ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ಬ್ಯೂಟಿಯನ್ನು ನಾಯಕಿಯಾಗಿ ಆಯ್ಕೆ, ಯಾರು ಆ ಚೆಲುವೆ ಗೊತ್ತೇ?? ಅಭಿಮಾನಿಗಳು ದಿಲ್ ಖುಷ್.

1,011

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರ ಜೊತೆಗೆ ಉದಯೋನ್ಮುಖ ನಾಯಕನಟರು ಕೂಡ ಇದ್ದಾರೆ. ಅವರಲ್ಲಿ ನಾವು ಇಂದು ಮಾತನಾಡಲು ಹೊರಟಿರುವುದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರ ಕುರಿತಂತೆ. ಪ್ರಜ್ವಲ್ ದೇವರಾಜ್ ಅವರು ಕನ್ನಡ ಚಿತ್ರರಂಗದ ಡೈನಾಮಿಕ್ ಸ್ಟಾರ್ ಆಗಿರುವ ದೇವರಾಜ್ ರವರ ಜೇಷ್ಠ ಪುತ್ರನಾಗಿದ್ದಾರೆ. ಆರಂಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ತಮ್ಮ ಸಿನಿಮಾ ಜರ್ನಿ ಅನ್ನು ಪ್ರಾರಂಭಿಸಿದರು.

ಬರಬರುತ್ತ ಸಾಕಷ್ಟು ಸ್ಪರ್ಧೆ ಹಾಗೂ ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಡವಿ ಕೊಂಚಮಟ್ಟಿಗೆ ಸೋತಿದ್ದರು ಎಂದು ಹೇಳಬಹುದಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದಂತಹ ಎರಡು ಸೂಪರ್ ಹಿಟ್ ಚಿತ್ರಗಳ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬೇಡಿಕೆಯ ನಾಯಕನಟನಾಗಿ ಕಾಣಿಸಿಕೊಂಡಿದ್ದಾರೆ. ಅವುಗಳು ಯಾವುವೆಂದರೆ ಜೆಂಟಲ್ ಮ್ಯಾನ್ ಹಾಗೂ ಇನ್ಸ್ಪೆಕ್ಟರ್ ವಿಕ್ರಂ. ಆದರೆ ಈಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರು ತಮ್ಮ ಹೊಸ ಚಿತ್ರದ ಚಿತ್ರೀಕರಣಕ್ಕೆ ಸನ್ನದ್ಧರಾಗಿದ್ದಾರೆ. ಹೌದು ಗಣ ಚಿತ್ರದ ಮುಹೂರ್ತ ಪೂಜೆ ಇಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರ ಜೊತೆಗೆ ಅವರ ಪತ್ನಿಯಾಗಿರುವ ರಾಗಿಣಿ ಮತ್ತು ಚಿತ್ರದ ನಿರ್ದೇಶಕ ರಾಗಿರುವ ಹರಿಪ್ರಸಾದ ಜಕ್ಕ ಹಾಗೂ ಇನ್ನಿತರರು ಇದ್ದರು. ಈ ಚಿತ್ರಕ್ಕಾಗಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯೊಬ್ಬರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಹಾಗಿದ್ದರೆ ಗಣ ಚಿತ್ರದ ನಾಯಕಿ ಯಾರು ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಗೆಳೆಯರೇ ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಂಗಮ ಹಾಗೂ ಸೆಂಚುರಿ ಸ್ಟಾರ್ ಶಿವಣ್ಣ ನಟನೆಯ ಶಿವಲಿಂಗ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ವೇದಿಕ ರವರನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರವಾಗಿರುವ ಗಣ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಚಿತ್ರದ ಕುರಿತಂತೆ ಈಗಾಗಲೇ ಕುತೂಹಲಗಳು ಕೂಡ ಗಗನಕ್ಕೇರಿ.