ನೀಲಿ ಕಣ್ಣಿನ ಪರಮ ಸುಂದರಿ ಎಂದೇ ಹೆಸರಾಗಿದ್ದ ಈಕೆಗೆ ತನ್ನ ಸೌಂದರ್ಯವೇ ಏನು ಮಾಡಿತು ಗೊತ್ತೇ?? ಸ್ಟಾರ್ ಆಗಿ ಮೆರದವಳು ಈಗ ಏನಾಗಿದ್ದರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹೆಣ್ಣುಮಕ್ಕಳಲ್ಲಿ ಮೊದಲಿಗೆ ನೋಡುವುದು ಅವರ ಸೌಂದರ್ಯವನ್ನು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಸೌಂದರ್ಯ ಮೂರ್ತಿಯೇ ಅವತಾರವೆತ್ತಿ ಬಂದಂತಿತ್ತು ಆಕೆಯ ಸೌಂದರ್ಯ. ಹೌದು ಗೆಳೆಯರೇ ನಾವು ಈಗ ಮಾತನಾಡಲು ಹೊರಟಿರುವುದು ತನ್ನ ಬುದ್ಧಿವಂತಿಕೆ ಹಾಗೂ ಸೌಂದರ್ಯದ ಮಿಶ್ರಣದಿಂದಾಗಿ ಹೆಸರುವಾಸಿಯಾಗಿದ್ದ ರೌದಾ ಅಲ್ತೀಫ್ ಕುರಿತಂತೆ.
ಇವಳು ಹುಟ್ಟಿಬೆಳೆದದ್ದು ಮಾಲ್ಡೀವ್ಸ್ ನಲ್ಲಿ. ಇಷ್ಟೊಂದು ಸೌಂದರ್ಯದಿಂದಾಗಿ ಜನಪ್ರಿಯಳಾಗಿದ್ದ ಈಕೆ ಬೇರೆಯವರಿಂದ ತನ್ನ ಜೀವವನ್ನು ಕಳೆದುಕೊಳ್ಳಬೇಕಾಗಿ ಬಂದಿದ್ದೇ ವಿಷಾದನೀಯ ಎಂದು ಹೇಳಬಹುದಾಗಿದೆ. ಇವಳ ಜೀವನದ ಚರಿತ್ರೆಯ ಕುರಿತಂತೆ ನಿಮಗೆ ಸಂಪೂರ್ಣವಾಗಿ ಹೇಳಲಿದ್ದೇವೆ ತಪ್ಪದೇ ಕೊನೆಯವರೆಗೂ ಲೇಖನಿಯನ್ನು ಓದಿ. ರೌದಾ ತಂದೆ ತಾಯಿ ಇಬ್ಬರೂ ಕೂಡ ಮಾಲ್ಡೀವ್ಸ್ ನಲ್ಲಿ ಸರಕಾರಿ ಕೆಲಸದಲ್ಲಿದ್ದವರು. ಇತ್ತ ಈಕೆ ಮಡಿಕಲ್ ಓದಬೇಕೆಂಬ ಹಂಬಲವಿದ್ದವಳು.

ಮಾಲ್ಡಿವ್ಸ್ ಸರ್ಕಾರ ಹೊರದೇಶದಲ್ಲಿ ಸೀಟ್ ಪಡೆದಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಿ ಐದು ವರ್ಷಗಳ ಕಾಲ ಓದಿಸುವ ಸ್ಕೀಮ್ ಅನ್ನು ಹೊಂದಿತ್ತು. ಭಾರತದಲ್ಲಿ ಸಾಕಷ್ಟು ಪೈಪೋಟಿ ಇದ್ದ ಕಾರಣ ರೌದಾ ಬಾಂಗ್ಲಾದೇಶದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೀಟನ್ನು ಪಡೆಯುತ್ತಾಳೆ. ಅಲ್ಲಿನ ಹಾಸ್ಟೆಲ್ನಲ್ಲಿ ರೌಧಾ ಕೂಡ ತಂಗಲು ಪ್ರಾರಂಭಿಸುತ್ತಾಳೆ. ಆದರೆ ಬಾಂಗ್ಲಾ ದೇಶದಲ್ಲಿರುವ ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರ ಮೇಲೆ ಇದ್ದಂತಹ ಕಟ್ಟುಪಾಡುಗಳನ್ನು ನೋಡಿ ರೌದಾ ಶಾ’ಕ್ ಆಗುತ್ತಾಳೆ.

