ಸೌಂದರ್ಯದಲ್ಲಿ ಅಪ್ಸರೆ, ಗುಣದಲ್ಲಿ ಚಿನ್ನ, ನಂಬರ್ ಒನ್ ನಟಿಯಾಗಿದ್ದಾಗ ಬಂದ, ಉಂಡು ಹೋದ ಕೊಂಡು ಹೋದ, ಆದರೆ ನಟಿ ಏನಾಗಿ ಹೋದಳು ಗೊತ್ತೇ??

1,202

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿಕಾವಧು ಧಾರವಾಹಿಯಲ್ಲಿ ಆನಂದಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ಪ್ರತ್ಯುಷ ಬ್ಯಾನರ್ಜಿ ಅವರ ಕುರಿತಂತೆ. ಇವರ ಪಾತ್ರ ಎಷ್ಟು ಜನಪ್ರಿಯವಾಗಿತ್ತೆಂದರೆ ಅವರನ್ನು ಆನಂದಿ ಎಂದೇ ಎಲ್ಲರೂ ಕರೆಯುತ್ತಿದ್ದರು. ಇಷ್ಟೊಂದು ಜನಪ್ರಿಯವಾಗಿದ್ದಂತಹ ನಟಿ ತನ್ನ ಜೀವನವನ್ನು ತಾನೇ ಕೊನೆಗಾಣಿಸಿದ್ದೇಕೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು.

ಮೂಲತಹ ಬೆಂಗಾಳಿ ಕುಟುಂಬದವರಾಗಿದ್ದರು ಕೂಡ ಹುಟ್ಟಿದ್ದು ಬಿಹಾರದಲ್ಲಿ. 2010 ರಲ್ಲಿ ಪ್ರಾರಂಭವಾದ ಅಂತಹ ಬಾಲಿಕಾವಧು ಧಾರವಾಹಿಯ ಮೂಲಕ ಪ್ರತ್ಯೂಷ ಬ್ಯಾನರ್ಜಿ ದೊಡ್ಡಮಟ್ಟದಲ್ಲಿ ಸಂಪಾದಿಸುತ್ತಾರೆ. ಎಲ್ಲ ಚೆನ್ನಾಗಿತ್ತು ಎನ್ನುವ ಸಂದರ್ಭದಲ್ಲಿ ಮಾಡೆಲ್ ಹಾಗೂ ನಟ ಆಗಿದ್ದ ರಾಹುಲ್ ಎನ್ನುವ ವಿಲಕ್ಷಣ ಮನುಷ್ಯನ ಎಂಟ್ರಿ ಪ್ರತ್ಯುಷಳ ಜೀವನದಲ್ಲಿ ಆಯ್ತು. ಇವರಿಬ್ಬರ ಮೊದಲ ಭೇಟಿ ಪಾರ್ಟಿಯೊಂದರಲ್ಲಿ ಆಗುತ್ತದೆ. ಸ್ನೇಹ ಎನ್ನುವುದು ಪ್ರೀತಿಗೆ ತಿರುಗಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ.

ಪ್ರತ್ಯುಷ ರಾಹುಲ್ ನ ಪ್ರೀತಿಗೆ ಮರುಳಾಗಿದ್ದಳು. ಅವರಿಬ್ಬರೂ ಒಂದು ಕಡೆ ಸೇರಲು ಫ್ಲಾಟ್ ಕೂಡ ಖರೀದಿಸುತ್ತಾಳೆ. ಬರಬರುತ್ತಾ ರಾಹುಲ್ ಪ್ರತ್ಯುಷ ಳಿಗೆ ನಾವು ಹಾಗೆ ಬದುಕೋಣ ಹೀಗೆ ಬದುಕೋಣ ಎಂಬ ಕನಸನ್ನು ತೋರಿಸುತ್ತಿದ್ದ. ಬರಬರುತ್ತಾ ಪ್ರತ್ಯುಷ ಳ ಬಂಕ್ ಅಕೌಂಟ್ ನಲ್ಲಿ ತನ್ನ ಆಡಳಿತವನ್ನು ಮಾಡಲು ರಾಹುಲ್ ಸಿದ್ಧರಾಗುತ್ತಾರೆ. ಇದರ ಕುರಿತಂತೆ ಪ್ರತ್ಯುಷ ತಾಯಿ ಪ್ರತ್ಯುಷ ಗೆ ಎಚ್ಚರಿಕೆ ನೀಡಿದಾಗ ಅವರಿಬ್ಬರ ನಡುವೆ ಸಾಕಷ್ಟು ಕಂದಕ ಏರ್ಪಡುತ್ತದೆ. ಈ ಕಡೆ ಪ್ರತ್ಯುಷ ಬಳಿ ಇದ್ದ ಹಣವನ್ನೆಲ್ಲ ರಾಹುಲ್ ಹಾಗೂ ಆತನ ತಾಯಿ ಇಬ್ಬರೂ ಕೂಡ ಕಬಳಿಸುತ್ತ ಬರುತ್ತಾರೆ.

