ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಮೊಬೈಲ್ ರಿಂಗ್ ಟೋನ್ ಯಾವುದಾಗಿತ್ತು ಗೊತ್ತಾ?? ಇದರ ಹಿಂದಿತ್ತು ದೊಡ್ಡ ಉದ್ದೇಶ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಸರ್ವವಿಧದಲ್ಲೂ ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟ ಅಥವಾ ವ್ಯಕ್ತಿತ್ವ ಎಂದು ಕರೆಯಬಹುದಾಗಿತ್ತು. ಒಬ್ಬ ನಟನಾಗಿ ಡ್ಯಾನ್ಸ್ ಸಾಹಸ ಡೈಲಾಗ್ ಡೆಲಿವರಿ ಮುಖಭಾವ ಗಳನ್ನು ನಿರ್ದೇಶಕರು ಆಸೆಯಂತೆ ನಿರ್ವಹಿಸುತ್ತಿದ್ದರು.

ಹೊಸ ಹೊಸ ಪ್ರತಿಭೆಗಳಿಗೆ ಅವರ ಕನಸುಗಳನ್ನು ಪೂರೈಸುವ ಅವರ ಪ್ರತಿಭೆಗಳಿಗೆ ಒಂದು ಒಳ್ಳೆ ವೇದಿಕೆ ನೀಡುವ ನಿರ್ಮಾಪಕನಾಗಿ, ಹಲವಾರು ಹಾಡುಗಳಿಗೆ ಧ್ವನಿಯಾಗಿ ಕನ್ನಡ ಕಿರುತೆರೆಯಲ್ಲಿ ನಿರೂಪಕರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಅವರಿಗೆ ಪ್ರಾಬಲ್ಯದ ಹಿಡಿತವಿತ್ತು. ಇನ್ನು ಸಂಗೀತದ ಕುರಿತಂತೆ ಕೂಡ ಅವರಿಗೆ ಸಾಕಷ್ಟು ಹೊಲವಿತ್ತು ಮೊದಲು ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ತಿಳಿಯುತ್ತದೆ. ಇಂದಿನ ವಿಚಾರದಲ್ಲಿ ನಾವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೊಬೈಲ್ ರಿಂಗ್ಟೋನ್ ಯಾವುದು ಎಂಬುದರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.
ನೀವು 2015 ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದ್ದಂತಹ ಜನಪ್ರಿಯ ವೆಬ್ ಸೀರೀಸ್ ನಾರ್ಕೋಸ್ ಬಗ್ಗೆ ಕೇಳಿರಬಹುದು. ಕೊಲಂಬಿಯಾದ ಭೂಗತ ದೊರೆ ಪ್ಯಾಬ್ಲೋ ಎಸ್ಕೋಬಾರ್ ಜೀವನಾಧಾರಿತ ನಾರ್ಕೋಸ್ ವೆಬ್ ಸೀರಿಸ್ ನ ಥೀಮ್ ಸಾಂಗ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಮ್ಮ ಫೋನ್ ಗೆ ರಿಂಗ್ ಟೋನ್ ಆಗಿ ಇಟ್ಟುಕೊಂಡಿದ್ದರು. ಅದೇ ಮಾದರಿಯ ವೆಬ್ ಸೀರಿಸ್ ಗಳನ್ನು ಕೂಡ ಕನ್ನಡದಲ್ಲಿ ಜಾಗತಿಕ ಮಟ್ಟದಲ್ಲಿ ನಿರ್ಮಾಣ ಮಾಡುವ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕನಸು ಕಂಡಿದ್ದರು ಆದರೆ ಆ ಕನಸನ್ನು ನನಸು ಮಾಡುವ ಮೊದಲ ಪುನೀತ್ ರಾಜಕುಮಾರ್ ಅವರು ಬಾರದ ಲೋಕದತ್ತ ಹೋಗಿದ್ದಾರೆ. ಈ ಕುರಿತಂತೆ ನಟ ಹಾಗೂ ನಿರೂಪಕ ಆಗಿರುವ ದ್ಯಾನೀಷ್ ಸೇಠ್ ಅವರ ಬಳಿ ಪುನೀತ್ ರಾಜಕುಮಾರ್ ರವರು ಹೇಳಿದ್ದರಂತೆ.