ ಸೆಲೆಬ್ರಿಟಿಗಳು ಎಂಬುದಾಗಿ ಕರೆಯುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ನಟ ಕೂಡ ದರ್ಶನ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ದರ್ಶನ್ ರವರ ಹೆಸರಿನಲ್ಲಿ ಮತ್ತೊಂದು ದಾಖಲೆ ನಿರ್ಮಿತವಾದಂತಿದೆ. ಹೌದು ಇದು ಕೂಡ ಗೂಗಲ್ ನಲ್ಲಿ ನಿರ್ಮಿತವಾಗಿರುವ ದಾಖಲೆ.. ನೀವು ಗೂಗಲ್ ನಲ್ಲಿ ಭಾರತ ಚಿತ್ರರಂಗದ ಬಾಸ್ ಯಾರು ಎಂದು ಟೈಪ್ ಮಾಡಿದರೆ ಅದಕ್ಕೆ ಉತ್ತರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರು ಬರುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದ್ದು ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೆಮ್ಮೆ ಎಂದು ಹೇಳಿದರೂ ತಪ್ಪಾಗಲಾರದು. ಗೂಗಲ್ ಕೂಡ ದರ್ಶನ್ ರವರನ್ನು ಭಾರತ ಚಿತ್ರರಂಗದ ಬಾಸ್ ಎನ್ನುವುದಾಗಿ ಕರೆಯುತ್ತಿದೆ ಎಂಬುದು ನಿಜವಾಗಲು ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯ.