ಬಿಸಿಸಿಐ ಮುಂದೆ ಹೊಸ ಯೋಜನೆ ಇಟ್ಟ ಇರ್ಫಾನ್ ಪಠಾನ್, ವಿದಾಯ ಪಂದ್ಯವಾಡದೇ ನಿವೃತ್ತಿ ಹೊಂದಿದ 11 ಜನರ ಹೆಸರು ನೀಡಿ ಹೇಳಿದ್ದೇನು ಗೊತ್ತೇ??

1,778

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕ್ರೀಡೆ ಎಂದರೇನು ಖಂಡಿತವಾಗಿಯೂ ಕ್ರಿಕೆಟ್ ಎಂದರೆ ತಪ್ಪಾಗಲಾರದು. ಅದರಲ್ಲೂ ಫುಟ್ಬಾಲ್ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆಯೆಂದರೆ ಇಡೀ ವಿಶ್ವದಲ್ಲಿ ಅದು ಕ್ರಿಕೆಟ್. ಇಲ್ಲಿ ಕ್ರಿಕೆಟ್ ಕ್ಷೇತ್ರವನ್ನು ತೆಗೆದುಕೊಂಡಾಗ ನಮ್ಮ ಭಾರತದೇಶ ಎನ್ನುವುದು ಕ್ರಿಕೆಟ್ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆ ನೀಡಿದೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇಂದು ನಾವು ಹೇಳಲು ಹೊರಟಿರುವುದು ನಮ್ಮ ಭಾರತ ದೇಶದಲ್ಲಿ ವಿದಾಯದ ಪಂದ್ಯವನ್ನು ಆಡದೇ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಹಲವಾರು ಆಟಗಾರರಿದ್ದಾರೆ.

ಇಂದಿನ ಲೇಖನಿಯಲ್ಲಿ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. ಕೆಲವರಿಗೆ ವಿದಾಯದ ಪಂದ್ಯವನ್ನು ಆಡಲು ಬಿಸಿಸಿಐ ಅವಕಾಶ ನೀಡಿರುವುದಿಲ್ಲ. ಕೆಲವರಿಗೆ ಬಿಸಿಸಿಐ ವಿದಾಯದ ಪಂದ್ಯವನ್ನು ಆಡಲು ಅವಕಾಶ ನೀಡಿದರೂ ಕೂಡ ಅವರು ಸಂತೃಪ್ತರಾಗಿಯೇ ಮೈದಾನದ ಹೊರಗಡೆಯೇ ವಿದಾಯವನ್ನು ಹೇಳಿಬಿಡುತ್ತಾರೆ. ಇತ್ತೀಚಿಗಿನ ಘಟನೆಯನ್ನು ತೆಗೆದುಕೊಳ್ಳುವುದಾದರೆ ಧೋನಿ ರವರಿಗೆ ವಿದಾಯದ ಪಂದ್ಯವನ್ನು ಆಡುವ ಅವಕಾಶವಿದ್ದರೂ ಕೂಡ ಆಡಿರಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ಧೋನಿ ಅವರು ವಿದಾಯ ಪಂದ್ಯವನ್ನು ಆಡಲೇ ಬೇಕೆಂದು ಬಿಸಿಸಿಐಯನ್ನು ಕೋರಿಕೊಂಡಿದ್ದರು.

ಇನ್ನು ಹಲವಾರು ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜರಿಗೆ ವಿಜಯ ಪಂದ್ಯಗಳು ಇನ್ನೂ ಕೂಡ ನಡೆದಿಲ್ಲ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಖಾನ್ ರವರು ಒಂದು ಯೋಜನೆಯನ್ನು ಬಿಸಿಸಿಐ ಮುಂದಿಟ್ಟಿದ್ದಾರೆ. ಅದೇನೆಂದರೆ ವಿದಾಯದ ಪಂದ್ಯವನ್ನು ಆಡದೆ ಇರುವ ಕ್ರಿಕೆಟ್ ದಿಗ್ಗಜರನ್ನು ಈಗ ಇರುವ ಭಾರತೀಯ ಕ್ರಿಕೆಟ್ ತಂಡದ ಎದುರು ಆಡಿಸಿ ಬಂದ ಹಣವನ್ನು ಒಳ್ಳೆಯ ಕಾರ್ಯಕ್ರಮ ವಿನಿಯೋಗಿಸುವಂತೆ ಕೇಳಿಕೊಂಡಿದ್ದಾರೆ. ಇರ್ಫಾನ್ ಪಠಾಣ್ ರವರ ಪ್ರಕಾರ ವಿದಾಯ ಪಂದ್ಯವನ್ನು ಆಡದೆ ಇರುವ ತಂಡದ 11ಜನರ ಆಟಗಾರರ ಪಟ್ಟಿ ಹೀಗಿದೆ, ಗೌತಮ್ ಗಂಭೀರ್ ವೀರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ವಿವಿಎಸ್ ಲಕ್ಷ್ಮಣ್ ಯುವರಾಜ್ ಸಿಂಗ್ ಸುರೇಶ್ ರೈನಾ ಎಂಎಸ್ ಧೋನಿ ಇರ್ಫಾನ್ ಪಠಾಣ್ ಅಜಿತ್ ಅಗರ್ಕರ್ ಜಹೀರ್ ಖಾನ್ ಹಾಗೂ ಪ್ರಗ್ಯಾನ್ ಓಜ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.