ತನಗಿಂತ 12 ವರ್ಷ ಚಿಕ್ಕವನನ್ನು ಮದುವೆಯಾಗುತ್ತಿರುವ 48 ವರ್ಷದ ಮಲೈಕಾ ಅರೋರಾ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ?? ನಟಿಯಾಗಿ ಹೆಚ್ಚೇನೂ ಯಶಸ್ಸು ಪಡೆಯದಿದ್ದರೂ ಇಷ್ಟೊಂದಾ??

3,864

ನಮಸ್ಕಾರ ಸ್ನೇಹಿತರೇ ಶಾರೂಖ್ ಖಾನ್ ರ ದಿಲ್ ಸೇ ಸಿನಿಮಾ ಚಲೇ ಚಯ್ಯಾ ಚಯ್ಯಾ ಹಾಡಿನ ಮೂಲಕ ದಿನ ಬೆಳಗಾಗುವುದರೊಳಗೆ ಪ್ರಸಿದ್ದಿಯಾದ ಐಟಂ ಸಾಂಗ್ ಡ್ಯಾನ್ಸರ್ ಅಂದರೆ ಅದು ಮಲೈಕಾ ಅರೋರಾ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರನ್ನ ವಿವಾಹವಾಗಿದ್ದ ಮಲೈಕಾ ಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದರು.

ಈ ನಡುವೆ ಬಾವ ಸಲ್ಮಾನ್ ಖಾನ್ ರ ದಬಂಗ್ ಸಿನಿಮಾದಲ್ಲಿ ಮುನ್ನಿ ಬದನಾಮ್ ಹುಯೇ ಹಾಡಿಗೆ ಹೆಜ್ಜೆ ಹಾಕಿ ಬಾಲಿವುಡ್ ಇತಿಹಾಸದಲ್ಲಿ ಐಟಂ ಸಾಂಗ್ ಡ್ಯಾನ್ಸರ್ ಗೆ ಇರುವ ಕ್ರೇಜ್ ನ್ನ ಹೆಚ್ಚು ಮಾಡಿದರು. ಆದರೇ ಕೆಲವು ವರ್ಷಗಳ ಹಿಂದೆ ಅರ್ಬಾಜ್ ಖಾನ್ ಜೊತೆ ದಾಂಪತ್ಯ ಮುರಿದುಕೊಂಡು ವಿಚ್ಛೇಧನ ಪಡೆದುಕೊಂಡರು..ತಮಗಿಂತಲೂ ಹದಿಮೂರು ವರ್ಷದ ಕಿರಿಯ ಅರ್ಜುನ್ ಕಪೂರ್ ಜೊತೆ ಸದ್ಯ ಡೇಟಿಂಗ್ ನಡೆಸುತ್ತಾ ಸೆಕೆಂಡ್ ಇನ್ನಿಂಗ್ಸ್ ನಡೆಸುತ್ತಿದ್ದಾರೆ.

ಮಲೈಕಾ ಅರೋರಾ ಯೋಗ ಟೀಚರ್ ಕೂಡಾ ಆಗಿದ್ದು ದಿವ್ಯಾ ಯೋಗ ಸ್ಟುಡಿಯೋ ಎಂಬ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಒಂದು ಐಟಂ ಡ್ಯಾನ್ಸ್ ಗೆ ಬರೋಬ್ಬರಿ 2 ರಿಂದ 3 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಇದಲ್ಲದೇ ಮಾಡೆಲಿಂಗ್ ಹಾಗೂ ಫ್ಯಾಶನ್ ಜಗತ್ತಿನಲ್ಲಿ ಮಲೈಕಾಗೆ ಬಹು ಬೇಡಿಕೆ ಇದೆಯಂತೆ. ಹಾಗಾಗಿ ಮಲೈಕಾ ಯಾವಾಗಲೂ ಬ್ಯುಸಿಯಾಗಿರುತ್ತಾರಂತೆ. ಸದ್ಯ ಮಲೈಕಾರವರ ಒಟ್ಟು ಆಸ್ತಿ ರೂ 100 ಕೋಟಿಗಿಂತ ಜಾಸ್ತಿ ಇದೆಯಂತೆ. ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಸ್ವಂತ ಬಂಗಲೆಯಲ್ಲಿ ವಾಸಿಸುತ್ತಿದ್ದಾರಂತೆ. ಮಲೈಕಾ ಬಳಿ ದುಬಾರಿ ಕಾರುಗಳಾದ ರೇಂಜ್ ರೋವರ್,ಬಿಎಂಡಬ್ಲು, ಆಡಿ ಮುಂತಾದ ಕಾರುಗಳಿವೆ. ಟಿವಿಯಲ್ಲಿನ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಹೋಗುವ ಮಲೈಕಾ ಪ್ರತಿ ಎಪಿಸೋಡಿಗೆ 50 ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರಂತೆ. ವಯಸ್ಸು 50 ರ ಹತ್ತಿರ ಬಂದರೂ ಮಲೈಕಾ ಅರೋರಾ ಮಾತ್ರ ತಮ್ಮ ಚಾರ್ಮ್ ನ್ನು ಇನ್ನು ಕಳೆದುಕೊಂಡಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.