ದೇವರನ್ನು ಮದುವೆಯಾಗುವ ಹಿಜಡಾಗಳ ಮೊದಲ ರಾತ್ರಿ ಹೇಗಿರುತ್ತದೆ ಗೊತ್ತೇ?? ಅದರ ಹಿಂದೆಯೂ ಇದೆ ಒಂದು ಆಸಕ್ತಿಕರ ಮಾಹಿತಿ. ಏನು ಗೊತ್ತೇ??

30,844

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ದೇವರು ವಿಧವಿಧವಾದ ಪ್ರಾಣಿ-ಪಕ್ಷಿಗಳನ್ನು ಹುಟ್ಟಿಸಿದ್ದಾನೆ. ಇನ್ನು ಮನುಷ್ಯರಲ್ಲಿ ಕೂಡ ಗಂಡು-ಹೆಣ್ಣು ಎನ್ನುವ ಎರಡು ವಿಧವನ್ನು ಮಾತ್ರವಲ್ಲದೆ ತೃತೀಯಲಿಂಗಿ ಎಂಬ ವಿಧವನ್ನು ಕೂಡ ಸೃಷ್ಟಿಸಿದ್ದಾನೆ. ಆದರೆ ತೃತೀಯಲಿಂಗಿ ಯರನ್ನು ಈ ಸಮಾಜ ನೋಡುವ ದೃಷ್ಟಿಯೇ ಬೇರೆಯಾಗಿದೆ. ಇನ್ನು ಇಂದಿನ ವಿಚಾರದಲ್ಲಿ ಕೂಡ ನಾವು ತೃತೀಯ ಲಿಂಗಿಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯ ಮಂಗಳಮುಖಿಯರ ಜೀವನ ಎನ್ನುವುದು ಖಂಡಿತವಾಗಿಯೂ ನಿಮಗೆ ತೋರುವುದಕ್ಕಿಂತ ಹೆಚ್ಚಾಗಿ ರಹಸ್ಯಮಯ ವಾಗಿರುತ್ತದೆ. ಇನ್ನು ಹೆಂಗಸು ಅಲ್ಲದ ಗಂಡಸು ಅಲ್ಲದ ಮಂಗಳಮುಖಿಯರು ಮದುವೆಯಾಗುತ್ತಾರಾ ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇದೆ. ಹೌದು ಮಂಗಳಮುಖಿಯರು ಮದುವೆಯಾಗುತ್ತಾರೆ ಆದರೆ ಅದು ಜೀವನಪೂರ್ತಿ ಅಲ್ಲ ಬದಲಾಗಿ ಕೇವಲ ಒಂದು ದಿನಕ್ಕೆ ಮಾತ್ರ. ಹಾಗಿದ್ದರೆ ಇದ್ಯಾವ ಮದುವೆ ಎಂಬುದಾಗಿ ನೀವು ಗೊಂದಲದಲ್ಲಿ ಇದ್ದೀರಾ ಎಂದರೆ ಅದನ್ನು ಕೂಡ ನಾವು ಪರಿಹರಿಸುತ್ತೇವೆ. ಮಂಗಳಮುಖಿಯರ ಮದುವೆ ದೊಡ್ಡ ಸಮಾರಂಭದಲ್ಲಿ ನಡೆಯುತ್ತದೆ. ಗಂಡಸು ಅಲ್ಲದ ಹೆಂಗಸು ಅಲ್ಲದ ತೃತೀಯಲಿಂಗಿಗಳಾಗಿರುವ ಮಂಗಳಮುಖಿಯರನ್ನು ಯಾರು ಮದುವೆಯಾಗುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಅದಕ್ಕೆ ಉತ್ತರ ಅವರು ಮದುವೆಯಾಗುತ್ತಿರುವುದು ಮನುಷ್ಯರನ್ನೆಲ್ಲ ಬದಲಾಗಿ ದೇವರನ್ನು.

ಅರ್ಜುನ ಹಾಗೂ ನಾಗಕನ್ನಿಕೆಯ ಸಂತಾನ ವಾಗಿರುವ ಅರಾವಣನನ್ನು ಮಂಗಳಮುಖಿಯರು ಪೂಜೆ ಮಾಡುವುದು. ಹಾಗಿದ್ದರೆ ಒಂದು ದಿನಕ್ಕಾಗಿ ಯಾಕೆ ಮಂಗಳಮುಖಿಯರು ಈ ದೇವರನ್ನು ಮದುವೆಯಾಗಬೇಕು ಹೇಗೆ ಇವರೆಲ್ಲರಿಂದ ಪೂಜಿತವಾಗುವ ದೇವರಾದ ಎಂಬ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ನಿಮಗೆ ಮಂಗಳಮುಖಿಯರು ಹೇಗೆ ಮದುವೆ ಅಂತ ನೋಡುವ ಕಾತುರರಾಗಿದ್ದಾರೆ ನೀವು ತಮಿಳುನಾಡಿನ ವಿಲ್ಲಾಪುರ ಜಿಲ್ಲೆಯ ಕುವ ಗ್ರಾಮಕ್ಕೆ ಹೋಗಬೇಕು. ಇಲ್ಲಿ ವರ್ಷದ ಮೊದಲ ಪೂರ್ಣಿಮೆಯ ದಿನದಿಂದ ಮಂಗಳಮುಖಿಯರ ಮದುವೆ ಪ್ರಾರಂಭವಾಗುತ್ತದೆ. ಈ ಉತ್ಸವ ಒಟ್ಟಿಗೆ 18 ದಿನಗಳ ಕಾಲ ನಡೆಯುತ್ತದೆ. 16ನೇ ದಿನ ಮಂಗಳಮುಖಿಯರ ಮದುವೆ ಆಗುತ್ತದೆ.

ಈ ಮದುವೆ ಸಂದರ್ಭದಲ್ಲಿ ಹಿಜಿಡಾಗಳು ಮದುಮಗಳಂತೆ ಶೃಂಗಾರವಾಗಿ ಬರುತ್ತಾರೆ. ಇವರಿಗೆ ದೇವಸ್ಥಾನದ ಪುರೋಹಿತರು ತಾಳಿ ಕಟ್ಟುತ್ತಾರೆ. ಇದು ಮಂಗಳಮುಖಿಯರ ಮದುವೆಯ ರಹಸ್ಯ ಇನ್ನೂ ಇದಾದ ನಂತರ ಏನಾಗುತ್ತದೆ ಎಂಬುದನ್ನು ಕೂಡ ನಾವು ಹೇಳುತ್ತೇವೆ. ಮದುವೆಯಾದ ಮಾರನೇ ದಿನ ಅರಾವಣನ ಮೂರ್ತಿಯನ್ನು ಮೆರವಣಿಗೆ ಮಾಡಿ ಹೊಡೆದುಹಾಕಿ ನಿನ್ನೆ ಹಾಕಿದ್ದ ಮೇಕಪ್ ಹಾಗೂ ಶೃಂಗಾರವನ್ನು ಕಿತ್ತು ಬಿಸಾಕುತ್ತಾರೆ. ವಿಧವೆಯಂತೆ ಅತ್ತು ಕೂಗಿ ಶೋಕಾಚರಣೆಯನ್ನು ಮಾಡುತ್ತಾರೆ.

