ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವ ಪುಟ್ಟಕ್ಕನ ಮಕ್ಕಳು ಚಿತ್ರೀಕರಣದಿಂದ ಇದ್ದಕ್ಕಿದ್ದ ಹಾಗೆ ಹೊರಬಂದ ಉಮಾಶ್ರೀ. ಯಾಕೆ ಗೊತ್ತೇ???

7,275

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಜೀ ಕನ್ನಡ ವಾಹಿನಿ ಹಲವಾರು ಧಾರವಾಹಿಗಳು ಪ್ರೇಕ್ಷಕರ ಅಚ್ಚುಮೆಚ್ಚಿನದಾಗಿವೆ. ನಾವು ಇಂದು ಮಾತನಾಡಲು ಹೊರಟಿರುವುದು ಇತ್ತೀಚಿನ ದಿನಗಳಲ್ಲಿ ಟಿಆರ್ಪಿ ವಿಚಾರದಲ್ಲಿ ದಾಖಲೆಯನ್ನು ನಿರ್ಮಿಸುತ್ತಿರುವ ಪುಟ್ಟಕ್ಕನ ಮಕ್ಕಳು ದಾರವಾಹಿಯ ಕುರಿತಂತೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಗಂಡನಿಂದ ದೂರವಾದಂತಹ ಮಹಿಳೆ ಮೆಸ್ ನಡೆಸಿ ತಮ್ಮ ಮೂರು ಹೆಣ್ಣು ಮಕ್ಕಳನ್ನು ಸಾಕುವ ಕಥೆಯಾಗಿದೆ.

ಇನ್ನು ಈ ದಾರವಾಹಿಯಲ್ಲಿ ಪುಟ್ಟಕ್ಕನ ಪಾತ್ರ ಅಂದರೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಟಿಯೆಂದರೆ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ರಾಜಕಾರಣ ಕ್ಷೇತ್ರದಲ್ಲೂ ಕೂಡ ಈಗಾಗಲೇ ಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಉಮಾಶ್ರೀಯವರು. ಎಲ್ಲರೂ ಕೂಡ ಈಗಾಗಲೇ ಉಮಾಶ್ರೀಯವರ ಪುಟ್ಟಕ್ಕನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯನ್ನು ನಿರ್ದೇಶಿಸಿರುವ ಆರೂರು ಜಗದೀಶ್ ರವರೇ ಈ ಧಾರವಾಹಿಯನ್ನು ಕೂಡ ನಿರ್ದೇಶಿಸಿದ್ದಾರೆ.

ಇತ್ತೀಚಿಗಷ್ಟೇ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರವಾಹಿಯ ಚಿತ್ರೀಕರಣದ ಸೆಟ್ ನಿಂದ ಹೊರ ಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗಷ್ಟೇ ಉಮಾಶ್ರೀಯವರು ಮೇಕೆದಾಟು ಪಾದಯಾತ್ರೆಗೆ ಕೂಡ ಹೋಗಿದ್ದರು. ಅದಾದನಂತರ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಚಿತ್ರೀಕರಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಕಾಲಿನ ಮೇಲೆ ಬಿಸಿ ನೀರು ಬಿದ್ದು ಅವರಿಗೆ ಗಾ’ಯವಾಗುತ್ತದೆ. ಆಗ ಅವರನ್ನು ಅಲ್ಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅತಿ ವೇಗವಾಗಿ ಗುಣಮುಖರಾಗುವ ಎಲ್ಲ ನಿರೀಕ್ಷೆಗಳು ಕೂಡ ಇವೆ.