ಅಪ್ಪಿ ತಪ್ಪಿ ಮದುವೆ ಆದಮೇಲೆ ಬೇರೆ ಅವರನ್ನು ಇಷ್ಟ ಪಟ್ಟು ಪ್ರೀತಿ ಮಾಡಿದರೆ ನೀವು ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರೀತಿ ಅಥವಾ ಆಕರ್ಷಣೆಯನ್ನುವುದು ಮದುವೆಗೂ ಮುಂಚೆ ಕೂಡ ಆಗಬಹುದು ಅಥವ ಮದುವೆ ನಂತರ ಕೂಡ ಆಗಬಹುದು. ಮದುವೆಗೆ ಮುಂಚೆ ಆದರೆ ಏನಾದರೂ ಮಾಡಿ ಅದನ್ನು ಮ್ಯಾನೇಜ್ ಮಾಡಬಹುದಾಗಿದೆ. ಆದರೆ ಮದುವೆ ನಂತರ ಬೇರೊಬ್ಬರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಅಥವಾ ಅವರ ಕುರಿತಂತೆ ಆಕರ್ಷಣೆಗೆ ಒಳಗಾಗುವುದು ಸಾಕಷ್ಟು ಅಪಾಯಗಳಿಗೆ ಎಡೆಮಾಡಿಕೊಡಬಹುದಾಗಿದೆ. ಇಂದಿನ ವಿಚಾರದಲ್ಲಿ ನಾವು ನಿಮಗೆ ಮದುವೆ ನಂತರ ಕೂಡ ನೀವು ಯಾರೊಂದಿಗೆ ಆಕರ್ಷಣೆಗೆ ಒಳಗಾಗಿ ಇದ್ದೀರಾ ಎಂಬುದಾದರೆ ಅದರಿಂದ ಹೇಗೆ ಬಚಾವಾಗಬಹುದು ಎಂಬುದರ ಕುರಿತು ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೆ ನಾವು ಹೇಳಹೊರಟಿರುವ ಅಂಶಗಳನ್ನು ಫಾಲೋ ಮಾಡಿ.

ನಿಮ್ಮನ್ನು ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಿ ಮೊದಲು ನಿಮ್ಮನ್ನು ನೀವು ಈ ಸಮಯದಲ್ಲಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಇದಾದ ನಂತರ ನೀವು ಹೀಗೆ ಇನ್ನೊಬ್ಬರ ಬಳಿಗೆ ಹೋಗಲು ಅಥವಾ ಆಕರ್ಷಿತರಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯ ಜಗಳದಿಂದ ಈ ರೀತಿ ಆಗಿದ್ದರೆ ಅದನ್ನು ಸರಿಪಡಿಸಿ ಹಳೆಯ ಸಂಬಂಧವನ್ನು ಮತ್ತೆ ಪುನರಾವರ್ತಿಸಲು ಪ್ರಯತ್ನಿಸಿ. ಹೊಸ ಆಕರ್ಷಣೆಗೆ ಸೊಪ್ಪು ಹಾಕದೆ ಅದನ್ನು ದೂರದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಮದುವೆಯ ಸಂಬಂಧ ಎನ್ನುವುದು ಸಾಕಷ್ಟು ಪವಿತ್ರವಾದದ್ದು ಇದರಲ್ಲಿ ಮೂರನೆಯ ಸಂಬಂಧ ಬರುವುದು ಸರಿಯಾಗಿರುವುದಿಲ್ಲ. ಇದರಲ್ಲಿ ನಿಮ್ಮ ಜವಾಬ್ದಾರಿಯನ್ನು ಕೂಡ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ.
ಮತ್ತೆ ಮತ್ತೆ ನೀವು ಮಾಡುತ್ತಿರುವ ತಪ್ಪನ್ನು ಮನಸ್ಸಿಗೆ ಅರ್ಥೈಸಿ ಬೇರೆಯವರೊಂದಿಗೆ ಸಂಬಂಧ ಹೊಂದುವುದು ತಪ್ಪಿಲ್ಲ ಎಂದು ಕ್ಷಣಿಕವಾಗಿ ನಿಮ್ಮ ಮನಸ್ಸು ಭಾವಿಸಬಹುದು ಆದರೆ ಅದರಿಂದ ಹೊರಬರಲು ಪ್ರಯತ್ನಿಸಿ ಹಾಗೂ ಮನಸ್ಸಿಗೆ ಅದರ ಕುರಿತಂತೆ ವಿವರಣೆ ನೀಡುತ್ತಲೇ ಇರಿ. ಯಾಕೆಂದರೆ ಮುಂದಿನ ದಿನ ಬೇಕು ನಿಮ್ಮ ಈ ಇನ್ನೊಂದು ಸಂಬಂಧದ ಪರಿಕಲ್ಪನೆಯನ್ನು ವುದು ನಿಮ್ಮ ಮಕ್ಕಳ ಜೀವನದಲ್ಲಿ ಕೂಡ ಕೆಟ್ಟ ಪರಿಣಾಮ ಬೀರಬಹುದಾದಂತಹ ಎಲ್ಲಾ ಸಾಧ್ಯತೆಗಳು ಇರುತ್ತದೆ.

