ಸಂಪೂರ್ಣ ಚಿನ್ನದಲ್ಲಿಯೇ ಹೋಟೆಲ್ ನಿರ್ಮಾಣ ಮಾಡಿದ ಮಾಲೀಕ. ಒಂದು ರಾತ್ರಿಗೆ ಎಷ್ಟು ಚಾರ್ಜ್ ಗೊತ್ತೇ?? ಕಟ್ಟಿದ ಮರುದಿನವೇ ಮಾಲಿಕನಿಗೆ ಶಾಕ್. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯರು ಎಷ್ಟರಮಟ್ಟಿಗೆ ಚಿನ್ನದ ಪ್ರಿಯರು ಎಂಬುದಾಗಿ ನಿಮಗೆಲ್ಲಾ ಗೊತ್ತೇ ಇದೆ ಅದಕ್ಕಾಗಿ ನಾವು ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಚಿನ್ನವನ್ನು ಖರೀದಿ ಮಾಡುವ ದೇಶ ಎಂಬ ಖ್ಯಾತಿಗೆ ಒಳಗಾಗಿದ್ದೇವೆ. ಇನ್ನು ಈ ಕಾಲದ ಜನರು ಬೆಲೆ ಕೊಡುವುದು ಕೂಡ ಚಿನ್ನವನ್ನು ಹಾಕಿಕೊಂಡಿರುವ ಮನುಷ್ಯರಿಗೆ ಎನ್ನುವುದು ನಿಮಗೆಲ್ಲ ತಿಳಿದಿದೆ. ಚಿನ್ನವನ್ನು ನೋಡಿ ಚಿನ್ನದಂತಹ ಮಾತುಗಳನ್ನು ಆಡುತ್ತಾರೆ ಎಂಬುದು ಈ ಕಲಿಯುಗದಲ್ಲಿ ನಾವು ಕಲಿತಿರುವ ಪಾಠವಾಗಿದೆ.
ಚಿನ್ನದಿಂದ ಸರ ಉಂಗುರ ಹೀಗೆ ಹಲವಾರು ಮೂರ್ತಿಗಳನ್ನು ಕೂಡ ಮಾಡಿರುವುದನ್ನು ನೀವು ಕೇಳಿರಬಹುದು. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಚಿನ್ನದಲ್ಲಿ ಹೋಟೆಲನ್ನು ಕಟ್ಟಿರುವ ವ್ಯಕ್ತಿಯ ಕುರಿತಂತೆ. ಹೌದು ಚಿನ್ನದ ಹೋಟೆಲ್ ಇರುವುದು ವಿಯೆಟ್ನಾಮ್ ದೇಶದಲ್ಲಿ. ಸಂಪೂರ್ಣ ಪ್ಯೂರ್ ಚಿನ್ನದಿಂದ 25 ಅಂತಸ್ತುಗಳ 400 ಕೊಠಡಿ ಇರುವ ಚಿನ್ನದ ಹೋಟೆಲನ್ನು ಕಟ್ಟಿಸಿದ್ದಾರೆ. ಇದರ ಪ್ರತಿಯೊಂದು ಗೋಡೆ ಕಿಟಕಿ ಟಾಯ್ಲೆಟ್ ಕಿಚನ್ ವರೆಗೆ ಎಲ್ಲವನ್ನೂ ಕೂಡ ಚಿನ್ನದ ಲೇಪನದಿಂದ ಕಟ್ಟಿಸಲಾಗಿದೆ. ಇಂತಹ ನೂರಕ್ಕೆ ನೂರರಷ್ಟು ಚಿನ್ನದಿಂದ ಕಟ್ಟಿಸಿರುವ ವಿಶ್ವದ ಮೊದಲ ಹೋಟೆಲ್ ಆಗಿದೆ.

ಈ ಹೋಟೆಲ್ ಕಟ್ಟಿಸುವುದಕ್ಕೆ ಬರೋಬ್ಬರಿ 1500 ಕೋಟಿ ರೂಪಾಯಿ ತಗುಲಿದ್ದು ಬರೋಬ್ಬರಿ ಹನ್ನೊಂದು ವರ್ಷಗಳ ಕಾಲ ಇದನ್ನು ಕಟ್ಟಿಸಲು ಸಮಯವನ್ನು ತೆಗೆದುಕೊಳ್ಳಲಾಗಿದೆ. ಇಷ್ಟು ಮಾತ್ರವಲ್ಲದೆ ಇಲ್ಲಿ ಇರೋದಕ್ಕೆ ಕೂಡ ಒಂದು ದಿನಕ್ಕೆ 18 ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಫೈವ್ ಸ್ಟಾರ್ ಸೌಲತ್ತುಗಳು ಇದ್ದರೂ ಕೂಡ ಇಲ್ಲಿನ ಸುತ್ತಮುತ್ತಲಿನ ಜನರು ಒಂದು ದಿನಕ್ಕೆ 18 ಸಾವಿರ ರೂಪಾಯಿ ನೀಡಲು ಸಿದ್ದರಿಲ್ಲ. ವಿದೇಶದಿಂದ ಪ್ರವಾಸಿಗರು ಬರುವುದಕ್ಕೆ ಮಹಾಮಾರಿ ಎನ್ನುವುದು ಅಡ್ಡಗಾಲಾಗಿ ನಿಂತಿದೆ. ಹೀಗಾಗಿ ಏನು ಮಾಡುವುದು ಎಂದು ಹೋಟೆಲ್ ಮಾಲೀಕ ಚಿಂತೆಗೀಡಾಗಿದ್ದಾರೆ. ಆದರೆ ಚಿನ್ನದಲ್ಲಿ ನಿರ್ಮಿತವಾಗಿರುವ ಈ ಹೋಟೆಲ್ ಮುಂದೊಂದು ದಿನ ದೊಡ್ಡ ಮಟ್ಟದ ಪ್ರವಾಸಿ ತಾಣವಾಗಿ ಮಾರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಚಿನ್ನದ ಹೋಟೆಲ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.