ರಾತ್ರೋ ರಾತ್ರಿ ಸ್ಟಾರ್ ಆದ ತಕ್ಷಣ ಕನ್ನಡ ಮರೆತು ಕನ್ನಡಿಗರನ್ನು ಕೆಣಕಿದ್ದ ರಶ್ಮಿಕಾಗೆ ಶಾಕ್ ನೀಡಿದ ತೆಲುಗು ಚಿತ್ರರಂಗ, ಒಮ್ಮೆಲೇ ಪಾತಾಳಕ್ಕೆ ರಶ್ಮಿಕಾ? ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಟಿ ರಶ್ಮಿಕಾ ಮಂದಣ್ಣ ನವರು ಭಾರತೀಯ ಚಿತ್ರರಂಗದಲ್ಲಿ ಎಷ್ಟೇ ಬಹು ಬೇಡಿಕೆಯ ನಟಿಯಾಗಿದ್ದರು ಕೂಡ ಅವರು ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಎಂಬುದನ್ನು ಮರೆತಂತಿದೆ. ರಶ್ಮಿಕ ಮಂದಣ್ಣ ನವರು ಒಂದಲ್ಲ ಒಂದು ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಇವರನ್ನು ನ್ಯಾಷನಲ್ ಕ್ರಶ್ ಎನ್ನುವುದಾಗಿ ಕೂಡ ನೆಟ್ಟಿಗರು ಕರೆಯುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಕೂಡ ಕನ್ನಡದ ಕುರಿತಂತೆ ಕಡೆಗಣನೆ ತೋರುವುದರಲ್ಲಿ ರಶ್ಮಿಕಾ ಮಂದಣ್ಣ ಅವರು ಎತ್ತಿದ ಕೈ.
ಇತ್ತೀಚಿಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಪುಷ್ಪ ಚಿತ್ರದಲ್ಲಿ ಕೂಡ ಇದನ್ನೇ ಮುಂದುವರಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಪುಷ್ಪ ಚಿತ್ರದ ಕನ್ನಡ ವರ್ಷನ್ ನಲ್ಲಿ ರಶ್ಮಿಕ ಮಂದಣ್ಣ ಅವರ ಧ್ವನಿ ಇರಲಿಲ್ಲ. ಯಾಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಲಿಲ್ಲ ಎಂಬುದಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ನನಗೆ ಸಮಯವಿರಲಿಲ್ಲ ಎಂಬುದಾಗಿ ಉಡಾಫೆಯಾಗಿ ರಶ್ಮಿಕ ಮಂದಣ್ಣ ನವರು ಉತ್ತರ ನೀಡಿದ್ದಾರೆ.

ಇದೇ ಕಾರಣಕ್ಕಾಗಿ ಈಗ ತೆಲುಗು ಚಿತ್ರರಂಗದಿಂದ ದೊಡ್ಡ ಶಾ’ಕ್ ಗೆ ಒಳಗಾಗಿದ್ದಾರೆ. ಹೌದು ಗೆಳೆಯರೇ ಅದೇನೆಂದರೆ ಎರಡು ದೊಡ್ಡಮಟ್ಟದ ಪ್ಯಾನ್ ಇಂಡಿಯಾ ಚಿತ್ರಗಳಿಂದ ಹೊರಬಂದಿದ್ದಾರೆ. ನಿಜವಾಗಿ ಅವರು ಹೊರಬಂದಿದ್ದಲ್ಲ ಅವರನ್ನು ಹೊರಗೆ ಕಳುಹಿಸಿದ್ದು. ಹೌದು ತೆಲುಗು ಚಿತ್ರರಂಗದ ಖ್ಯಾತ ನಟರಾಗಿರುವ ರಾಮ್ ಪೋತಿನೇನಿ ಹಾಗೂ ಜೂನಿಯರ್ ಎನ್ ಟಿ ಆರ್ ರವರ ಪಂಚಭಾಷಾ ಚಿತ್ರಗಳಲ್ಲಿ ಮೊದಲು ರಶ್ಮಿಕ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ವಿವಾದದ ನಂತರ ರಶ್ಮಿಕಾ ಮಂದಣ್ಣ ನವರನ್ನು ಚಿತ್ರದಿಂದ ಹೊರ ಹಾಕಲಾಗಿದೆ. ಮಾತೃಭಾಷೆಯ ಕುರಿತಂತೆ ಹೀಗೆ ತಿರಸ್ಕಾರ ಭಾವನೆಯನ್ನು ತೋರಿದರೆ ಏನಾಗುತ್ತದೆ ಎಂಬುದನ್ನು ರಶ್ಮಿಕ ಮಂದಣ್ಣ ನವರು ಘಟನೆಯ ಮೂಲಕ ಪಾಠ ಕಲಿತಿದ್ದಾರೆ ಎಂದು ಹೇಳಬಹುದಾಗಿದೆ.