ಕೆಲವು ದಿನಗಳ ಹಿಂದಷ್ಟೇ ರಶ್ಮಿಕಾ ತನ್ನ ನೆಚ್ಚಿನ ನಟಿ ಎಂದಿದ್ದ ಮಹೇಶ್ ಬಾಬು ಈಗ ಶಾಕ್ ನೀಡಿದ್ದು ಹೇಗೆ ಗೊತ್ತೇ??

178

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಅಲ್ಲು ಅರ್ಜುನ್ ನಟನೆಯ ಪಂಚಭಾಷಾ ಚಿತ್ರವಾಗಿ ಬಿಡುಗಡೆಯಾಗಿರುವ ಪುಷ್ಪ ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರತ ಚಿತ್ರರಂಗದ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ 2021 ರಲ್ಲಿ ಬಿಡುಗಡೆಯಾಗಿರೀವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಚಿತ್ರವನ್ನು ಕೇವಲ ದಕ್ಷಿಣ ಭಾರತದ ಪ್ರೇಕ್ಷಕರು ಮಾತ್ರವಲ್ಲದೆ ಹಿಂದಿ ಭಾಷೆಯ ಪ್ರೇಕ್ಷಕರು ಕೂಡ ದೊಡ್ಡಮಟ್ಟದಲ್ಲಿ ಸ್ವಾಗತಿಸಿರುವುದನ್ನು ಮತ್ತು ಗೆಲ್ಲಿಸಿ ರುವುದು ಅಲ್ಲು ಅರ್ಜುನ್ ರವರ ಹಿಂದಿ ಮಾರ್ಕೆಟ್ ಎಷ್ಟರಮಟ್ಟಿಗೆ ಬೆಳೆದಿದೆ ಎಂಬುದನ್ನು ಸಾಬೀತುಪಡಿಸಿದೆ.

ಬರೋಬ್ಬರಿ ಈಗಾಗಲೇ 300 ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿರುವ ಪುಷ್ಪ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಚಿಕ್ಕ ಪರದೆ ಮೇಲೆ ಸಿನಿಮಾ ಪ್ರೇಕ್ಷಕರು ಚಿತ್ರವನ್ನು ನೋಡಿ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಈಗಾಗಲೇ ಹಲವಾರು ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಈ ಬಾರಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ರವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮಹೇಶ್ ಬಾಬುರವರ ಮೆಚ್ಚುಗೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನವರ ಕಡೆಗಣನೆ ಆಗಿದೆ ಎಂದು ಕೇಳಿಬರುತ್ತಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮಂದಣ್ಣ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಸರಿಲೇರು ನೀಕೆವ್ವರು ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿತ್ತು ಇವರಿಬ್ಬರು ನಿಕಟವಾದ ಸ್ನೇಹ ಸಂಬಂಧವನ್ನು ಕೂಡ ಆ ಸಂದರ್ಭದಲ್ಲಿ ಹೊಂದಿದ್ದರು ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಇತ್ತೀಚಿಗಷ್ಟೇ ಮಹೇಶ್ ಬಾಬು ರವರು ಪುಷ್ಪಾ ಚಿತ್ರದ ಯಶಸ್ಸನ್ನು ಶ್ಲಾಘಿಸುತ್ತಾ ನಟ ಅಲ್ಲುಅರ್ಜುನ್ ಹಾಗೂ ನಿರ್ದೇಶಕ ಕುಮಾರ್ ಅವರಿಗೆ ಮಾತ್ರ ಅಭಿನಂದನೆಗಳನ್ನು ತಿಳಿಸುತ್ತಾರೆ. ರಶ್ಮಿಕ ಮಂದಣ್ಣ ಅವರ ಹೆಸರನ್ನು ಎಲ್ಲಿಯೂ ಕೂಡ ಉಲ್ಲೇಖಿಸುವುದಿಲ್ಲ. ಇದಕ್ಕಾಗಿ ಅವರ ಅಭಿಮಾನಿಗಳು ಕೂಡ ಕಾಮೆಂಟ್ ಮಾಡಿ ರಶ್ಮಿಕ ಮಂದಣ್ಣ ಅವರ ಹೆಸರನ್ನು ಉಪಯೋಗಿಸದಿದ್ದಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. ಇನ್ನೂ ಕೆಲವರಿಗೆ ಇದು ಯಾಕಿರಬಹುದು ಎಂಬ ಗೊಂದಲವನ್ನು ಕೂಡ ಮೂಡಿಸಿದೆ.