ಆತನನ್ನು ನಂಬಿ ದೇಹ, ಹಣ ಎಲ್ಲವನ್ನು ಆತನಿಗೆ ಅರ್ಪಿಸಿ ಗರ್ಭವತಿಯಾದಳು ಆದರೆ ಆಮೇಲೆ ನಡೆದ್ದದೇನು ಗೊತ್ತೇ?? ಈ ಪರಿಸ್ಥಿತಿ ಯಾರಿಗೂ ಬೇಡ.

18,914

ನಮಸ್ಕಾರ ಸ್ನೇಹಿತರೇ ಸಿನಿಮಾಮಂದಿಯ ರಂಗುರಂಗಿನ ತೆರೆಯ ಮೇಲಿನ ಲೈಫ್ ಅನು ನೋಡಿ ನೀವು ಅವರ ಜೀವನ ಸುಖವಾಗಿರುತ್ತದೆ ಎಂಬುದಾಗಿ ಭಾವಿಸಿರುತ್ತೀರಿ. ಆದರೆ ಇಂದು ನಾವು ಬಾಲಿವುಡ್ ಚಿತ್ರರಂಗದಲ್ಲಿ ಕೆಲವು ವರ್ಷಗಳ ಹಿಂದೆ ಮರೆಯಾದಂತಹ ಜಿಯಾಖಾನ್ ಅವರ ಲೈಫ್ ಸ್ಟೋರಿ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಆಕೆ ಹುಟ್ಟಿದ್ದು ನ್ಯೂಯಾರ್ಕಿನಲ್ಲಿ. ಜಿಯಾಖಾನ್ 2 ವರ್ಷದ ಉಳಿದ ಬೇಕಾದರೆ ಆಕೆಯ ತಾಯಿಯನ್ನು ತಂದೆ ಬಿಟ್ಟು ಹೋಗುತ್ತಾನೆ.

ಆಗ ಮೂರು ಮಕ್ಕಳನ್ನು ಸಾಕುವ ಭಾರ ಜಿಯಾಖಾನ್ ಅವರ ತಾಯಿಯ ಮೇಲೆ ಬರುತ್ತದೆ ಅವರು ಲಂಡನ್ನಿಗೆ ಶಿಫ್ಟ್ ಆಗುತ್ತಾರೆ. ಜಿಯಾಖಾನ್ ಓದುವುದರಲ್ಲಿ ಸದಾ ಮುಂದಿದ್ದಳು. ಇನ್ನು ಜಿಯಾಖಾನ್ ಅವರ ತಾಯಿ ಕೂಡ ಒಂದೆರಡು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ರಿಂದ ಅವರು ಆಗಾಗ ಮನೆಯಲ್ಲಿದ್ದಾಗ ಬಾಲಿವುಡ್ ಚಿತ್ರಗಳನ್ನು ನೋಡುತ್ತಲೇ ಇದ್ದರು. ಇದು ಜಿಯಾಖಾನ್ ಅವರ ಮೇಲೆ ಪ್ರಭಾವ ಬೀರಿ ಅವರು ಕೂಡ ಹಿಂದಿ ಸಿನಿಮಾಗಳನ್ನು ಇಷ್ಟಪಡುವಂತೆ ಆಯಿತು. ಹೀಗಾಗಿ ಆಕೆ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕೂಡಲೇ ಬಂದಿದ್ದು ಬಾಲಿವುಡ್ ಚಿತ್ರರಂಗದ ತವರೂರಾಗಿರುವ ಬಾಂಬೆಗೆ.

ಇಲ್ಲಿಗೆ ಬಂದಾಗ ಆಕೆಗೆ ಯಾರೂ ಕೂಡ ಪರಿಚಿತರಾಗಿರಲಿಲ್ಲ. ಆಕೆ ನಂಬಿಕೊಂಡು ಬಂದಿದ್ದು ಒಬ್ಬನೇ ಒಬ್ಬ ವ್ಯಕ್ತಿಯನ್ನು ಅದು ಖ್ಯಾತ ನಿರ್ದೇಶಕ ಆಗಿರುವ ರಾಮ್ ಗೋಪಾಲ್ ವರ್ಮಾ ರವರನ್ನು. ಅವರ ಕಚೇರಿಗೆ ಬಂದವಳೇ ನಾನು ನಿಮ್ಮ ಸಿನಿಮಾಗೆ ನಾಯಕಿಯಾಗಿ ಹಾಕಿಕೊಳ್ಳುತ್ತೀರ ಎಂಬುದಾಗಿ ಕೇಳುತ್ತಾಳೆ. ಆಕೆಯ ಮನಮೋಹಕ ಸೌಂದರ್ಯವನ್ನು ನೋಡಿದ ರಾಮ್ ಗೋಪಾಲ್ ವರ್ಮಾ ಯಾವುದೇ ಸಂದರ್ಶನ ತೆಗೆದುಕೊಳ್ಳದೆ ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡುತ್ತಾರೆ. ಜಿಯಾ ಖಾನ್ ಗೆ ಮೊದಲ ಚಿತ್ರದಲ್ಲಿ ಬಾಲಿವುಡ್ ಚಿತ್ರರಂಗದ ಜೀವಂತ ದಂತಕಥೆ ಆಗಿರುವ ಅಮಿತಾ ಬಚ್ಚನ್ ನಟನೆಯ ನಿಶಬ್ದ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತು.

ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ ಕೂಡ ಜಿಯಾಖಾನ್ ಅವರ ಪಾತ್ರ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅದು ರಾಮ್ ಗೋಪಾಲ್ ವರ್ಮಾ ರವರ ಸಿನಿಮಾವಾಗಿತ್ತು. ಅವರ ಸಿನಿಮಾಗಳು ಆಗಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ದೇಶದಾದ್ಯಂತ ಸಂಚಲನವನ್ನು ಸೃಷ್ಟಿಸುತ್ತಿದ್ದವು. ಇದಾದ ನಂತರ ಘಜಿನಿ ಹೌಸ್ಫುಲ್ ಹೇಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನಟಿಸ ತೊಡಗಿದಳು. ಜಿಯಾಖಾನ್ ಬಾಲಿವುಡ್ ಮಂದಿಗೆ ಪರಿಚಿತಳಾಗುತ್ತಾ ಬರುತ್ತಾಳೆ. ಹಾಗೆ ಬಾಲಿವುಡ್ ಸಂಸ್ಕೃತಿಗೆ ಕೂಡ ಒಗ್ಗಿಕೊಳ್ಳುತ್ತಾಳೆ.

ಅದೇನೆಂದರೆ ಅಲ್ಲಿ ಹೆಸರು ಮಾಡಿದರೆ ಚಿತ್ರರಂಗದವರು ಕರೆಯುವ ಎಲ್ಲಾ ಪಾರ್ಟಿಗಳಿಗೆ ಕೂಡ ಭಾಗವಹಿಸಬೇಕಾಗಿತ್ತು. ಜಿಯಾಖಾನ್ ಕೂಡಾ ಆಗಾಗ ಪಾರ್ಟಿಗೆ ಹೋಗುತ್ತಿದ್ದಳು. ಇದೇ ಪಾರ್ಟಿಗಳಲ್ಲಿ ಆಕೆ ಮೊದಲ ಬಾರಿಗೆ ಬಾಲಿವುಡ್ ಚಿತ್ರರಂಗದ ಹಿರಿಯ ನಟ ಆಗಿರುವ ಆದಿತ್ಯ ಪಾಂಚೋಲಿ ಅವರ ಪುತ್ರರಾಗಿರುವ ಸೂರಜ್ ಪಾಂಚೋಲಿಯನ್ನು ಕಾಣುತ್ತಾಳೆ. ಈ ಪರಿಚಯಿಸುವುದು ಸ್ನೇಹವಾಗಿ ಪ್ರೀತಿಗೆ ತಿರುಗಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಇಬ್ಬರೂ ಕೂಡ ಪ್ರೀತಿಯಲ್ಲಿ ಮುಳುಗುತ್ತಾರೆ.