ಇನ್ನು ಈಕೆ ಕೂಡ ಕಾಲೇಜಿನಲ್ಲಿ ಇರಬೇಕಾದರೆ ಮಾತ್ರ ಬುರ್ಖಾ ಧರಿಸಿ ಓಡಾಡುತ್ತಿದ್ದಳು ಕಾಲೇಜಿನಿಂದ ಹೊರ ಬಂದ ಮೇಲೆ ತನ್ನ ಇಷ್ಟದಂತೆ ಇರುತ್ತಿದ್ದಳು. ಇನ್ನು ಈಕೆಯ ಸೌಂದರ್ಯ ಹಾಗೂ ದೇಹಸಿರಿಯನ್ನು ವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ದೆಹಲಿಯ ಒಂದು ಕಂಡ ಕೂಡ ಆಕೆಯನ್ನು ಭಾರತಕ್ಕೆ ಕರೆಸಿಕೊಂಡು ಗೋವಾದಲ್ಲಿ ಫೋಟೋಶೂಟ್ ಮಾಡಿಕೊಂಡಿತ್ತು. ಇದು ಎಷ್ಟರ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು ಎಂದರೆ ಮಾಡೆಲಿಂಗ್ ಕ್ಷೇತ್ರದಲ್ಲಿ ರೌದಾ ಗೆ ಅಮೆರಿಕಾದ ಲಾಸ್ ಎಂಜಲೀಸ್ ಪ್ಯಾರಿಸ್ ಲಂಡನ್ ಹೀಗೆ ಹಲವಾರು ದೇಶಗಳಿಂದ ಬುಲಾವ್ ಬರುತ್ತದೆ.
ಆದರೆ ರೌದಾ ಮಾತ್ರ ತಾನು ಡಾಕ್ಟರಾಗಿ ಬಡಜನರ ಸೇವೆ ಮಾಡಬೇಕೆಂಬ ಗುರಿಯನ್ನು ಹೊಂದಿರುತ್ತಾಳೆ. ಆಗಾಗ ಕಾಲೇಜಿನಲ್ಲಿ ಹಾಗೂ ಢಾಕಾದಲ್ಲಿ ನಡೆಯುತ್ತಿದ್ದಂತಹ ಫಾಶನ್ ಶೋ ಹಾಗೂ ರಾಂಪ್ ವಾಕ್ ಗಳಲ್ಲಿ ಭಾಗವಹಿಸುತ್ತಿದ್ದಳು. ಈ ಸಂದರ್ಭದಲ್ಲಿ ಹಲವಾರು ಸಂಸ್ಥೆಗಳಿಂದ ಆಕೆಯ ಬ್ಯಾಂಕ್ ಖಾತೆಗೆ ಹಣ ಹರಿದುಬರುತ್ತಿತ್ತು. ಇದನ್ನು ಹೆಚ್ಚಾಗಿ ಆಕೆ ತನ್ನ ಮನೆಯವರಿಗೆ ನೀಡುತ್ತಿದ್ದಳು. ಈ ಸಂದರ್ಭದಲ್ಲಿ ಅಲ್ಲಿರುವ ಮುಸ್ಲಿಂ ಸಂಘ-ಸಂಸ್ಥೆಗಳು ನೀನು ಮುಸ್ಲಿಂ ಮಹಿಳೆಯಾಗಿ ಹೀಗೆಲ್ಲ ಮಾಡುತ್ತಿಯಲ್ಲ ನೀನು ನಮ್ಮ ಧರ್ಮಕ್ಕೆ ಕಳಂಕ ನೀನು ಮುಸ್ಲಿಂ ಹೆಣ್ಣು ಮಗಳು ಅಲ್ಲ ಎಂಬುದಾಗಿ ಟೀಕಿಸುತ್ತಿದ್ದರು.

ಆದರೆ ರೌದಾ ಗೆ ಮನೆಯವರ ಹಾಗೂ ಸ್ನೇಹಿತರ ಬೆಂಬಲವಿತ್ತು. ಅದರಲ್ಲೂ ಬಾಂಗ್ಲಾದೇಶದಲ್ಲಿ ರೌದಾ ಗೆ ಅತ್ಯಂತ ಕ್ಲೋಸ್ ಫ್ರೆಂಡ್ ಎಂದರೆ ಸೀರತ್ ಪರ್ವೀನ್. ಆಕೆ ಕೂಡ ರೌದಾಳಂತೆ ಓದುವುದರಲ್ಲಿ ಸದಾ ಮುಂದು. ರೌದಾ ಇನ್ನೇನು ಚೆನ್ನಾಗಿ ಕಲಿತು ಆಸ್ಟ್ರೇಲಿಯಾಗೆ ಉನ್ನತ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಹೋಗಬೇಕೆಂಬ ಹೆಬ್ಬಯಕೆ ಹೊಂದಿದ್ದಳು. ಅವಳ ಕನಸನ್ನು ಪೂರೈಸುವ ಮೊದಲೇ ಆಕೆ ಅಕಾಲಿಕವಾಗಿ ಮರಣಹೊಂದುತ್ತಾಳೆ ಎಂಬುದು ಅವಳಿಗೆ ಕೂಡ ತಿಳಿದಿರಲಿಲ್ಲ. ಅಂದು ಸೀರತ್ ರೌದಾಗೆ ತಾನೆಲ್ಲೋ ಹೊರಗೆ ಹೋಗಿ ಬರುತ್ತೇನೆ ಎಂಬುದಾಗಿ ಹೇಳಿ ಹೋಗುತ್ತಾಳೆ. ರೌದಾ ರೂಮಿನಲ್ಲಿ ಒಬ್ಬಳೇ ಇದ್ದಳು.
