ಕೊನೆಗೂ ಐಪಿಎಲ್ ಹರಾಜಿನ ದಿನಾಂಕ ಖಚಿತ ಪಡಿಸಿದ ಬಿಸಿಸಿಐ, ಅಭಿಮಾನಿಗಳಿಗೆ ಸಿಹಿ ಸುದ್ದಿ. ದಿನಾಂಕ ಯಾವಾಗ ಗೊತ್ತೇ??

34

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಆಚರಿಸಲ್ಪಡುವ ಕ್ರೀಡೆಯೆಂದರೆ ಕ್ರಿಕೆಟ್. ಅದರಲ್ಲೂ ಐಪಿಎಲ್ ಬಂತೆಂದರೆ ಸಾಕು ನಮ್ಮ ಭಾರತೀಯರು ಟಿವಿ ಮುಂದೆ ಕೂತು ಬಿಡುತ್ತಾರೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಹೊಸ ಐಪಿಎಲ್ ಸೀಸನ್ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಮೆಗಾ ಆಕ್ಷನ್ ಕೂಡ ನಡೆಯಲಿದೆ. ಕಳೆದ ಬಾರಿ ಐಪಿಎಲ್ ನಲ್ಲಿ 8 ತಂಡಗಳಿದ್ದವು. ಈ ಬಾರಿ ಅಹಮದಾಬಾದ್ ಹಾಗೂ ಲಕ್ನೋ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ.

ಈಗಾಗಲೇ ಎಂಟು ಹಳೆಯ ತಂಡಗಳು ರಿಟೈನ್ ಪ್ರಕ್ರಿಯೆಯಲ್ಲಿ ಈಗಾಗಲೇ 27 ಆಟಗಾರರನ್ನು ತನ್ನ ಬಳಿ ಉಳಿಸಿಕೊಂಡಿದೆ. ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳಿಗೆ ಈಗಾಗಲೇ ಬಿಸಿಸಿಐ ಆಟಗಾರರನ್ನು ಆಯ್ಕೆ ಮಾಡಲು ಸಮಯ ಅವಕಾಶ ನೀಡಿದೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮೆಗಾ ಆಕ್ಷನ್ ಪ್ರಾರಂಭವಾಗಲಿದೆ. ಈಗಾಗಲೇ ಸಾವಿರ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ನಿರೀಕ್ಷೆಗಳು ಕೂಡ ದಟ್ಟವಾಗಿದೆ. ಇಂದು 2022 ಹಾಗೂ 2023 ರ ಟೈಟಲ್ ಸ್ಪಾನ್ಸರ್ ಆಗಿ ಟಾಟಾ ಕಂಪನಿ ಹೊಸದಾಗಿ ಸೇರ್ಪಡೆಯಾಗಿರುವುದು ಕೂಡ ದೊಡ್ಡ ಸುದ್ದಿಯಾಗಿದೆ.

ಈಗ ಎಲ್ಲರಿಗೂ ಕೂಡ ಕುತೂಹಲಕರ ವಾಗಿರುವ ಅಂಶವೆಂದರೆ ಮೆಗಾ ಆಕ್ಷನ್ ನಡೆಯುವ ದಿನಾಂಕ ಯಾವುದು ಎಂಬುದಾಗಿ. ಅದರ ಕುರಿತಂತೆ ನಿಮಗೆ ಸವಿವರವಾಗಿ ಹೇಳಲು ಬಂದಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಹೌದು ಈಗಾಗಲೇ ಬಿಸಿಸಿಐ ತಿಳಿಸಿರುವಂತೆ ಫೆಬ್ರವರಿಯ ಎರಡನೇ ವಾರ ಅಂದರೆ ಫೆಬ್ರವರಿ 12 ಹಾಗೂ 13ರ ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ಮೆಗಾ ಅಕ್ಷನ್ ನಡೆಯಲಿದೆ. ಈಗಾಗಲೇ ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಈ ಮೆಗಾ ಆಕ್ಷನ್ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ನೀವು ಯಾವ ತಂಡಕ್ಕೆ ಸಪೋರ್ಟ್ ಮಾಡಲಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.