ಒಮ್ಮೆಯಂತೂ ರಾಹುಲ್ ತಾಯಿ ಪ್ರತಿಶ ಬಳಿ ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಳು. ಕೊನೆಗೆ ಪ್ರತ್ಯುಷ ಯಾವ ಮಟ್ಟಕ್ಕೆ ಬರುತ್ತಾಳೆ ಎಂದರೆ ಖರ್ಚಿಗಾಗಿ ರಾಹುಲ್ ಬಳಿಗೆ ಹಣವನ್ನು ಕೇಳುವ ಪರಿಸ್ಥಿತಿ ಬಂದೊದಗುತ್ತದೆ. ಈ ಸಂದರ್ಭದಲ್ಲಿ ರಾಹುಲ್ ಗು ಹಾಗೂ ಪ್ರತ್ಯುಷ ಸಾಕಷ್ಟು ಹಣದ ವಿಚಾರವಾಗಿ ಜಗಳಗಳು ನಡೆಯುತ್ತದೆ. ಈ ಸಂದರ್ಭದಲ್ಲಿ ಮತ್ತೊಂದು ವಿಚಾರ ಹೊರಬರುತ್ತದೆ. ಅದೇನೆಂದರೆ ರಾಹುಲ್ಗೆ ಪ್ರತ್ಯುಷ ಗು ಮುನ್ನ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಹಾಗೂ ಮಾಡಲಾಗಿರುವ ಸಲೋನಿ ಶರ್ಮ ಪ್ರೇಯಸಿ ಆಗಿರುತ್ತಾಳೆ.

ಸಲೋನಿ ಶರ್ಮ ತನ್ನ ಪ್ರಿಯಕರ ಆಗಿರುವ ರಾಹುಲ್ ಅನ್ನು ಪ್ರತ್ಯುಷ ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂಬ ಆರೋಪವನ್ನು ಮಾಡುತ್ತಾಳೆ. ಇದರ ಕುರಿತಂತೆ ರಾಹುಲ್ ಬಳಿ ಹೋಗಿ ಹೇಳುವ ಸಂದರ್ಭದಲ್ಲಿ ರಾಹುಲ್ ಅದಾಗಲೇ ಮಾಧ್ಯಮದವರ ಬಳಿ ನನಗೂ ಪ್ರತ್ಯುಷ ಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಹೇಳಿರುತ್ತಾನೆ. ಆಗ ಪ್ರತ್ಯುಷ ಗೆ ಆಕಾಶವೇ ತಲೆಮೇಲೆ ಬಿದ್ದಂತೆ ಆಗುತ್ತದೆ. ಯಾಕೆಂದರೆ ಈಗ ಆತನ ಮೋಸ ಅವಳಿಗೆ ಅರಿವಾಗುತ್ತದೆ. ತನ್ನ ಹಣ ಹೆಸರನ್ನು ಬಳಸಿಕೊಂಡು ಪ್ರೀತಿಯ ನಾಟಕವಾಡಿದ್ದಾನೆ ಎಂಬುದು ತಿಳಿಯುತ್ತದೆ.

