ಕಾರ್ ಬೈಕ್ ಎಂದರೆ ಬಹಳ ಇಷ್ಟ ಪಡುತ್ತಿದ್ದ ಅಪ್ಪು ರವರ ಬಳಿ ಇದ್ದ ಕಾರುಗಳು ಹಾಗೂ ಬೈಕ್ ಗಳು ಯಾವ್ಯಾವು ಹಾಗೂ ಅವುಗಳ ಬೆಲೆ ಎಷ್ಟು ಗೊತ್ತೇ??

100

ನಮಸ್ಕಾರ ಸ್ನೇಹಿತರೇ ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ ಇನ್ನೂ ರಾಜಕುಮಾರ ಚಿತ್ರದ ಹಾಡಿನ ಸಾಲುಗಳು ಪುನೀತ್ ರಾಜಕುಮಾರ್ ರವರ ಜೀವನಕ್ಕೆ ಪರ್ಫೆಕ್ಟ್ ಆಗಿದೆ. ದೊಡ್ಡಮನೆಯ ಕಿರಿಯ ಮಗನಾಗಿ ಜನಿಸಿದರು ಕೂಡ ಸಾಕಷ್ಟು ಸರಳತೆಯಿಂದ ಎಲ್ಲರೊಂದಿಗೆ ವರ್ತಿಸುತ್ತಿದ್ದರು. ಅವರ ಜೀವನಶೈಲಿ ಕೂಡ ಸಾಕಷ್ಟು ಸರಳವಾಗಿತ್ತು. ಅವರು ದುಡ್ಡು ಮಾಡಬೇಕೆಂದು ಚಿತ್ರರಂಗದಲ್ಲಿ ಬಂದಿದ್ದರೆ ಹತ್ತು ತಲೆಮಾರಿಗೆ ಆಗುವಷ್ಟು ಹಣವನ್ನು ಸಂಪಾದಿಸಿ ಇಡಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಅಷ್ಟು ಮಾತ್ರವಲ್ಲದೆ ಕಷ್ಟ ಎಂದು ಬಂದವರಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡುತ್ತಿದ್ದರು.

ಕೇವಲ ತಮ್ಮ ಕುಟುಂಬದವರಿಗೆ ಮಾತ್ರವಲ್ಲದೆ ಚಾರಿಟಿಗಳಿಗೆ ಕೂಡ ಪುನೀತ್ ರಾಜಕುಮಾರ್ ರವರು ಹಣವನ್ನು ಬಿಟ್ಟುಹೋಗಿದ್ದರು. ಅದಕ್ಕೆ ಉದಾಹರಣೆಯೆಂಬಂತೆ ಪುನೀತ್ ರಾಜಕುಮಾರ್ ರವರು ಚಾರಿಟಿ ಕಾರ್ಯಗಳಿಗೆ 8 ಕೋಟಿ ರೂಪಾಯಿ ಫಿಕ್ಸಡ್ ಡೆಪೋಸಿಟ್ ಮಾಡಿರುವುದು. ಅವರ ಒಳ್ಳೆಯ ಕೆಲಸಗಳನ್ನು ಹೇಳುತ್ತಾ ಹೋದರೆ ಅದಕ್ಕೆ ಅಂತ್ಯವೇ ಇಲ್ಲ ಎಂದು ಹೇಳಬಹುದು. ಇಂದಿನ ವಿಚಾರದಲ್ಲಿ ನಾವು ಪುನೀತ್ ರಾಜಕುಮಾರ್ ರವರ ಬಳಿ ಇದ್ದ ಐಷಾರಾಮಿ ಕಾರುಗಳು ಹಾಗೂ ಅವುಗಳ ಬೆಲೆಯ ಕುರಿತಂತೆ ತಿಳಿಯೋಣ ಬನ್ನಿ. ಯಾವ ಬಾಲಿವುಡ್ ನ ಸ್ಟಾರ್ ನಟನಿಗೂ ಕಮ್ಮಿ ಇಲ್ಲದಂತೆ ಐಷರಾಮಿ ಕಾರುಗಳ ಕಲೆಕ್ಷನ್ ಪುನೀತ್ ರಾಜಕುಮಾರ್ ಅವರ ಬಳಿ ಇತ್ತು.

