ಒಂದು ಕಾಲದಲ್ಲಿ ಆರ್ಸಿಬಿ ತಂಡದಲ್ಲಿ ಆಟವಾಡಿದ್ದ ಐದು ಆಟಗಾರ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ ಮ್ಯಾನೇಜ್ಮೆಂಟ್. ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಆಟಗಾರರ ಸಾರ್ವತ್ರಿಕ ಹರಾಜು ನಡೆಯಲಿದ್ದು ಉತ್ತಮ ತಂಡವನ್ನ ಕಟ್ಟುವ ನಿಟ್ಟಿನಲ್ಲಿ ಆರ್ಸಿಬಿ ತಂಡ, ತನ್ನದೇ ಫ್ರಾಂಚೈಸಿಗೆ ಆಡಿದ್ದ ಐವರು ಕ್ರಿಕೇಟಿಗರ ಮೇಲೆ ಕಣ್ಣಿಟ್ಟಿಯಂತೆ. ಬನ್ನಿ ಆ ಐವರು ಆಟಗಾರರು ಯಾರು ಎಂದು ತಿಳಿಯೋಣ.

1.ಕೆ.ಎಲ್.ರಾಹುಲ್ – ಆರ್ಸಿಬಿ ತಂಡದ ಮಾಜಿ ಆರಂಭಿಕ ಹಾಗೂ ಹಾಲಿ ಭಾರತ ತಂಡದ ಉಪನಾಯಕ. ಈ ಭಾರಿ ಹರಾಜಿಗೆ ಲಭ್ಯವಾಗಿದ್ದಾರೆ. ಹಾಗಾಗಿ ಆರ್ಸಿಬಿ ತಂಡ ರಾಹುಲ್ ರನ್ನ ಖರೀದಿಸಿ, ಅವರಿಗೆ ವಿಕೇಟ್ ಕೀಪಿಂಗ್ ಜೊತೆ ನಾಯಕತ್ವವನ್ನು ವಹಿಸಲು ಚಿಂತಿಸುತ್ತಿದೆ.
2.ಭುವನೇಶ್ವರ್ ಕುಮಾರ್ – ಸ್ವಿಂಗ್ ಕಿಂಗ್ ಭುವಿ 2009 ರಲ್ಲಿ ತಮ್ಮ ಮೊದಲ ಐಪಿಎಲ್ ಪಂದ್ಯವನ್ನ ಆರ್ಸಿಬಿ ಪರ ಆಡಿದ್ದರು. ನಂತರ ಬೇರೆ ಫ್ರಾಂಚೈಸಿ ಪರ ಆಡಿದರು. ಸದ್ಯ ಹರಾಜಿಗೆ ಲಭ್ಯವಾಗಿರುವ ಇವರನ್ನು ಆರ್ಸಿಬಿ ಖರೀದಿಸಿ, ತನ್ನ ಬೌಲಿಂಗ್ ಲೈನ್ ಅಪ್ ನ್ನು ಗಟ್ಟಿಗೊಳಿಸುವತ್ತ ಯೋಚಿಸುತ್ತಿದೆ.
3.ಮನೀಶ್ ಪಾಂಡೆ – ಆರ್ಸಿಬಿ ಪರ 2009ರಲ್ಲಿ ಆಡಿ, ಮೊದಲ ಪಂದ್ಯದಲ್ಲೇ ಶತಕಗಳಿಸಿದ ಸಾಧನೆ ಪಾಂಡೆಯವರದ್ದು. ಸದ್ಯ ಹರಾಜಿಗೆ ಲಭ್ಯವಾಗಿರುವ ಇವರನ್ನು ಖರೀದಿಸಿ ಮಧ್ಯಮ ಕ್ರಮಾಂಕ ಹಾಗೂ ನಾಯಕತ್ವವನ್ನು ಪಾಂಡೆಗೆ ವಹಿಸುವ ಚಿಂತನೆಯಲ್ಲಿದೆ ಆರ್ಸಿಬಿ ತಂಡ.
4.ಆವೇಶ್ ಖಾನ್ – ಮಧ್ಯ ಪ್ರದೇಶದ ವೇಗಿ ಆವೇಶ್ 2018 ರಲ್ಲಿ ಆರ್ಸಿಬಿ ತಂಡದಲ್ಲಿದ್ದರು. ಆದರೇ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಅವರಿಗೆ ಸಿಗಲಿಲ್ಲ. ಮುಂದೆ ದೆಹಲಿ ತಂಡಕ್ಕೆ ತೆರಳಿ, ಅದ್ಭುತ ಬೌಲಿಂಗ್ ಮಾಡಿರುವ ಆವೇಶ್ ಸದ್ಯ ಹರಾಜಿಗೆ ಲಭ್ಯರಾಗಿದ್ದಾರೆ. ಇವರನ್ನ ಸಹ ಖರೀದಿಸಲು ಆರ್ಸಿಬಿ ಚಿಂತನೆ ನಡೆಸಿದೆ.
5.ಮಿಚೆಲ್ ಸ್ಟಾರ್ಕ್ – 2016 ರಲ್ಲಿ ಆರ್ಸಿಬಿ ತಂಡದ ಪ್ರಮುಖ ಬೌಲರ್ ಆಗಿದ್ದ ಸ್ಟಾರ್ಕ್ ನಂತರದ ದಿನಗಳಲ್ಲಿ ಐಪಿಎಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.ಈಗ ಹರಾಜಿನಲ್ಲಿ ಭಾಗವಹಿಸುತ್ತಿರುವ ಇವರನ್ನ ಖರೀದಿಸಿ , ಬೌಲಿಂಗ್ ವಿಭಾಗ ಮಾತ್ರವಲ್ಲದೇ, ಕೆಳಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ಸಹ ಗಟ್ಟಿಗೊಳಿಸುವತ್ತ ಆರ್ಸಿಬಿ ಚಿಂತನೆ ನಡೆಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.