ಇದೇ ಗೆಳೆಯರೇ ಮಂಗಳಮುಖಿಯರ ಒಂದು ರಾತ್ರಿಯ ಮದುವೆ. ಆದರೆ ಕೇವಲ ಒಂದು ರಾತ್ರಿ ಮದುವೆ ಅದರ ಹಿಂದಿನ ಕಾರಣಗಳೇನು ಎಂಬುದನ್ನು ನಿಮಗೆ ತಿಳಿಯಬೇಕೆನ್ನುವ ಕುತೂಹಲ ಇದೆಯೆಂದು ನಮಗೆ ತಿಳಿದಿದೆ ಅದನ್ನು ನಾವು ಪರಿಹರಿಸಲು ಪ್ರಯತ್ನಿಸುತ್ತೇವೆ. ನಿಮಗೆಲ್ಲರಿಗೂ ತಿಳಿದಿರುವಂತೆ ಇದು ಮಹಾಭಾರತಕ್ಕೆ ಸಂಬಂಧಪಟ್ಟಿರುವ ಕಥೆಯಾಗಿದೆ. ಮಹಾಭಾರತ ಯು’ದ್ಧಕ್ಕಾಗಿ ಕಾಳಿ ದೇವಿಯನ್ನು ಒಲಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಕಾಳಿಗೆ ರಾಜಕುಮಾರನೊಬ್ಬ ನ ಬ’ಲಿ ನೀಡಬೇಕಾಗಿತ್ತು. ಆಗ ಯಾರೂ ಕೂಡ ಮುಂದೆ ಬರದಿದ್ದಾಗ ಅರ್ಜುನ ಹಾಗೂ ನಾಗಕನ್ನಿಕೆ ಉಲುಚಿಯ ಮಗನಾಗಿರುವ ಅರಾವಣ ತಾನು ಮುಂದೆ ಬಂದು ಮರಣಹೊಂದಿರೆ ಸಿದ್ದನಿದ್ದೇನೆ ಎಂಬುದಾಗಿ ಹೇಳುತ್ತಾನೆ. ಆದರೆ ಅದಕ್ಕೊಂದು ಷರತ್ತನ್ನು ವಿಧಿಸುತ್ತಾನೆ ಅದೇನೆಂದರೆ ನಾನು ಮದುವೆಯಾಗದೆ ಮರಣ ಹೊಂದುವುದಿಲ್ಲ ಎಂಬುದಾಗಿ ಹೇಳುತ್ತಾನೆ.

ಒಂದು ರಾತ್ರಿಗಾಗಿ ಯಾಕೆ ಯಾರಾದರೂ ಈತನನ್ನು ಮದುವೆಯಾಗಲು ಬಯಸುತ್ತಾರೆ ಯಾಕೆಂದರೆ ಈತ ಮರಣವನ್ನು ಹೊಂದಲು ಸಜ್ಜಾಗಿದ್ದ. ಆಗ ಕೃಷ್ಣದೇವನೇ ಮೋಹಿನಿ ರೂಪವನ್ನು ತಾಳಿ ಅರಾವಣನನ್ನು ಮದುವೆಯಾಗಿ ಮಾರನೆದಿನ ಆರಾವಣ ಮರಣವನ್ನು ಹೊಂದುತ್ತಾನೆ. ಆಗ ವಿಧವೆಯಾದ ಮೋಹಿನಿ ಅರಾವಣನ ಮುಂದೆ ವಿಧವೆ ಆಗಿರುವ ಶೋಕವನ್ನು ಮಾಡುತ್ತಾಳೆ. ಇದನ್ನೇ ಇಂದಿನ ಮಂಗಳಮುಖಿಯರು ಪಾಲಿಸಿಕೊಂಡು ಬಂದಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ. ಇದು ಮಂಗಳಮುಖಿಯರ ಒಂದು ದಿನದ ಅಂದರೆ ಒಂದು ರಾತ್ರಿಯ ಮದುವೆ ವಿಚಾರವಾಯಿತು. ಇವನ್ನೆಲ್ಲ ಹೊರತುಪಡಿಸಿ ಸಮಾಜದಲ್ಲಿ ಮಂಗಳಮುಖಿಯರಿಗೆ ಸರಿಯಾದ ಗೌರವಗಳು ಸಿಗುತ್ತಿಲ್ಲ. ಎಲ್ಲರಂತೆ ಅವರೂ ಕೂಡ ಮನುಷ್ಯರೇ ಹಾಗಾಗಿ ಅವರಿಗೂ ಕೂಡ ಸಮಾಜದಲ್ಲಿ ಸರ್ವರಂತೆ ಸಮಾನ ಹಾಗೂ ಕೆಲಸ ಮಾಡುವ ಅವಕಾಶಗಳು ಹೇರಳವಾಗಿ ಸಿಗಬೇಕು. ಈ ಮಾತಿಗೆ ನೀವೇನನ್ನುತ್ತೀರಾ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.