ಒಮ್ಮೆ ಫೂಲ್ ಚಾರ್ಜ್ ಮಾಡಿದ್ರೆ 200 ಕೀ.ಮಿ ಓಡುವ ಇವಿ ಬೈಕ್; ವಿಶೇಷ ಆಫರ್ ನೀಡಿದ ಬೆಂಗಳೂರಿನ ಒಬೆನ್ ಇವಿ. ಕಡಿಮೆ ಬೆಲೆಗೆ ಸೂಪರ್ ಬೈಕ್?

377

ನಮಸ್ಕಾರ ಸ್ನೇಹಿತರೇ ದುಬಾರಿಯಾಗುತಿರುವ ಇಂಧನದ ಬೆಲೆ, ನಶಿಸುತ್ತಿರುವ ಪರಿಸರವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದು ಇಂದು ವಾಹನ ಖರೀದಿ ಹಾಗೂ ತಯಾರಿಕೆಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ಈ ಮೊದಲು ಎಗ್ಸಿಸ್ಟ್ ಆಗಿರುವ ಮೋಟಾರ್ ಕಂಪನಿಗಳನ್ನು ಹೊರತು ಪಡಿಸಿ, ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಇಲೆಕ್ಟ್ರಿಕ್ ವಾಹನ ತಯಾರಿಕಾ ವಿಚಾರದಲ್ಲಿ ಯಶಸ್ಸನ್ನು ಕಾಣುತ್ತಿವೆ. ಅವುಗಳಲ್ಲಿ ನಮ್ಮ ಬೆಂಗಳೂರು ಮೂಲದ ಒಬೆನ್ ಇವಿ ಕಂಪನಿಯು ಕೂಡಾ ಒಂದು.

ಹೌದು ಬೆಂಗಳೂರಿನ ಒಬೆನ್ ಇವಿ ಕಂಪನಿ ಆಕರ್ಷಕವಾದ ಇವಿ ಬೈಕ್ ನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಾಗಿದೆ. ಈ ಬೈಕ್ ನಲ್ಲಿ ಹೊಸ ವೈಶಿಷ್ಟ್ಯತೆಯ ಹೈ ಸ್ಪೀಡ್ ಮಾದರಿಯನ್ನು ಅಳವಡಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಿಂದ ಅಪ್ ಗ್ರೇಡೆಡ್ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಒಬೆನ್ ನ ನೂತನ ಬೈಕ್ ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ಸ್ಪೀಡ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡಲಿದೆ. ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಹೊಂದಿದ್ದು, ಕೇವಲ 2 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದು.

ಬೆಂಗಳೂರಿನ ನಿವಾಸಿಗಳಾದ ದಿನಕರ್ ಮತ್ತು ಮಧುಮತಿ ಅಗರವಾಲ್ ಎನ್ನುವ ದಂಪತಿ ಒಬೆನ್ ಇವಿಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಮೆಕ್ಯಾನಿಕಲ್ ವೃತ್ತಿ ಮಾಡುತ್ತಿರುವ ದಿನಕರ್ ತಮ್ಮ ಅನುಭವದ ಜೊತೆಗೆ ಪತ್ನಿ ಮಧುಮತಿ ಅಗರವಾಲ್ ಅವರ ಜೊತೆಗೆ ಮಾರುಕಟ್ಟೆಯ ಸದ್ಯದ ಬೇಡಿಕೆ ಇಡೇರಿಸಲು ಮುಂದಾಗಿದ್ದಾರೆ. ಇನ್ನು ಈ ಇವಿ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಈ ಬೈಕ್ ನಲ್ಲಿ ರೈಡಿಂಗ್ ಫೀಚರ್ಸ್ ಸುಲಭವಾಗಿದ್ದು ಸ್ಥಳೀಯ ಬಿಡಿಬಾಗಗಳನ್ನೇ ಬಳಸಲಾಗಿದೆ.

ಈ ಹೊಸ ಇವಿ ಬೈಕ್ ಮಾದರಿಯು ಈ ವರ್ಷದ ಮಧ್ಯಂತರದಲ್ಲಿ ಮಾರುಕಟ್ಟೆಗೆ ಲಗ್ಗೆಇಡಲಿದೆ. ಈ ಬೈಕ್ ಮಾದರಿಯು 250 ಸಿಸಿ ಬೈಕ್ ನ ಬಾಡಿ ಶೈಲಿ ಹೊಂದಿದ್ದು, ಅತ್ಯುತ್ತಮ ಎಲೆಕ್ಟ್ರಿಕ್ ಮೋಟಾರ್ ಅವವಡಿಸಲಾಗಿದೆ. ಇನ್ನು ಇದರಲ್ಲಿರುವ ವೈಶಿಷ್ಟ್ಯತೆ ಎಂದರೆ ಕೇವಲ 3 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗಪಡೆದುಕೊಳ್ಳುವುದರ ಜೊತೆಗೆ ಕ್ವಿಕ್ ಆಕ್ಸೆರೇಷನ್ ಸೌಲಭ್ಯ ಜನರ ಗಮನ ಸೆಳೆಯುವುವುದಂತೂ ಪಕ್ಕಾ! ಇನ್ನು ಈ ಇವಿ ಬೈಕ್ ರೂ. 1.30 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅನೇಕ ವೈಶಿಷ್ಟ್ಯತೆಯನು ಹೊಂದಿರುವ ಒಬೆನ್ ಇವಿಯ ಈ ಇವಿ ಬೈಕ್ ಜನರ ಮನಸ್ಸು ಗೆಲ್ಲುವುದರಲ್ಲಿ ನೋ ಡೌಟ್!