ಈ ಸಂದರ್ಭದಲ್ಲಿ ಜಿಯಾಖಾನ್ ಸೂರಜ್ ಪಾಂಚೋಲಿಗೆ ತನ್ನೆಲ್ಲ ಸರ್ವಸ್ವವನ್ನು ಕೂಡ ಒಪ್ಪಿಸುತ್ತಾಳೆ. ಆತನನ್ನು ಗಂಡನನ್ನಾಗಿ ಪಡೆಯಲು ತುದಿಗಾಲಲ್ಲಿ ನಿಂತು ಕೊಳ್ಳುತ್ತಾಳೆ. ಆದರೆ ಸೂರಜ್ ಪಂಚೋಲಿ ನಿಧಾನಿಸಲು ಹೇಳುತ್ತಾನೆ ಯಾಕೆಂದರೆ ಆತನಿಗೆ ಆತನ ಕರಿಯರ್ ಕಟ್ಟಿಕೊಳ್ಳಬೇಕಾಗಿತ್ತಂತೆ. ಇದೇ ಸಂದರ್ಭದಲ್ಲಿ ಆಕೆ ಗರ್ಭಿಣಿಯಾಗುತ್ತಾಳೆ. ಆಗ ಸೂರಜ್ ಪಂಚೋಲಿ ಇದನ್ನು ತೆಗೆಸುವಂತೆ ಹೇಳುತ್ತಾನೆ. ಅದಕ್ಕೂ ಕೂಡ ಒಪ್ಪಿ ಗರ್ಭಪಾತ ಮಾಡಿಕೊಳ್ಳುತ್ತಾಳೆ.

ಆದರೆ ದಿನೇದಿನೇ ಬರುತ್ತಿದ್ದಂತೆ ಜಿಯಾಖಾನ್ ಳ ಸ್ನೇಹಿತೆಯರು ಸೂರಜ್ ಪಂಚೋಲಿ ಒಬ್ಬ ಗೋಮುಖ ವ್ಯಾಘ್ರ ಎಂಬುದಾಗಿ ಸಾಬೀತುಪಡಿಸುವಂತಹ ಹಲವಾರು ವಿಚಾರಗಳನ್ನು ತಿಳಿಸುತ್ತಾರೆ. ಇದರ ಕುರಿತಂತೆ ಜಿಯಾಖಾನ್ ಸೂರಜ್ ಪಾಂಚೋಲಿ ಬಳಿ ಕೇಳಲು ಹೋದಾಗ ಅವಳನ್ನು ದೂರ ತಳ್ಳುತ್ತ ಬರುತ್ತಾನೆ. ಅವನನ್ನೆ ನಂಬಿಕೊಂಡಿದ್ದ ಜಿಯಾಖಾನ್ ಈಗ ಅವನಿಂದಲೇ ತಿರಸ್ಕೃತಳಾಗುತ್ತಾಳೆ. ನಂತರ ಕೊನೆಗೆ ತಾಳಲಾರದೆ ಜಿಯಾಖಾನ್ ತನ್ನದೇ ಅಪಾರ್ಟ್ಮೆಂಟ್ನಲ್ಲಿ ತನ್ನ ಜೀವವನ್ನು ಕಳೆದುಕೊಳ್ಳುತ್ತಾಳೆ.

ಇಷ್ಟು ಮಾತ್ರವಲ್ಲದೆ 6 ಪುಟಗಳ ಪತ್ರವನ್ನು ಬರೆದು ಸೂರಜ್ ಪಾಂಚೋಲಿಯಿಂದ ಆದಂತಹ ಅವಮಾನ ಹಾಗೂ ಅನ್ಯಾಯವನ್ನು ಬರೆದಿಡುತ್ತಾಳೆ. ಇದರ ಆಧಾರದ ಮೇರೆಗೆ ಪೊಲೀಸರು ಸೂರಜ್ ಪಂಚೋಲಿ ಅವರನ್ನು ಬಂಧಿಸಿದಾಗ ಆ ಪತ್ರದಲ್ಲಿ ನನ್ನ ಹೆಸರಿದ್ದ ಮಾತ್ರಕ್ಕೆ ಅವಳ ಮರಣಕ್ಕೆ ನಾನು ಕಾರಣವಾ ಎಂಬುದಾಗಿ ನಿಷ್ಕಾರಣವಾಗಿ ಮಾತನಾಡುತ್ತಾನೆ. ಕೆಲವು ದಿನಗಳ ಜೈಲುವಾಸದ ನಂತರ ಬೇಲ್ ಮೇಲೆ ಹೊರಗೆ ಬರುತ್ತಾನೆ. ಚಿತ್ರರಂಗದಲ್ಲಿ ಉಜ್ವಲವಾದ ಭವಿಷ್ಯವನ್ನು ಕಾಣಬೇಕಿದ್ದ ಜಿಯಾಖಾನ್ ಯಾವುದೋ ಅನರ್ಹವಾದ ವ್ಯಕ್ತಿಯ ಪ್ರೀತಿಗಾಗಿ ಜೀವವನ್ನು ಕಳೆದುಕೊಳ್ಳುತ್ತಾಳೆ.