ಇಷ್ಟು ಮಾತ್ರವಲ್ಲದೆ ಅವನಿಗೋಸ್ಕರ ಆಕೆ ಮನೆಯವರನ್ನು ಕೂಡ ದೂರ ಮಾಡಿಕೊಂಡಿದ್ದಳು. ಇನ್ನು ಮುಂದೆ ನನಗೆ ಯಾವ ದಿಕ್ಕು ಇಲ್ಲ ಎಂಬುದನ್ನು ಪ್ರತ್ಯುಷ ನಿರ್ಧರಿಸಿಕೊಂಡು ಬಿಟ್ಟಿದ್ದಳು. ಅದೇ ಕೂಡಲೇ ಆಕೆ ರಾಹುಲ್ ಗೆ ಕರೆ ಮಾಡಿ ಇದು ನಾನು ನಿನಗೆ ಮಾಡುತ್ತಿರುವ ಕೊನೆಯ ಕರೆ. ನಿನ್ನಂತಹ ಮೋಸಗಾರ ನಿಗಾಗಿ ನನ್ನ ಮನೆಯವರನ್ನು ನಾನು ದೂರ ಮಾಡಿಕೊಂಡು ಬಿಟ್ಟಿದ್ದೇನೆ ಈ ಜಗತ್ತಿನಲ್ಲಿ ನನಗಾಗಿ ಯಾರು ಇಲ್ಲ ಏನು ಇಲ್ಲ ನಾನು ನನ್ನ ಜೀವನವನ್ನು ಕೊನೆಗಾಣಿಸಿ ಕೊಳ್ಳುತ್ತೇನೆ ಎಂಬುದಾಗಿ ಹೇಳುತ್ತಾನೆ. ಆಗ ರಾಹುಲ್ ಕೊಂಚಮಟ್ಟಿಗೆ ಹೆದರಿ ನಾನು ಬರುತ್ತೇನೆ ಬರುವವರೆಗೂ ಏನು ಹೆಚ್ಚುಕಮ್ಮಿ ಮಾಡಿಕೊಳ್ಳಬೇಡ ಎಂಬುದಾಗಿ ಲಗುಬಗೆಯಲ್ಲಿ ಅವಳಿರುವ ಕಡೆಗೆ ಹೊರಡುತ್ತಾನೆ.

ಆದರೆ ರಾಹುಲ್ ಬರುವ ಅರ್ಧಗಂಟೆ ಮುಂಚೆಯೇ ಅವಳು ನೇಣು ಹಾಕಿಕೊಂಡು ಜೀವವನ್ನು ಮುಗಿಸಿಕೊಂಡು ಬಿಟ್ಟಿದ್ದಳು. ರಾಹುಲ್ ಬಂದು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಕೂಡ ಮಾಡುತ್ತಾನೆ ಆದರೆ ಯಾವುದೂ ಕೂಡ ಫಲಕಾರಿಯಾಗುವುದಿಲ್ಲ ನಂತರ ರಾಹುಲ್ ಪೊಲೀಸರಿಗೆ ನಡೆದಿರುವ ವಿಚಾರವನ್ನು ತಿಳಿಸಿ ಕರೆಸುತ್ತಾನೆ.

ರಾಹುಲ್ ನಿಂದ ಪ್ರತ್ಯೂಷಾ ಳ ಮನೆಯವರ ಫೋನ್ ನಂಬರ್ ಪಡೆದು ಅವರನ್ನು ಜಾಗಕ್ಕೆ ಕರೆಸಲಾಗುತ್ತದೆ. ಮಾಧ್ಯಮದವರೆದುರು ಪ್ರತ್ಯುಷಳ ಮನೆಯವರು ಇದೆಲ್ಲದಕ್ಕೆ ಕಾರಣ ರಾಹುಲ್ ನ ದುರಾಸೆ. ಅವಳಿಂದ ಎಲ್ಲಾ ಹಣವನ್ನು ಪಡೆದು ಅವಳನ್ನು ಏನೂ ಇಲ್ಲದಂತೆ ಮಾಡಿದ್ದ ಎಂಬುದಾಗಿ ದೂರನ್ನು ನೀಡುತ್ತಾರೆ. ಇತ್ತ ರಾಹುಲ್ ನನ್ನು ವಿಚಾರಿಸುವಾಗ ಆಕೆ ಮರಣ ಹೊಂದಲಿ ಎಂಬುದಾಗಿ ನಾನು ಯಾವತ್ತೂ ಕೂಡ ಬಯಸಿರಲಿಲ್ಲ ನಾನು ಅವಳನ್ನು ಬದುಕಿಸಲು ಸಾಕಷ್ಟು ಪ್ರಯತ್ನಪಟ್ಟೆ ಎಂಬುದಾಗಿ ಹೇಳುತ್ತಾನೆ. ಅವಳ ಮರಣಕ್ಕು ನಾನು ಕಾರಣನಲ್ಲ ಎಂಬುದಾಗಿ ಹೇಳುತ್ತಾನೆ. ಅದೇನೇ ಇರಲಿ ಬಾಳಿ ಬದುಕಬೇಕಿದ್ದ ಅದ್ಭುತ ಪ್ರತಿಭೆಯಾಗಿರುವ ಪ್ರತ್ಯುಷ ಪ್ರೀತಿಗಾಗಿ ತನ್ನ ಪ್ರಾಣವನ್ನೇ ಬಿಟ್ಟಿದ್ದು ನಿಜವಾಗಿಯೂ ವಿಷಾದನೀಯ.