ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮಕ್ಕಾಗಿ ಒಂದು ಎಪಿಸೋಡಿಗೆ ಮೇಘನಾ ರಾಜ್ ರವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

2,631

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಸ್ಪೆಷಲ್ ಕಾರ್ಯಕ್ರಮಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿ ಒಂದು ಕಾರ್ಯಕ್ರಮದ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ಸ್ ಎನ್ನುವ ಹೊಸ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಇದರ ಪ್ರೋಮೋಗಳು ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ ನಿರೂಪಕರಾಗಿ ಅಕುಲ್ ಬಾಲಾಜಿ ಅವರು ಕಾಣಿಸಿಕೊಳ್ಳಲಿದ್ದಾರೆ.

ತೀರ್ಪುಗಾರರಾಗಿ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನೃತ್ಯಗಾರ್ತಿ ಮಯೂರಿ ಹಾಗೂ ನಟಿ ಮೇಘನಾ ರಾಜ್ ರವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗಾಗಲೇ ತಿಳಿದುಬಂದಿದೆ. ಹಲವಾರು ಸಮಯಗಳ ನಂತರ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಮೇಘನಾರಾಜ್ ರವರು ಭಾಗವಹಿಸುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತೋಷವನ್ನು ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಕುರಿತಂತೆ ಕೆಲವು ಸಮಯಗಳ ಹಿಂದಷ್ಟೇ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮೊದಲ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ ಎಂಬುದಾಗಿ ಸುಳಿವು ನೀಡಿದ್ದರು. ಅಭಿಮಾನಿಗಳು ಅದನ್ನು ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದಾಗಿ ತಿಳಿದುಕೊಂಡಿದ್ದರು. ಈಗ ಪ್ರೋಮೋ ನೋಡುವ ಮೂಲಕ ಎಲ್ಲರಿಗೂ ತಿಳಿದುಬಂದಿದೆ.

ಕೆಲವು ಮೂಲಗಳ ಪ್ರಕಾರ ಮೇಘನಾ ರಾಜ್ ಅವರು ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೇಳಿಬರುತ್ತದೆ. ಕೇವಲ ಒಂದು ದಿನಕ್ಕಾಗಿ ಮಾತ್ರ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಅಥವಾ ಕೊನೆಯವರೆಗೂ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಈ ಕಾರ್ಯಕ್ರಮಕ್ಕಾಗಿ ಮೇಘನಾರಾಜ್ ರವರು ಪಡೆದುಕೊಳ್ಳುತ್ತಿರುವ ಸಂಭಾವನೆಯ ಕುರಿತಂತೆ ಈಗ ತಿಳಿದುಬಂದಿದೆ. ಮೇಘನಾ ರಾಜ್ ರವರು ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮಕ್ಕಾಗಿ ಪ್ರತಿ ಎಪಿಸೋಡಿಗೆ ಬರೋಬ್ಬರಿ 1.3 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮವನ್ನು ನೋಡಲು ನೀವು ಕಾತುರರಾಗಿದ್ದೀರಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.