ಶುಭ ಪೂಂಜಾ ಬಳಿ ಕೋಟಿ ಕೋಟಿ ಹಣವಿದ್ದರೂ ಕೂಡ ಎಷ್ಟು ಕಡಿಮೆ ಖರ್ಚಿನಲ್ಲಿ ಮದುವೆಯಾಗಿದ್ದಾರೆ ಗೊತ್ತೇ?? ಸಿಂಪಲ್ ಮದುವೆಗೆ ಖರ್ಚಾಗಿದ್ದು ಎಷ್ಟು ಗೊತ್ತೇ??

424

ನಮಸ್ಕಾರ ಸ್ನೇಹಿತರೇ ಒಂದುಕಾಲದಲ್ಲಿ ನಟಿ ಶುಭಾ ಪೂಂಜಾ ರವರು ಮೊಗ್ಗಿನ ಮನಸು ಚಿತ್ರದ ಮೂಲಕ ಜನಪ್ರಿಯತೆಯನ್ನು ಪಡೆದು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಕೂಡ ಆಗಿದ್ದರು. ಆದರೆ ಹಲವಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಆಗಿದ್ದರು. ನಂತರ ಶುಭಪುಂಜಾ ರವರು ಮತ್ತೆ ಜನಪ್ರಿಯರಾಗಿದ್ದು ಅಥವಾ ಮರು ಪ್ರವೇಶ ಮಾಡಿದ್ದು ಕಿರುತೆರೆ ಅತ್ಯಂತ ದೊಡ್ಡ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಮೂಲಕ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಅಭ್ಯರ್ಥಿಯಾಗಿ ಕಾಲಿಡುತ್ತಾರೆ.

ಶುಭಾ ಪೂಂಜಾ ರವರ ಕುರಿತಂತೆ ತಪ್ಪು ತಿಳುವಳಿಕೆ ಇಟ್ಟುಕೊಂಡವರಿಗೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವುದು ಅವರ ಒಳ್ಳೆಯ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಬಿಗ್ ಬಾಸ್ ಗೆಲ್ಲುವ ಪ್ರತಿಸ್ಪರ್ಧಿಯಾಗಿಯು ಕೂಡ ಶುಭ ಪೂಂಜಾ ರವರು ಎಲ್ಲರ ಮನಗೆಲ್ಲುತ್ತಾರೆ. ಆದರೆ ಗೆಲುವಿನ ಕೆಲವೇ ಕೆಲವು ಮೆಟ್ಟಿಲುಗಳಲ್ಲಿ ಅವರು ಹಿಂದೆ ಬೀಳುತ್ತಾರೆ. ಶುಭ ಪೂಂಜಾ ರವರು ಸುಮಂತ ಮಹಾಬಲ ಎನ್ನುವವರನ್ನು ಮೊದಲಿನಿಂದಲೂ ಕೂಡ ಪ್ರೀತಿಸುತ್ತಿದ್ದರು. ಬಿಗ್ ಬಾಸ್ ಮುಗಿದ ನಂತರ ಮದುವೆಯಾಗುವ ಯೋಜನೆಯನ್ನು ಮಾಡಿದ್ದರು. ಆದರೆ ಲಾಕ್ ಡೌನ್ ಕಾರಣದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು.

ಅಂತೂ-ಇಂತೂ ಶುಭಪುಂಜ ಹಾಗೂ ಸುಮಂತ್ ಇಬ್ಬರು ಕೂಡ ನಿನ್ನೆಯಷ್ಟೇ ಗುರುಹಿರಿಯರ ಸಮ್ಮುಖದಲ್ಲಿ ಅವರ ಊರಿನಲ್ಲಿ ಮದುವೆಯಾಗಿದ್ದಾರೆ. ಶುಭಪುಂಜ ಹಾಗೂ ಸುಮಂತ್ ರವರ ವಿವಾಹಕ್ಕೆ ಕೇವಲ ಅವರ ಹಿತೈಷಿಗಳು ಹಾಗೂ ಗೆಳೆಯರು ಆಗಮಿಸಿದ್ದು ಮದುವೆಗೆ ತಗುಲಿದ ವೆಚ್ಚ ಎಷ್ಟು ಗೊತ್ತಾ ಗೆಳೆಯರೇ. ಹೌದು ಸ್ನೇಹಿತರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳ ನಡುವೆ ಕೇವಲ 12 ಲಕ್ಷ ರೂಪಾಯಿಯಲ್ಲಿ ಮದುವೆಯನ್ನು ಸರಳವಾಗಿ ಮುಗಿಸಿದ್ದಾರೆ ಶುಭಪುಂಜ ಹಾಗೂ ಸುಮಂತ್ ಜೋಡಿ. ಕಾಮೆಂಟ್ ಬಾಕ್ಸ್ನಲ್ಲಿ ನವಜೋಡಿಗಳಿಗೆ ಮದುವೆಯ ಶುಭಾಶಯಗಳನ್ನು ಕೋರಬಹುದಾಗಿದೆ.