ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಿಂದ ಹೊರಗುಳಿದ ಯಶಸ್ವಿನಿ ಹಾಗೂ ವಂಶಿಕ ಅಮ್ಮ ಮಗಳ ಜೋಡಿ ಯಾಕೆ ಗೊತ್ತಾ??

4,239

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ವಾಹಿನಿಯ ರಿಯಾಲಿಟಿ ಶೋ ಕಾರ್ಯಕ್ರಮಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಪ್ರೇಕ್ಷಕರು ಕೂಡ ಈ ಕಾರ್ಯಕ್ರಮಗಳನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ. ಅದರಲ್ಲೂ ರಾಜಾರಾಣಿ ಕಾರ್ಯಕ್ರಮದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮವಂತೂ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿದೆ. ಅಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯ ಹಾಗೂ ಪ್ರೀತಿಯನ್ನು ತೋರಿಸುವ ಕಾರ್ಯಕ್ರಮ ನಮ್ಮಮ್ಮ ಸೂಪರ್ಸ್ಟಾರ್ ಆಗಿದೆ.

ಈ ಕಾರ್ಯಕ್ರಮದಲ್ಲಿ ಅನುಪಮ ಗೌಡ ರವರು ನಿರೂಪಕಿಯಾಗಿ ಕಾಣಿಸಿಕೊಂಡರೆ, ತೀರ್ಪುಗಾರರಾಗಿ ಸೃಜನ್ ಲೋಕೇಶ್ ನಟಿ ತಾರಾ ಹಾಗೂ ಅನು ಪ್ರಭಾಕರ್ ಅವರು ಕಾಣಿಸಿಕೊಳ್ಳುತ್ತಾರೆ. ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕರ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದಿತ್ತು. ಕಾರ್ಯಕ್ರಮ ಆರಂಭವಾದ ಮೇಲಂತೂ ವಂಶಿಕಾ ರವರನ್ನು ತಮ್ಮ ಮನೆಮಗಳಂತೆ ಕಿರುತೆರೆ ವೀಕ್ಷಕರು ಒಪ್ಪಿಕೊಳ್ಳುತ್ತಾರೆ.

ವಂಶಿಕ ರವರ ಲವಲವಿಕೆಯ ಮಾತುಗಳು ಪ್ರೇಕ್ಷಕರನ್ನು ಅತಿವೇಗವಾಗಿ ಆಕರ್ಷಿಸುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಟಿ ಆರ್ ಪಿ ಹೆಚ್ಚಾಗುವುದಕ್ಕೆ ವಂಶಿಕ ರವರೆ ಕಾರಣ ಎಂದರೂ ಕೂಡ ತಪ್ಪಾಗಲಾರದು. ಆದರೆ ಈಗ ಕಾರ್ಯಕ್ರಮದಿಂದ ಅವರ ತಾಯಿ ಆಗಿರುವ ಯಶಸ್ವಿನಿ ಹಾಗೂ ಮಗಳು ವಂಶಿಕ ಮುಂದಿನ ವಾರದಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಇದಕ್ಕೆ ನಿಜವಾದ ಕಾರಣ ತಿಳಿದುಬಂದಿದ್ದು ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಇಬ್ಬರು ಕೂಡ ಪಾಸಿಟಿವ್ ಆಗಿದ್ದು, ಇಬ್ಬರು ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಹೀಗಾಗಿ 15ದಿನಗಳ ಹೋಂ ಕ್ವಾರಂಟೈನ್ ನಂತರ 23 ವಾರಗಳು ಬಿಟ್ಟು ಮತ್ತೆ ಕಾರ್ಯಕ್ರಮಕ್ಕೆ ಅಮ್ಮ-ಮಗಳು ಹಿಂದಿರುಗಬಹುದಾದ ಸಾ