ನೇರವಾಗಿ ರಾಜ್ ಶೆಟ್ಟಿ ಗೆ ಕಾಲ್ ಮಾಡಿದ ಶಿವಣ್ಣ ಅವಾಜ್ ಹಾಕಿದ್ದು ಯಾಕೆ ಗೊತ್ತೇ? ಯಾರೆಂದು ತಿಳಿಯದೆ ಇದ್ದರೂ ರಾಜ್ ಶೆಟ್ಟಿ ಮಾಡಿದ್ದೇನು ಗೊತ್ತೇ??

405

ನಮಸ್ಕಾರ ಸ್ನೇಹಿತರೇ ಕನ್ನಡದ ಸೂಪರ್ ಸ್ಟಾರ್, ಸೆಂಚುರಿ ಸ್ಟಾರ್ ಶಿವಣ್ಣ ಸ್ವಲ್ಪ ಗರಂ ಆಗಿದ್ದರು. ಅದು ಬೇರಾರ ಮೇಲೆಯೂ ಅಲ್ಲ. ಕನ್ನಡದ ಮತ್ತೊಬ್ಬ ನಿರ್ದೇಶಕ ಕಮ್ ನಟ ರಾಜ್ ಬಿ ಶೆಟ್ಟಿ ಮೇಲೆ‌. ಸೀದಾ ರಾಜ್ ಶೆಟ್ಟಿಗೆ ಕಾಲ್ ಮಾಡಿದ ಶಿವಣ್ಣ, ಆವಾಜ್ ಹಾಕಿದರು. ಅದಕ್ಕೆ ಪ್ರತಿಯಾಗಿ ಅವರು ಕೂಡಾ ಜೋರಾಗಿಯೇ ಮಾತನಾಡಿದರು.

ಇತ್ತಿಚೆಗೆ ರಿಲೀಸ್ ಆಗಿರುವ ತಮ್ಮ ಭಜರಂಗಿ – 2 ಚಿತ್ರದ ಗುಂಗಿನಲ್ಲಿರುವ ಶಿವಣ್ಣ , ಅದೇ ರೀತಿ ಮಾತನಾಡಿದರೇ, ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿನ ಪಾತ್ರದ ಮಂಗಳಾದೇವಿಯ ಪಾತ್ರದಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿ ಸಹ ಪಾತ್ರದ ಗುಂಗಿನಿಂದ ಹೊರಬರದೇ ಹಾಗೆ ಮಾತನಾಡಿದರು. ಆದರೇ ಮೊದ ಮೊದಲು ರಾಜ್ ಶೆಟ್ಟಿ ಶಿವಣ್ಣನ ಧ್ವನಿ ಗುರುತಿಸಿದರೇ ಸಾಮಾನ್ಯವಾಗಿ ಮಾತನಾಡಿದ್ದಾರೆ. ಆಮೇಲೆ ನೀವ್ಯಾರು ಎಂದು ಪ್ರಶ್ನಿಸಿದಾಗ ನಾನು ಭಜರಂಗಿ ಎಂದು ಶಿವಣ್ಣ ಹೇಳಿದರು. ಆಗ ರಾಜ್ ಶೆಟ್ಟಿ ಜೋರಾಗಿ ನಕ್ಕರು.

ಅಷ್ಟಕ್ಕೂ ಈ ಸೀನ್ ರೆಕಾರ್ಡ್ ಆಗಿರುವ ಹಿಂದಿನ ಉದ್ದೇಶ ಬೇರೆಯದ್ದೇ ಇದೆ. ಶಿವಣ್ಣ ಅಭಿನಯದ ಭಜರಂಗಿ – 2 ಇತ್ತಿಚೇಗೆ ಜೀ5 ನ ಓಟಿಟಿ ಪ್ಲಾಟ್ ಫಾರ್ಂ ನಲ್ಲಿ ಬಿಡುಗಡೆಗೊಂಡು, ಅಲ್ಲಿ ಈಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಇತ್ಯಿಚೆಗಷ್ಟೆ ತೆರೆಕಂಡು ಯಶಸ್ವಿಯಾಗಿದ್ದ ರಾಜ್ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಹ ಶೀಘ್ರದಲ್ಲಿಯೇ ಜೀ5 ನಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ಈ ಚಿತ್ರದ ಪ್ರಚಾರ ಮತ್ತು ಬಿಡುಗಡೆಯ ದಿನಾಂಕವನ್ನು ಘೋಷಿಸಲು ಚಿತ್ರತಂಡ ಈ ಥರಹದ ತಂತ್ರ ಹೂಡಿತೆಂದು ಹೇಳಲಾಗಿದೆ. ಇನ್ನು ಶಿವಣ್ಣ ಸಹ ಗರುಡ ಗಮನ ವೃಷಭ ವಾಹನ ಚಿತ್ರವನ್ನ ಮೆಚ್ಚಿಕೊಂಡಿದ್ದು, ಇಂತಹ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗಲಿ ಎಂದು ಶುಭ ಹಾರೈಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.