ಮುಂದಿನ ಜೀವನದ ಕುರಿತಂತೆ ಯೋಚಿಸಿ ನಿಮಗೆ ಸದ್ಯದ ಮಟ್ಟಿಗೆ ಮೂರನೇ ಅವರಿಂದ ಸಂಬಂಧ ಹೊಂದುವುದು ಸಾಕಷ್ಟು ಸಂತೋಷವನ್ನು ನೀಡಬಹುದು ಆದರೆ ಒಮ್ಮೆ ಈ ದಾರಿಯಲ್ಲಿ ಮುಂದೆ ಹೋದಮೇಲೆ ಜೀವನದಲ್ಲಿ ಮತ್ತೆ ಹಿಂದಿರುಗಬಹುದಾದ ಯಾವ ಸಾಧ್ಯತೆಗಳು ಕೂಡ ಇರುವುದಿಲ್ಲ ಎಂದು ಹೇಳಬಹುದು. ಹೀಗಾಗಿ ಈ ವಿಚಾರಗಳು ನಿಮ್ಮನ್ನು ಆಕರ್ಷಣೆಗೆ ಅಥವಾ ಇನ್ನೊಂದು ಸಂಬಂಧಕ್ಕೆ ಹೋಗುವುದನ್ನು ತಡೆಯಬಹುದಾಗಿದೆ.
ಬೇರೆ ವಿಚಾರಗಳ ಬಗ್ಗೆ ಕೂಡ ಗಮನ ಕೊಡಿ ನೀವು ಒಂದು ವೇಳೆ ಯಾರ ಕುರಿತಂತೆ ಆಕರ್ಷಣೆ ಹೊಂದಿದ್ದರೆ ಆ ಸಂದರ್ಭದಲ್ಲಿ ನೀವು ಕೇವಲ ಅವರ ಒಳ್ಳೆಯತನವನ್ನು ಅಥವಾ ಒಳ್ಳೆಯ ಸ್ವರೂಪವನ್ನು ಮಾತ್ರ ನೋಡುತ್ತಿರುತ್ತೀರಿ. ಒಂದು ವೇಳೆ ನೀವು ಆಕರ್ಷಣೆಗೆ ಒಳಗಾಗಿ ಅವರ ಜೀವನದಲ್ಲಿ ಕೂಡ ಒಂದು ಭಾಗವಾದ ನಂತರ ಅವರ ಕೆಟ್ಟತನವನ್ನು ನೋಡಿದ ಮೇಲೆ ಅದರಿಂದ ಹಿಂದೆ ಬರುವುದಕ್ಕೆ ಸಾಧ್ಯವಿಲ್ಲ ಹೀಗಾಗಿ ಈ ವಿಚಾರಗಳನ್ನು ಕೂಡ ನೀವು ಯೋಚಿಸಬೇಕಾಗುತ್ತದೆ. ಹೀಗಾಗಿ ಆಕರ್ಷಣೆಯನ್ನು ತಡೆಯಲು ಈ ವಿಚಾರಗಳ ಅವಲೋಕನ ನಿಮ್ಮ ಜೀವನದಲ್ಲಿ ನಿಜಕ್ಕೂ ಅತ್ಯವಶ್ಯಕ.

ಸಹಾಯ ಪಡೆದುಕೊಳ್ಳಿ ಒಂದು ವೇಳೆ ನೀವು ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಮನೋವ್ಯಾಕುಲತೆಗೆ ಬೀಳುವ ಅವಶ್ಯಕತೆಯಿಲ್ಲ. ಇದರ ಕುರಿತಂತೆ ಸ್ನೇಹಿತರು ಅಥವಾ ಸ್ನೇಹಿತರು ಇಲ್ಲದಿದ್ದರೆ ನಿಮ್ಮ ಸಲಹೆಗಾರರ ಬಳಿ ಹಂಚಿಕೊಂಡು ಇದರಿಂದ ಹೊರಬರುವ ಉಪಾಯವನ್ನು ಅಥವಾ ಮಾರ್ಗದರ್ಶನವನ್ನು ಅವರಿಂದ ಪಡೆದುಕೊಳ್ಳಿ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಮ್ಮನ್ನು ಆಕರ್ಷಣೆಯಿಂದ ಹೊರಬರುವಂತೆ ಮಾಡಬಹುದಾಗಿದೆ. ನಾವು ಹೇಳಿರುವ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಪತ್ನಿಯೊಂದಿಗೆ ಖಂಡಿತವಾಗಿಯೂ ನೀವು ಪ್ರಾಮಾಣಿಕವಾಗಿ ದಾಂಪತ್ಯ ಜೀವನವನ್ನು ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.