ಡ್ಯಾನ್ಸಿಂಗ್ ಚಾಂಪಿಯನ್ ಗೆ ಮೇಘನಾ ರವರನ್ನು ಫುಲ್ ಟೈಮ್ ಜಡ್ಜ್ ಆಗಿ ಕರೆದರೂ ಒಪ್ಪಿಕೊಳ್ಳದೇ ಅತಿಥಿಯಾಗಿದ್ದು ಯಾಕೆ ಗೊತ್ತೆ?? ಭೇಷ್ ಎಂದ ನೆಟ್ಟಿಗರು.

741

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳು ಟಿವಿ ಚಾನೆಲ್ ಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಸಿನಿಮಾ ಹಾಗೂ ಧಾರಾವಾಹಿಗಳಿಗಿಂತ ಹೆಚ್ಚಾಗಿ ಜನರಿಗೆ ಈ ಕಾರ್ಯಕ್ರಮಗಳು ಕೂಡ ಇಷ್ಟವಾಗುತ್ತಿವೆ. ಈ ಕಾರಣದಿಂದಾಗಿಯೇ ಹಲವಾರು ವಾಹಿನಿಗಳು ಸ್ಪರ್ಧೆಗೆ ಬಿದ್ದವರಂತೆ ಒಬ್ಬರಿಗಿಂತ ಒಬ್ಬರು ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ ಎನ್ನುವ ಕಾರ್ಯಕ್ರಮ ಪ್ರಾರಂಭವಾಗಿತ್ತು ಎಂಬುದು ನಮಗೆಲ್ಲ ಗೊತ್ತಿದೆ. ಅದೇ ಕಾರ್ಯಕ್ರಮದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

ಈ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ಅವರು ನಿರೂಪಣೆ ಮಾಡುತ್ತಿದ್ದು ವಿಜಯ್ ರಾಘವೇಂದ್ರ ಹಾಗೂ ಮಯೂರಿ ರವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಮೊದಲನೇ ವಾರದಲ್ಲಿ ತೀರ್ಪುಗಾರರಾಗಿ ನಟಿ ಮೇಘನಾ ರಾಜ್ ರವರು ಕೂಡ ತೀರ್ಪುಗಾರರಾಗಿ ಆಗಮಿಸಿದ್ದು ಆದರೆ ಮೊದಲನೇ ವಾರಕ್ಕೆ ಅವರು ಕಾರ್ಯಕ್ರಮದಿಂದ ಹೊರ ಹೋಗಿದ್ದಾರೆ. ಇದರ ಕುರಿತಂತೆ ಹಲವಾರು ಅನುಮಾನಗಳು ಹಾಗೂ ಗೊಂದಲಗಳಿವೆ. ಇದರ ಕುರಿತು ತಮಗಿರುವ ಎಲ್ಲಾ ಗೊಂದಲಗಳನ್ನು ಕೂಡ ನಾವು ನಿವಾರಿಸುತ್ತೇವೆ ಬನ್ನಿ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೇಘನಾ ರಾಜ್ ರವರು ಚಿರು ಸರ್ಜಾ ರವರನ್ನು ಕಳೆದುಕೊಂಡ ಮೇಲೆ ದುಃಖದಲ್ಲಿ ಒಂಟಿಯಾಗಿದ್ದರು. ಅವರ ಜೀವನದಲ್ಲಿ ಆಸರೆಯಾಗಿ ಬಂದಿದ್ದು ಜೂನಿಯರ್ ಚಿರು ಸರ್ಜಾ. ಇತ್ತೀಚಿನವರೆಗೂ ಕೂಡ ಯಾವುದೇ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅಥವಾ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಮೇಘನಾರಾಜ್ ರವರು ಕಾಣಿಸಿಕೊಂಡಿರಲಿಲ್ಲ. ಚಿರು ಸರ್ಜಾ ರವರ ಜನ್ಮ ದಿನದ ವಿಶೇಷವಾಗಿ ತಮ್ಮ ಹೊಸ ಚಿತ್ರಗಳ ಘೋಷಣೆಯನ್ನು ಕೂಡ ಮಾಡುತ್ತಾರೆ. ಇತ್ತೀಚಿಗಷ್ಟೇ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದ ತೀರ್ಪುಗಾರರಾಗಿ ಬರುತ್ತಾರೆ ಎಂಬ ವಿಚಾರವನ್ನು ಕೂಡ ಹಂಚಿಕೊಳ್ಳುತ್ತಾರೆ.

ಮೊದಲನೇ ವಾರಕ್ಕೆ ಕಾರ್ಯಕ್ರಮದಿಂದ ಹೊರ ಹೋಗಿರುವ ಮೇಘನಾರಾಜ್ ರವರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಕೇವಲ ಅತಿಥಿ ತೀರ್ಪುಗಾರರಾಗಿ ಬಂದಿದ್ದರು ಎಂಬುದಾಗಿ ಸುದ್ದಿಯನ್ನು ಹರಿದಾಡಿ ಸಲಾಗುತ್ತದೆ. ಆದರೆ ಇದು ನಿಜವಾಗಿಯೂ ಪೂರ್ಣವಾಗಿ ಸತ್ಯವಲ್ಲ. ಯಾಕೆಂದರೆ ವಾಹಿನಿಯವರು ಮೇಘನಾ ರಾಜ್ ರವರನ್ನು ಡಾನ್ಸ್ ಚಾಪಿಯನ್ ಕಾರ್ಯಕ್ರಮದ ಪರ್ಮನೆಂಟ್ ತೀರ್ಪುಗಾರರನ್ನಾಗಿ ಕರೆದಿತ್ತು. ಈ ಕಾರ್ಯಕ್ರಮ ಖಂಡಿತವಾಗಿಯೂ ಮೇಘನರಾಜ್ ರವರಿಗೆ ಒಂದು ಒಳ್ಳೆ ಹೆಸರನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ವಾಗಿತ್ತು. ಆದರೆ ಮೇಘನರಾಜ ರವರು ಈ ಅವಕಾಶವನ್ನು ತಮ್ಮ ಕೈಗೆತ್ತಿಕೊಳ್ಳಲಿಲ್ಲ.

ವಾಹಿನಿ ಮೇಘನರಾಜ್ ರವರಿಗೆ ಡಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮದ ಪ್ರತಿ ಎಪಿಸೋಡ್ ಗೆ 1.4 ಲಕ್ಷ ರೂಪಾಯಿ ಸಂಭಾವನೆ ನೀಡುವುದಾಗಿ ಕೂಡ ಹೇಳಿತ್ತು. ಆದರೆ ಮೇಘನಾ ರವರು ಈ ಕಾರ್ಯಕ್ರಮಕ್ಕೆ ತೀರ್ಪುಗಾರರನ್ನಾಗಿ ಬೇರೆಯವರನ್ನು ಮಾಡಿ ಎಂಬುದಾಗಿ ಹೇಳುತ್ತಾರೆ ಇದು ಕೂಡ ಒಂದು ಒಳ್ಳೆ ಕಾರಣವಿದೆ. ಕಲರ್ಸ್ ಕನ್ನಡ ವಾಹಿನಿಯವರು ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದ ಫುಲ್ ಟೈಮ್ ಜಡ್ಜ್ ಆಗಿ ಎಂದು ಕೇಳಿದಾಗ ಮೇಘನರಾಜ ರವರು ಇಲ್ಲ ನಾನು ಆ ಜಾಗಕ್ಕೆ ಸೂಕ್ತಳಲ್ಲ. ಪ್ರತಿಭೆ ಇರುವವರಿಗೆ ಅವಕಾಶ ನೀಡುವ ವೇದಿಕೆ ಅದು ಅದಕ್ಕೆ ಸೂಕ್ತವಾದ ತೀರ್ಪುಗಾರರನ್ನು ಕರೆದು ತನ್ನಿ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಮೊದಲ ವಾರದ ಮಟ್ಟಿಗೆ ಅತಿಥಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಈ ವಿಚಾರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸುದ್ದಿಯನ್ನು ಮಾಡಿದ್ದು ನೆಟ್ಟಿಗರು ನಟಿ ಮೇಘನಾ ರಾಜ್ ರವರ ಕುರಿತಂತೆ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ. ಆದರೂ ಕೂಡ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಅವರನ್ನು ಚಿಕ್ಕ ಪರದೆ ಮೇಲೆ ಕಾಣಬಯಸಿದ್ದ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿಯಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.