ತನ್ನ ಪತ್ನಿಗಾಗಿ ಒಮ್ಮೆಲೇ ಲಕ್ಷಾಂತರ ರೂಪಾಯಿ ಬಿಟ್ಟ ನೇಹಾ ಪತಿ ಚಂದನ್, ಇದೇನ್ ಇದು ರಾಜ ರಾಣಿಯ ಹೊಸ ಕಥೆ. ಏನು ಗೊತ್ತೇ??

1,762

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಜೋಡಿಗಳು ಬಗ್ಗೆ ನೀವು ಕೇಳಿದ್ದೀರಿ ಹಾಗೂ ಇಷ್ಟಪಟ್ಟಿದ್ದೀರಿ ಕೂಡ. ಇಂದು ನಾವು ಹೇಳಲು ಹೊರಟಿರುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಜೋಡಿಯ ಕುರಿತಂತೆ. ಹೌದು ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯ ರಾಜರಾಣಿ ಕಾರ್ಯಕ್ರಮದ ವಿಜೇತರಾಗಿರುವ ನೇಹಾ ಹಾಗೂ ಚಂದನ್ ಜೋಡಿಯ ಕುರಿತಂತೆ. ಇವರಿಬ್ಬರ ಪ್ರೀತಿಯ ಸ್ಟೋರಿ ಎನ್ನುವುದು ಈಗಾಗಲೇ ರಾಜರಾಣಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ಕೂಡ ಪ್ರಚಲಿತವಾಗಿದೆ.

25 ವರ್ಷಗಳ ಕಾಲದ ಇವರ ಪ್ರೀತಿಯನ್ನು ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ. ಪ್ರೀತಿ ಮಾಡೋದು ಸುಲಭ ಆದರೆ ಅದನ್ನು ಕೊನೆವರೆಗೂ ಕೂಡ ಕಾಪಾಡಿಕೊಳ್ಳಬೇಕಾಗಿದೆ ನಿಜವಾದ ಪ್ರೀತಿ ಎಂಬುದಾಗಿ ಚಂದನ್ ರವರು ಹೇಳಿದರು. ಅದಕ್ಕಾಗಿಯೇ ಚಂದನ ರವರು ಚಿಕ್ಕವಯಸ್ಸಿನಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡಿ ತಮ್ಮ ಭವಿಷ್ಯಕ್ಕಾಗಿ ಕೂಡ ಸಾಕಾಗುವಂತೆ ಹಣವನ್ನು ಸಂಪಾದಿಸಿದರು. ಆನಂತರವೇ ನೇಹಾ ರವರನ್ನು ಬೆಂಗಳೂರಿಗೆ ಬಂದು ಮದುವೆಯಾಗಿದ್ದಾರೆ. ಲಾಕ್ಡೌನ್ ಕಾರಣದಿಂದಾಗಿ ಇಲ್ಲೇ ಬಂದು ನೆಲೆಸಿದ್ದ ಚಂದನ್ ರವರು ನಂತರ ಕಲರ್ಸ್ ಕನ್ನಡ ವಾಹಿನಿಯ ರಾಜರಾಣಿ ಕಾರ್ಯಕ್ರಮಕ್ಕೆ ತಮ್ಮ ಪತ್ನಿ ಸ್ನೇಹ ರವರ ಜೊತೆಗೆ ಹೋಗಿ ವಿಜೇತ ರಾಗುತ್ತಾರೆ. ಕಾರ್ಯಕ್ರಮದಲ್ಲಿ ಇವರಿಬ್ಬರು ಇದ್ದಷ್ಟು ದಿನ ಪ್ರತಿಯೊಬ್ಬ ವೀಕ್ಷಕರು ಕೂಡ ಇವರಿಬ್ಬರನ್ನು ಮೆಚ್ಚಿಕೊಂಡಿದ್ದರು.

ಈ ಸಂದರ್ಭದಲ್ಲಿ ಚಂದನ್ ರವರು ಕೆಲಸದ ಕಾರಣವಾಗಿ ವಿದೇಶದಲ್ಲೇ ಇರುವುದರಿಂದಾಗಿ ನನಗೆ ಸಮಯವನ್ನು ಸರಿಯಾಗಿ ನೀಡುವುದಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದರು. ಈಗ ಲಾಕ್ಡೌನ್ ಕಳೆದಿದ್ದು ಪತ್ನಿಗೋಸ್ಕರ ಚಂದನ್ ರವರು ವಿದೇಶದಲ್ಲಿ ಇದ್ದಂತಹ ಲಕ್ಷಾಂತರ ಸಂಬಳ ಸಿಗುವ ಕೆಲಸವನ್ನು ಬಿಟ್ಟು ಪತ್ನಿಯೊಂದಿಗೆ ಸಂಪೂರ್ಣವಾಗಿ ಸಮಯ ಕಳೆಯಲು ಸಿದ್ಧರಾಗಿದ್ದಾರೆ. ಪತ್ನಿ ಆಸೆಯಂತೆ ಅವರ ಜೊತೆಗೆ ತಾವು ಗಳಿಸಿರುವ ಸಂಪಾದನೆಯಲ್ಲಿ ನೆಮ್ಮದಿಯ ಬದುಕನ್ನು ಸಾಧಿಸಲು ಸಿದ್ಧರಾಗಿದ್ದಾರೆ. ಈಗ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಕಾರ್ಯಕ್ರಮ ವಾಗಿರುವ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಕೂಡ ಚಂದನ್ ಅವರಿಗೆ ಅವಕಾಶ ಸಿಕ್ಕಿದ್ದು ಇದಕ್ಕೆ ಅವರ ಪತ್ನಿಯಾಗಿರುವ ನೇಹಾ ರವರ ಸಂಪೂರ್ಣ ಬೆಂಬಲ ಕೂಡ ಇದೆ. ಈ ಕಾರ್ಯಕ್ರಮದಲ್ಲಿ ಕೂಡ ಅವರು ವಿಜಯಶಾಲಿಯಾಗಿ ಎಂದು ಹಾರೈಸೋಣ.