ಆದರೆ ಸೀರತ್ ಹೊರಗೆ ಹೋಗಿ ಎರಡು ಗಂಟೆಗಳ ನಂತರ ರೂಮಿಗೆ ಬಂದಾಗ ಫ್ಯಾನಿನಲ್ಲಿ ರೌದಾ ನೇತಾಡುವ ಸ್ಥಿತಿಯಲ್ಲಿ ಕಂಡುಬರುತ್ತಾಳೆ. ಆಕೆ ಸಹಾಯಕ್ಕಾಗಿ ಕಿರುಚಿಕೊಂಡಾಗ ಬಾಯ್ಸ್ ಹಾಸ್ಟೆಲ್ ಹುಡುಗರು ಬಂದು ರೌದಾ ಳ ದೇಹವನ್ನು ಕೆಳಗಿಳಿಸಿ ಆಕೆ ಮರಣ ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸುತ್ತಾರೆ. ಖುಷಿ ಖುಷಿಯಿಂದಲೇ ಇದ್ದಂತಹ ರೌದಾ ಯಾಕೆ ಹೀಗೆ ಮಾಡಿಕೊಂಡು ಎಂಬುದು ಸೀರತ್ ಗೂ ಕೂಡ ಗೊಂದಲವಾಗುತ್ತದೆ. ದೂರದ ದೇಶದಲ್ಲಿದ್ದ ಆಕೆಯ ತಂದೆ-ತಾಯಿಯರು ಕೂಡ ಅಲ್ಲಿಗೆ ಬರುತ್ತಾರೆ. ಮೊದಲಿಗೆ ಪೊಲೀಸರು ಇದನ್ನು ಆಕೆಯ ನಿರ್ಧಾರವೇ ಎಂದು ಪರಿಗಣಿಸಿ ದಾಖಲೆಯನ್ನು ಬರೆದುಕೊಳ್ಳುತ್ತಾರೆ.

ಆದರೆ ಅಲ್ಲಿ ರೌದಾ ಕೊನೆ ಉಸಿರು ಹೇಳುವುದಕ್ಕಿಂತ ಮುಂಚೆ ಟಿಫನ್ ಹಾಗೂ ಕಾಫಿ ತಯಾರಾಗುತ್ತಿದ್ದದು ಕಂಡುಬರುತ್ತದೆ. ಒಂದು ವೇಳೆ ಆಕೆ ಇದು ಆಕೆಯ ನಿರ್ಧಾರವೇ ಆಗಿದ್ದರೆ ಯಾಕೆ ಇದನ್ನೆಲ್ಲ ಮಾಡಬೇಕಾಗಿತ್ತು ಎಂಬುದು ಕೂಡ ಅನುಮಾನ ಬರುತ್ತದೆ. ಇನ್ನೊಂದು ಫಾರೆನ್ಸಿಕ್ ರಿಪೋರ್ಟ್ ನಲ್ಲಿ ಕೂಡ ಆಕೆ ಮೈಮೇಲೆ ಆಗಂತುಕ ರಿಂದ ನಡೆದಂತಹ ಹ’ಲ್ಲೆಯ ವಿವರಗಳು ಕೂಡ ಕಂಡುಬರುತ್ತದೆ. ಕೆಲವರು ಹೇಳುವ ಪ್ರಕಾರ ಅಲ್ಲಿನ ಧಾರ್ಮಿಕ ದುಷ್ಟಶಕ್ತಿಗಳು ಈ ಕೆಲಸವನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ರೌದಾಳ ಗೆಳತಿ ಸೀರತ್ ಳ ಕುಮ್ಮಕ್ಕು ಇದೆ ಎಂಬುದಾಗಿ ಕೂಡ ಹೇಳಲಾಗುತ್ತಿದೆ. ಅದೇನೇ ಇರಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಚಿವುಟಿದಂತಾಗಿದೆ. ಇದರ ಕುರಿತಂತೆ ಅನೇಕ ಚಳುವಳಿಗಳಿಗೂ ಪ್ರತಿಭಟನೆಗಳು ನಡೆದರೂ ಕೂಡ ಇದುವರೆಗೂ ಯಾವುದೇ ಪರಿಹಾರ ಹೊರಬಂದಿಲ್ಲ.