50 ಲಕ್ಷ ರೂಪಾಯಿ ಬೆಲೆ ಬಾಳುವ ಬಿ ಎಂ ಡಬ್ಲ್ಯೂ ಕಾರ್ ಪುನೀತ್ ರಾಜಕುಮಾರ್ ಅವರ ಬಳಿಯಿದೆ. 82 ಲಕ್ಷ ಬೆಲೆಬಾಳುವ ಆಡಿ ಸಂಸ್ಥೆಯ ಕ್ಯೂ 7 ಕಾರನ್ನು ಕೂಡ ಖರೀದಿಸಿದ್ದರು. ನೀವು ನೋಡಿರದೆ ಇರಬಹುದು ಆದರೆ ಪುನೀತ್ ರಾಜಕುಮಾರ್ ಅವರಿಗೆ ಬೈಕ್ನಲ್ಲಿ ರೈಡಿಂಗ್ ಹೋಗುವ ಅಭ್ಯಾಸ ಕೂಡ ಇತ್ತು. ಹೀಗಾಗಿ 12.5 ಲಕ್ಷ ಬೆಲೆಬಾಳುವ ಇಂಡಿಯನ್ ಸ್ಕೌಟ್ ಎನ್ನುವ ಬೈಕನ್ನು ಕೂಡ ಖರೀದಿಸಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರು ಸೈಕಲ್ನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದದ್ದನ್ನು ನೀವು ನೋಡಿರಬಹುದು. ಸ್ವಿಚ್ ಎನ್ನುವ ಒಂದುವರೆ ಲಕ್ಷ ರೂಪಾಯಿ ಬೆಲೆಬಾಳುವ ಸೈಕಲ್ನಲ್ಲಿ ಓಡಾಡುತ್ತಿದ್ದರು. ಅಣ್ಣನಾಗಿರುವ ಶಿವಣ್ಣನಿಗೆ ಕೂಡ ಬಿಎಂಡಬ್ಲ್ಯೂ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 50 ಸಾವಿರ ಬೆಲೆಯುಳ್ಳ ಎಫ್ಎಂ ಎನ್ನುವ ಸೈಕಲ್ ಕೂಡ ಪುನೀತ್ ರಾಜಕುಮಾರ್ ಅವರ ಬಳಿ ಇದೆ. ಪುನೀತ್ ರಾಜಕುಮಾರ್ ಅವರ ಸಿನಿಮಾಗಳಿಗೆ ಆಗಿ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗೆ ಅವರ ಆದಾಯದ ಇನ್ನೊಂದು ಮೂಲವಾಗಿರುವ ಜಾಹೀರಾತಿನಲ್ಲಿ ಕೂಡ ಪ್ರತಿ ಜಾಹೀರಾತಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಸಂಭಾವನೆಯನ್ನು ಪಡೆಯುತ್ತಾರೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮಾಡುತ್ತಿದ್ದಾಗಲೂ ಕೂಡ ಸಂಚಿಕೆಗೆ ಒಂದು ಕೋಟಿ ರೂಪಾಯಿ ಪಡೆಯುತ್ತಿದ್ದರಂತೆ. ನಿರ್ಮಾಪಕನಾಗಿ ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಹಣವನ್ನು ಗಳಿಸಿದ್ದಾರೆ ನಮ್ಮ ಅಪ್ಪು. ಅಪ್ಪು ಅವರ ಬಳಿ ಬರೋಬ್ಬರಿ 186 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ ಕೂಡ ಯಾವತ್ತು ಶ್ರೀಮಂತಿಕೆ ದರ್ಪವನ್ನು ಯಾರ ಬಳಿಯು ಕೂಡ ತೋರಿಸಿರಲಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕಾರಿನ ಮೇಲೆ ಇರುವ ವ್ಯಾಮೋಹ ಇಂದು ನಿನ್ನೆಯದಲ್ಲ ಬದಲಾಗಿ ಚಿಕ್ಕವಯಸ್ಸಿನಲ್ಲೇ ಒಂದು ಬಾರಿ ಅಪ್ಪ ಡಾ ರಾಜಕುಮಾರ್ ರವರು ನಿನಗೆ ಏನು ಬೇಕು ಎಂದು ಕೇಳಿದಾಗಲೇ ರಿಮೋಟ್ ಕಾರು ಬೇಕು ಎಂಬುದಾಗಿ ಹೇಳಿದವರು ನಮ್ಮ ಅಪ್ಪು. ಇದುವರೆಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಬರೋಬ್ಬರಿ 9 ದುಬಾರಿ ಕಾರುಗಳನ್ನು ಖರೀದಿಸಿದ್ದಾರೆ.

ಹಾಗಿದ್ದರೆ ಅಪ್ಪು ರವರ ಬಳಿ ಜೀವಿತಾವಧಿಯಲ್ಲಿ ಖರೀದಿಸಿ ದಂತಹ ಕಾರುಗಳು ಯಾವುವು ಎಂದು ಕೇಳಿದರೆ, ನಿಸ್ಸಾನ್ ಜಿಟಿ ಆರ್, ಆರ್ ಡಿ ಆರ್.8, ಲ್ಯಾಂಬೋರ್ಗಿನಿ ಯೂರಸ್, ರೇಂಜ್ ರೋವರ್ ವ್ಯೂಗೋ, ವೋಲ್ವೋ ಎಕ್ಸ್ ಸಿ.90, ಟೊಯೋಟಾ ಫಾರ್ಚುನರ್, ಮಿನಿ ಕೂಪರ್ ಕನ್ವರ್ಟಿಬಲ್, ಫೋರ್ಡ್ ಮತ್ತು ಆರ್ ಡಿ ಕ್ಯೂ ಸೆವೆನ್ ಎಂದು ಹೇಳಬಹುದು. ಬರೀ ಕೇವಲ ಕಾರುಗಳ ಮೌಲ್ಯವನ್ನೇ ಅಂದಾಜು ಹಾಕುವುದಾದರೆ ಹತ್ತು ಕೋಟಿಗೂ ಅಧಿಕ ಮೌಲ್ಯ ಸಿಗುತ್ತದೆ. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿ ಅಥವಾ ಇಷ್ಟೆಲ್ಲಾ ಹಣವನ್ನು ಸಂಪಾದಿಸಿದರು ಕೂಡ ಆ ದೇವರು ನಮ್ಮ ಅಪ್ಪು ರವರಿಗೆ ಆಯಸ್ಸನ್ನು ಮಾತ್ರ ಹೆಚ್ಚಿಸಲಿಲ್ಲ. ಆದರೆ ತಾವು ಇದ್ದ ಅಲ್ಪಸಮಯದಲ್ಲೇ ಇಡೀ ಜಗತ್ತೇ ಮೆಚ್ಚುವಂತಹ ಕೆಲಸವನ್ನು ಮಾಡಿ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ.