ನೇರವಾಗಿ ಟಾಪ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ ಸಾಯಿ ಪಲ್ಲವಿ. ಯಾಕಂತೆ ಗೊತ್ತೇ??

112

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ನಟಿಯರಲ್ಲಿ ನಟಿ ಸಾಯಿ ಪಲ್ಲವಿ ಅವರು ಕೂಡ ಒಬ್ಬರು. ಮೂಲತಹ ಮಲಯಾಳಂ ಚಿತ್ರರಂಗದವರಾದರೂ ಕೂಡ ನಟಿ ಸಾಯಿ ಪಲ್ಲವಿ ಅವರು ಈಗ ತಮಿಳು ತೆಲುಗು ಚಿತ್ರರಂಗಗಳಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮೂಲತಹ ಇವರು ವೃತ್ತಿಪರ ವೈದ್ಯರಾಗಿದ್ದು ನಟನೆ ಕ್ಷೇತ್ರವನ್ನು ತಮ್ಮ ಮುಖ್ಯ ವೃತ್ತಿ ಯನ್ನಾಗಿ ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರು ತಮ್ಮ ಸ್ವಾಭಾವಿಕ ಸೌಂದರ್ಯ ಹಾಗೂ ನಟನೆ ಮತ್ತು ರಸ್ತೆ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಲಯಾಳಂ ತಮಿಳು ತೆಲುಗು ಮೂವಿ ಭಾಷೆಗಳಲ್ಲಿ ಕೂಡ ಬಹುಬೇಡಿಕೆ ನಟಿಯಾಗಿ ತಮ್ಮನ್ನು ತಾವು ರೂಪಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಾಗಚೈತನ್ಯ ಅವರೊಂದಿಗೆ ನಟಿಸಿರುವ ಲವ್ ಸ್ಟೋರಿ ತೆಲುಗು ಚಿತ್ರ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿತ್ತು ಹಾಗೂ ಸಾಯಿ ಪಲ್ಲವಿ ಅವರಿಗೂ ಕೂಡ ಬೇಡಿಕೆ ಹೆಚ್ಚಾಗಿತ್ತು. ಇನ್ನು ಇತ್ತೀಚಗಷ್ಟೇ ತೆಲುಗಿನ ಮೆಗಾಸ್ಟಾರ್ ಆಗಿರುವ ಚಿರಂಜೀವಿ ಅವರ ಬೋಲೇಶಂಕರ ಚಿತ್ರದಲ್ಲಿ ನಟಿಸಲು ತಿರಸ್ಕರಿಸಿದ್ದಾರಂತೆ. ಅದರ ಕಾರಣ ಏನೆಂಬುದು ಲವ್ ಸ್ಟೋರಿ ಚಿತ್ರದ ಕಾರ್ಯಕ್ರಮದಲ್ಲಿ ಗೊತ್ತಾಗಿದೆ.

ಹೌದು ಇದಕ್ಕೆ ಚಿರಂಜೀವಿ ಅವರು ಬೋಲೇಶಂಕರ ಚಿತ್ರದಲ್ಲಿ ಸಾಯಿ ಪಲ್ಲವಿ ಅವರಿಗೆ ತಂಗಿ ಪಾತ್ರ ನಟಿಸಲು ಸಿಕ್ಕಿತ್ತಂತೆ. ಸಾಯಿ ಪಲ್ಲವಿ ಅವರು ನನ್ನ ಜೊತೆಗೆ ಬೋಲೆಶಂಕರ ಚಿತ್ರದಲ್ಲಿ ನಟಿಸಲು ಒಪ್ಪದೆ ಇದ್ದಿದ್ದೆ ಒಳ್ಳೆದಾಯಿತು ಯಾಕೆಂದರೆ ನಾನು ಅವರ ಜೊತೆಗೆ ಹೀರೋ ಆಗಿ ನಟಿಸಬೇಕು ಎಂದು ಅಂದುಕೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರಕ್ಕೆ ನಟಿ ಸಾಯಿ ಪಲ್ಲವಿ ಅವರು ಅದೊಂದು ರಿಮೇಕ್ ಚಿತ್ರವಾಗಿತ್ತು ನನಗೆ ರಿಮೇಕ್ ಚಿತ್ರಗಳಲ್ಲಿ ನಟಿಸಲು ತುಂಬಾ ಭಯ. ಇಲ್ಲದಿದ್ದರೆ ನಿಮ್ಮಂತಹ ದೊಡ್ಡ ನಟರ ಜೊತೆಗೆ ನಟಿಸುವ ಅವಕಾಶವನ್ನು ನಾನು ಬಿಟ್ಟು ಕೊಡುತ್ತಿರಲಿಲ್ಲ ಎಂಬುದಾಗಿ ಸಾಯಿಪಲ್ಲವಿ ಅವರು ಹೇಳಿದ್ದಾರೆ. ರಿಮೇಕ್ ಚಿತ್ರವಾಗಿದ್ದರಿಂದಾಗಿ ಸಾಯಿ ಪಲ್ಲವಿ ಅವರು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಬೋಲೆಶಂಕರ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